ಬೆಳಗಾಯಿತು ವಾರ್ತೆ
ಕಲಬುರಗಿ: ಈಶಾನ್ಯ ಶಿಕ್ಷಕರ ಕ್ಷೇತ್ರದ ಚುನಾವಣೆ ಹಿನ್ನೆಲೆಯಲ್ಲಿ ಚುನಾವಣಾ ವೀಕ್ಷಕರಾಗಿ ಐ.ಎ.ಎಸ್. ಅಧಿಕಾರಿ ಕೆ.ಬಿ ಶಿವಕುಮಾರ ಅವರನ್ನು ನೇಮಿಸಿ ಭಾರತ ಚುನಾವಣಾ ಆಯೋಗವು ಆದೇಶಿಸಿದೆ.
ಚುನಾವಣಾ ವೀಕ್ಷಕರು ಕಲಬುರಗಿಯ ಹಳೇ ಐವಾನ್-ಎ-ಶಾಹಿ ಅತಿಥಿಗೃಹದ ಕೋಣೆ ಸಂಖ್ಯೆ 4ರಲ್ಲಿ ತಂಗಿದ್ದು, ಚುನಾವಣಾ ಸಂಬಂಧಿಸಿದ ಮಾದರಿ ನೀತಿ ಸಂಹಿತೆ ಮತ್ತು ಮಾರ್ಗಸೂಚಿ ಉಲ್ಲಂಘನೆಗೆ ಸಂಬಂಧಿಸಿದಂತೆ ವೀಕ್ಷಕರಿಗೆ ಸಾರ್ವಜನಿಕರು, ರಾಜಕೀಯ ಪಕ್ಷಗಳು ದೂರು ಸಲ್ಲಿಸಬಹುದಾಗಿದೆ
ದೂರು ಲಿಖಿತವಾಗಿ ಸಲ್ಲಿಸಬೇಕಿದಲ್ಲಿ ಶ್ರೀ ಶಿವಕುಮಾರ ಕೆ.ಬಿ., ಚುನಾವಣಾ ವೀಕ್ಷಕರು, ಕೋಣೆ ಸಂ.4, ಹಳೇ ಐವಾನ್-ಎ-ಶಾಹಿ ಅತಿಥಿಗೃಹ, ಕಲಬುರಗಿ-585102 ವಿಳಾಸಕ್ಕೆ ಅಥವಾ ದೂ.ಸಂ.08472-200849 ಗೆ ಸಂಪರ್ಕಿಸಿ ದೂರು ನೀಡಬಹುದಾಗಿದೆ ಎಂದು ಕ್ಷೇತ್ರದ ಚುನಾವಣಾಧಿಕಾರಿಯಾಗಿರುವ ಕಲಬುರಗಿ ವಿಭಾಗದ ಪ್ರಾದೇಶಿಕ ಅಯುಕ್ತರಾದ ಜಹೀರಾ ನಸೀಮ್ ತಿಳಿಸಿದ್ದಾರೆ.
ಇನ್ನು ಚುನಾವಣಾ ವೀಕ್ಷಕರ ಸಂಪರ್ಕ ಅಧಿಕಾರಿಯಾಗಿ ಕೆ.ಕೆ.ಆರ್.ಟಿ.ಸಿ ಕಲಬುರಗಿ ವಿಭಾಗ-1ರ ವಿಭಾಗೀಯ ನಿಯಂತ್ರಣಾಧಿಕಾರಿ ಎಸ್.ಜಿ.ಗಂಗಾಧರ-7760992100 ಅವರನ್ನು ನೇಮಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.





