ಬೆಳಗಾಯಿತು ವಾರ್ತೆ
ಶಿವಮೊಗ್ಗ: ರಾಜ್ಯದ ರೈಲ್ವೆ ಕ್ಷೇತ್ರದ ಸಮಗ್ರ ವಿಕಾಸ ಹಾಗೂ ಕರಾವಳಿ-ಮಲೆನಾಡು ಭಾಗದ ಸಂರ್ಕವನ್ನು ಮತ್ತಷ್ಟು ಕವಲುಗೊಳಿಸುವ ನಿಟ್ಟಿನಲ್ಲಿ ಕೇಂದ್ರ ರ್ಕಾರ ಐತಿಹಾಸಿಕ ನರ್ಧಾರ ಕೈಗೊಂಡಿದೆ. ಕೊಂಕಣ ರೈಲ್ವೆಯ ಮುಂದುವರಿದ ಅಭಿವೃದ್ಧಿ ಕಾಮಗಾರಿಗಳು ಹಾಗೂ ರಾಜ್ಯದ ಇತರ ರೈಲ್ವೆ ಯೋಜನೆಗಳ ಪ್ರಗತಿಗಾಗಿ ಬರೋಬ್ಬರಿ 9,000 ಕೋಟಿ ರೂಪಾಯಿ ಅನುದಾನವನ್ನು ಮಂಜೂರು ಮಾಡಲಾಗಿದೆ ಎಂದು ರೈಲ್ವೆ ಮತ್ತು ಜಲಶಕ್ತಿ ರಾಜ್ಯ ಸಚಿವ ವಿ. ಸೋಮಣ್ಣ ತಿಳಿಸಿದ್ದಾರೆ.
ಮೂಲಸೌರ್ಯ ವೃದ್ಧಿಗೆ ಹೆಚ್ಚಿನ ಆದ್ಯತೆ
ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸೋಮಣ್ಣ, ರಾಜ್ಯದಲ್ಲಿ ಪ್ರಸ್ತುತ ಸುಮಾರು 52,000 ಕೋಟಿ ರೂ. ವೆಚ್ಚದಲ್ಲಿ ವಿವಿಧ ರೈಲ್ವೆ ಅಭಿವೃದ್ಧಿ ಕಾಮಗಾರಿಗಳು ಚಾಲ್ತಿಯಲ್ಲಿವೆ ಎಂದು ಮಾಹಿತಿ ನೀಡಿದರು. ಮಲೆನಾಡು ಹಾಗೂ ಕರಾವಳಿ ಭಾಗದ ರೈಲು ಪ್ರಯಾಣಿಕರ ಬಹುಕಾಲದ ಬೇಡಿಕೆಗಳಿಗೆ ಸ್ಪಂದಿಸಿರುವ ಕೇಂದ್ರ ರ್ಕಾರ, ಮೂಲಸೌರ್ಯ ವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಿದೆ. ದಶಕಗಳಿಂದ ನನೆಗುದಿಗೆ ಬಿದ್ದಿರುವ ಮತ್ತು ಪ್ರಗತಿಯಲ್ಲಿರುವ ಯೋಜನೆಗಳನ್ನು ತ್ವರಿತವಾಗಿ ಪರ್ಣಗೊಳಿಸಲು ಸ್ಪಷ್ಟ ರೂಪುರೇಷೆ ಸಿದ್ಧಪಡಿಸಲಾಗಿದೆ ಎಂದರು.
ಮುಂಬರುವ ಎರಡು ತಿಂಗಳ ಒಳಗಾಗಿ ಹೊಸದಾಗಿ ಟೆಂಡರ್
ಇದೇ ವೇಳೆ, ಶಿವಮೊಗ್ಗ-ಶಿಕಾರಿಪುರ-ರಾಣೆಬೆನ್ನೂರು ರೈಲ್ವೆ ಯೋಜನೆಗೆ ಸಂಬಂಧಿಸಿದಂತೆ ಪ್ರಮುಖ ಘೋಷಣೆ ಮಾಡಿರುವ ಸಚಿವರು, ಈ ಹಿಂದಿನ ಗುತ್ತಿಗೆದಾರರ ಲೋಪ ಹಾಗೂ ವಿಳಂಬ ಧೋರಣೆಯಿಂದಾಗಿ ಹಳೆಯ ಟೆಂಡರ್ ಅನ್ನು ರದ್ದುಪಡಿಸಿ ಕಪ್ಪುಪಟ್ಟಿಗೆ ಸೇರಿಸಲು ನರ್ಧರಿಸಲಾಗಿದೆ ಎಂದು ತಿಳಿಸಿದರು. ಮುಂಬರುವ ಎರಡು ತಿಂಗಳ ಒಳಗಾಗಿ ಹೊಸದಾಗಿ ಟೆಂಡರ್ ಕರೆಯಲಾಗುವುದು ಹಾಗೂ ಕಾಮಗಾರಿಗಳಿಗೆ ವೇಗ ನೀಡಲಾಗುವುದು ಎಂದು ಭರವಸೆ ನೀಡಿದರು.
ಶೃಂಗೇರಿ ಮರ್ಗದ ಹೊಸ ರೈಲು ಪ್ರಸ್ತಾವನೆಗಳ ಕುರಿತು ರ್ಚೆ
ಜೊತೆಗೆ, ಶಿವಮೊಗ್ಗ-ಬೀರೂರು ಮರ್ಗದ ದ್ವಿಗುಣೀಕರಣ ಕರ್ಯವು ಪ್ರಸ್ತುತ ರ್ವೆ ಹಂತದಲ್ಲಿದೆ. ಇದರೊಂದಿಗೆ ಮಹತ್ವಾಕಾಂಕ್ಷೆಯ ತಾಳಗುಪ್ಪ-ಹೊನ್ನಾವರ ಹೊಸ ರೈಲು ಮರ್ಗ ನರ್ಮಾಣಕ್ಕೆ ಈಗಾಗಲೇ 1,511 ಕೋಟಿ ರೂ. ಅಂದಾಜು ವೆಚ್ಚ ನಿಗದಪಡಿಸಲಾಗಿದೆ. ಮಂಗಳೂರು, ಉಡುಪಿ ಹಾಗೂ ಶಿವಮೊಗ್ಗ ಭಾಗದ ರೈಲು ಸಂರ್ಕ ಜಾಲವನ್ನು ವಿಸ್ತರಿಸಲು ಹಾಗೂ ಶೃಂಗೇರಿ ಮರ್ಗದ ಹೊಸ ರೈಲು ಪ್ರಸ್ತಾವನೆಗಳ ಕುರಿತು ರ್ಚೆ ನಡೆದಿದ್ದು, ಮುಂದಿನ ದಿನಗಳಲ್ಲಿ ಕರಾವಳಿ ಮತ್ತು ಮಲೆನಾಡಿನ ರೈಲ್ವೆ ಮುಖಚಿತ್ರ ಸಂಪರ್ಣ ಬದಲಾಗಲಿದೆ ಎಂದು ವಿ. ಸೋಮಣ್ಣ ವಿಶ್ವಾಸ ವ್ಯಕ್ತಪಡಿಸಿದರು.





