ಬೆಳಗಾಯಿತು ವಾರ್ತೆ|www.belagayithu.in
ಜೈಪುರ: ರಾಜಸ್ಥಾನದ ಸಲೂಂಭರ್ ಜಿಲ್ಲೆಯಲ್ಲಿ ನಿಗೂಢ ಕಾಯಿಲೆಯಿಂದ ಕಳೆದ ಐದು ದಿನಗಳಲ್ಲಿ ಐದು ಮಕ್ಕಳು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.
ಲಾಲ್‌ಪುರ ಗ್ರಾಮದ ದೀಪಕ್ (4), ಆತನ ಸಹೋದರ ಲಕ್ಷ್ಮಣ್ (3), ಸೀಮಾ (4), ಘಾಟಾ ಗ್ರಾಮದ ರಾಹುಲ್ (4) ಹಾಗೂ ಕಾಜಲ್ (2) ಮೃತರು.
ಜ್ವರ ಮತ್ತು ವಾಂತಿ ಕಂಡುಬಂದ 24 ಗಂಟೆಗಳಲ್ಲಿಯೇ ಮಕ್ಕಳು ಮೃತಪಟ್ಟಿದ್ದಾರೆ. ಸಲೂಂಭರ್ ಮತ್ತು ಉದಯಪುರ ಜಿಲ್ಲಾಸ್ಪತ್ರೆಯಲ್ಲಿ ಇನ್ನೂ 8 ಮಕ್ಕಳು ಚಿಕಿತ್ಸೆ ಪಡೆಯುತ್ತಿದ್ದಾರೆ. ರಕ್ತದ ಮಾದರಿಯನ್ನು ಸಂಗ್ರಹಿಸಿ, ಪರೀಕ್ಷೆಗೆ ಕಳುಹಿಸಲಾಗಿದೆ. ವರದಿ ಬಂದ ಬಳಿಕ ಕಾಯಿಲೆ ಯಾವುದೆಂದು ತಿಳಿಯುತ್ತದೆ ಎಂದೂ ಅಧಿಕಾರಿಗಳು ತಿಳಿಸಿದ್ದಾರೆ.





