ಬೆಳಗಾಯಿತು ವಾರ್ತೆ |www.belagayithu.in
ಬಳ್ಳಾರಿ: ಗಣಿನಾಡು ಬಳ್ಳಾರಿಯಲ್ಲಿ ಬಿಸಿಲು ಹೆಚ್ಚು ಇರುವುದರಿಂದ ಪ್ರಾಣಿ, ಪಕ್ಷಿಗಳು ಅರಣ್ಯದಿಂದ ನಾಡಿನ ಕಡೆ ಲಗ್ಗೆ ಇಡುತ್ತಿವೆ. ಅರಣ್ಯದಲ್ಲಿ ಆಹಾರ ಸಿಗದೆ ಇರುವುದು ಮತ್ತು ಹೆಚ್ಚು ಉಷ್ಣಾಂಶ ಇರುವುದರಿಂದ ತಂಪು ಪ್ರದೇಶದಕಡೆ ಅವು ಧಾವಿಸುತ್ತವೆ. ಅಂತಹ ಸಂದರ್ಭದಲ್ಲಿ ಪ್ರಾಣಿಗಳಿಗೆ ತೂಂದರೆ ಕೊಡದೆ ಪ್ರಾಣಿ ಸಂರಕ್ಷಣಾ ಸಂಘ, ಸಂಸ್ಥೆ ಅಥವಾ ಅರಣ್ಯ ಇಲಾಖೆಗಳಿಗೆ ಸಂಪರ್ಕ ಮಾಡಿ ಎಂದು ಹಾವು ಮತ್ತು ವನ್ಯ ಜೀವಿ ಸಂರಕ್ಷಣಾ ವೇದಿಕೆಯ ಅಧ್ಯಕ್ಷ ಅಧ್ಯಕ್ಷರು ಸಮ್ಮಿರ್ ಶೇಟ್ ಅವರು ಹೇಳಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಇರುವ ಪತ್ರಿಕಾಭವನದಲ್ಲಿ ಶನಿವಾರ ಆಯೋಜನೆ ಮಾಡಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ಹಾವುಗಳು ಹೆಚ್ಚು ತಂಪು ಪ್ರದೇಶಗಳಲ್ಲಿ ವಾಸ ಮಾಡಲು ಬಯಸುತ್ತದೆ. ಹಾಗಾಗಿ ಮನೆಗಳಲ್ಲಿ ಮತ್ತು ಮನೆಯ ಸುತ್ತ ಮುತ್ತ ತಂಪು ಇರುವ ಕಡೆ ವಾಸ ಮಾಡುತ್ತವೆ. ಹಾಗಾಗಿ ಮನೆಯ ಕಡೆ ಕಂಡ ಹಾವುಗಳನ್ನು ಸಾಯಿಸದೆ ನಮ್ಮ ಸಂಸ್ಥೆಯವರಿಗೆ ಮಾಹಿತಿ ನೀಡಿ. ಹಾವುಗಳ ಸಂತತಿ ಕಡಿಮೆಯಾದರೆ ಇಲಿಗಳು ಹೆಚ್ಚಾಗುತ್ತವೆ. ಇಲಿಗಳಿಂದ ಹಲವಾರು ರೀತಿಯಲ್ಲಿ ರೋಗಗಳು ಹರಡುತ್ತದೆ. ಆದರೆ ಹಾವುಗಳು ಹೆಚ್ಚಾದರೆ ಇಲಿಗಳನ್ನು ಹಾವುಗಳು ತಿನ್ನುತ್ತವೆ. ಇದರಿಂದ ಇಲಿಗಳ ಸಂಖ್ಯೆ ಕಡಿಮೆಯಾಗುತ್ತದೆ. ಮತ್ತು ಯಾವುದೇ ರೋಗಗಳು ಹರಡುವುದಿಲ್ಲ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷ ಶೀರಾ ಹತ್ತುರ್, ಕಾರ್ಯದರ್ಶೀ ತಾಹೇರ್ ಶೇಟ್, ಕಂಜಾಂಚಿ ರಾಹೀಬಾ ಶೇಟ್, ಸದಸ್ಯರಾದ ಇಸ್ರಾ ಕೌಸರ್ ಶೇಟ್, ಆರ್‌ಪಿ ಅಸ್ಲಂ, ಬಾಬು ಹಾಜರಿದ್ದರು.
ವಿಷಪೂರಿತ ಹಾವುಗಳು: ಕಾಳಿಂಗ ಸರ್ಪ, ನಾಗರ ಹಾವು, ಕೊಳಕ ಮಂಡಲ, ರಕ್ತ ಮಂಡಲ, ಕಂಕಣ ಹಾವು, ಬೆಕ್ಕು ಹಾವು, ಹಸಿರು ಹಾವು, ಕಂಚ ಹಾವು.
ವಿಷ ಇಲ್ಲದಿರುವ ಹಾವುಗಳು: ಕೆಂಪು ಮಣ್ಣುಮುಗ್ಗ ಹಾವು, ಆಭರಣದ ಹಾವು, ಹೆಬ್ಬಾವು, ಕುಕ್ರಿ ಹಾವು, ಕೆರೆ ಹಾವು, ರಾಮ ಬಾಣದ ಹಾವು, ತೋಳದ ಹಾವು, ಸಾಮಾನ್ಯ ಮಣ್ಣುಮುಗ್ಗ ಹಾವು