37.1 C
Bellary
Thursday, April 11, 2024

Localpin

spot_img

ಆರ್​ಸಿಬಿ ಬೌಲಿಂಗ್​ಗೆ ಸ್ಪೋಟಕ ವೇಗಿ ಎಂಟ್ರಿ

ಬೆಳಗಾಯಿತು ವಾರ್ತೆ |www.belagayithu.in
IPL 2024: ಆರ್​ಸಿಬಿ ತಂಡದ ಇಂಗ್ಲಿಷ್ ಆಲ್ ರೌಂಡರ್ ಟಾಮ್ ಕರನ್ ಗಾಯಗೊಂಡಿದ್ದಾರೆ. ಇದೀಗ ಐಪಿಎಲ್​ಗೆ ಇವರ ಲಭ್ಯತೆ ಬಗ್ಗೆ ಗೊಂದಲವಿದೆ. ಹೀಗಿರುವಾಗ ಆರ್​ಸಿಬಿ ತಂಡ ಇಂಗ್ಲೆಂಡ್ ಘಾತಕ ವೇಗಿ ಜೋಫ್ರಾ ಆರ್ಚರ್‌ಗೆ ಸಹಿ ಹಾಕಲು ಮುಂದಾಗಿದೆ ಎಂದು ಹೇಳಲಾಗಿದೆ.
ಆರ್​ಸಿಬಿ ತಂಡದ ಇಂಗ್ಲಿಷ್ ಆಲ್ ರೌಂಡರ್ ಟಾಮ್ ಕರನ್ ಗಾಯಗೊಂಡಿದ್ದಾರೆ. ಜನವರಿಯಲ್ಲಿ ನಡೆದ ಬಿಗ್ ಬ್ಯಾಷ್ ಲೀಗ್‌ನಲ್ಲಿ ಟಾಮ್ ಇಂಜುರಿಗೆ ತುತ್ತಾಗಿದ್ದರು. ಇದೀಗ ಐಪಿಎಲ್​ಗೆ ಇವರ ಲಭ್ಯತೆ ಬಗ್ಗೆ ಗೊಂದಲವಿದೆ. ಹೀಗಿರುವಾಗ ಆರ್​ಸಿಬಿ ಮತ್ತೊಬ್ಬ ಮಾರಕ ವೇಗಿಯನ್ನು ಕರೆತರಲು ಮುಂದಾಗಿದೆ ಎಂದು ಹೇಳಲಾಗಿದೆ.
ಫಾಫ್ ಡುಪ್ಲೆಸಿಸ್ ನಾಯಕತ್ವದ ಆರ್‌ಸಿಬಿ ತಂಡ ಇಂಗ್ಲೆಂಡ್ ಘಾತಕ ವೇಗಿ ಜೋಫ್ರಾ ಆರ್ಚರ್‌ಗೆ ಸಹಿ ಹಾಕಲು ಮುಂದಾಗಿದೆ ಎಂದು ಹೇಳಲಾಗಿದೆ. ಜೋಫ್ರಾ ಆರ್ಚರ್ ಕಳೆದ 3 ವರ್ಷಗಳಿಂದ ಐಪಿಎಲ್ ಆಡಿಲ್ಲ. ಸತತವಾಗಿ ಗಾಯಗಳಿಂದ ಬಳಲುತ್ತಿದ್ದಾರೆ. ಆದರೀಗ ಆರ್ಚರ್ ಭಾರತದಲ್ಲಿದ್ದಾರೆ. ಅದುಕೂಡ ಬೆಂಗಳೂರಿನಲ್ಲಿ.

Related Articles

Stay Connected

53,222FansLike
67,874FollowersFollow
12,303FollowersFollow
105,423SubscribersSubscribe
- Advertisement -spot_img

Latest Articles