2026ರ Tata IPL 2026 ಪಂದ್ಯಾವಳಿ ಶನಿವಾರದಿಂದ ಭರ್ಜರಿಯಾಗಿ ಆರಂಭಗೊಂಡಿದೆ. ಮೊದಲ ದಿನದ ಉದ್ಘಾಟನಾ ಪಂದ್ಯದಲ್ಲಿ Royal Challengers Bangalore (ಆರ್ ಸಿಬಿ) ಮತ್ತು Sunrisers Hyderabad (ಎಸ್ ಆರ್ ಹೆಚ್) ತಂಡಗಳು ಮುಖಾಮುಖಿಯಾಗಿವೆ.
ಪಂದ್ಯದ ಟಾಸ್ ಗೆದ್ದ ಆರ್ ಸಿಬಿ ತಂಡವು ಮೊದಲು ಬಾಲಿಂಗ್ ಮಾಡಲು ತೀರ್ಮಾನಿಸಿದೆ. ಈ ಮೂಲಕ ಎಸ್ ಆರ್ ಹೆಚ್ ತಂಡವು ಮೊದಲು ಬ್ಯಾಟಿಂಗ್ ಆರಂಭಿಸಲಿದೆ.
ಐಪಿಎಲ್ 2026ರ ಆರಂಭವೇ ಕ್ರಿಕೆಟ್ ಅಭಿಮಾನಿಗಳಲ್ಲಿ ಉತ್ಸಾಹ ಹೆಚ್ಚಿಸಿದ್ದು, ಮೊದಲ ಪಂದ್ಯವೇ ಕಠಿಣ ಪೈಪೋಟಿಗೆ ವೇದಿಕೆ ಸಿದ್ಧವಾಗಿದೆ. ಮುಂದಿನ ಕ್ಷಣಗಳಲ್ಲಿ ಎರಡೂ ತಂಡಗಳ ಆಟ ಹೇಗೆ ರೂಪುಗೊಳ್ಳುತ್ತದೆ ಎಂಬುದು ಕಾದು ನೋಡಬೇಕಾಗಿದೆ.





