ಬಳ್ಳಾರಿ: ನಗರದ ವಿಮ್ಸ್ ಮೈದಾನದಲ್ಲಿ ಶುಕ್ರವಾರ ಅಭಯ ಫೌಂಡೇಶನ್ ವತಿಯಿಂದ ಆಯೋಜಿಸಲಾಗಿದ್ದ ಜಿಸಿಎಸ್ ಡೆವೆಲಪರ್ಸ್ ಅಭಯ ಕಪ್ ಎಸಿಎಲ್ 4 ಕ್ರಿಕೆಟ್ ಟೂರ್ನಮೆಂಟ್ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ಚಾಲನೆ ನೀಡಿದರು.
ನಗರದ ವಿಮ್ಸ್ ಮೈದಾನದಲ್ಲಿ ಅಭಯ ಫೌಂಡೇಶನ್ ವತಿಯಿಂದ ಜಿಸಿಎಸ್ ಡೆವೆಲಪರ್ಸ್ ಅಭಯ ಕಪ್ ಕ್ರಿಕೇಟ್ ಟೂರ್ನಮೆಂಟ್ ಎಸಿಎಲ್ 4 ಆರಂಭಿಸಲಾಗಿದ್ದು, ಮೂರು ದಿನಗಳ ಕಾಲ ಈ ಕ್ರಿಕೆಟ್ ಟೂರ್ನಮೆಂಟ್ ನಡೆಯಲಿದೆ. ಇದರಲ್ಲಿ ಸುಮಾರು 30 ತಂಡಗಳು ಭಾಗವಹಿಸಿದ್ದು ಎಲ್ಲಾರಿಗೂ ಶುಭ ಹಾರೈಸುತ್ತೇನೆ ಎಂದರು.
ಎಸ್ಪಿ ರಂಜಿತ್ ಕುಮಾರ್ ಭಂಡಾರು ಅವರು ಮಾತನಾಡಿ ಅಭಯ ಫೌಂಡೇಶನ್ ವತಿಯಿಂದ ಕ್ರಿಕೆಟ್ ಟೂರ್ನಮೆಂಟ್ ಹಮ್ಮಿಕೊಳ್ಳಲಾಗುತ್ತಿದೆ. ಸುಮಾರು 30 ತಂಡಗಳು ಭಾಗವಹಿಸಿದ್ದು ಎಲ್ಲಾ ತಂಡಗಳಿಗೆ ಶುಭವಾಗಲಿ ಎಂದರು.
ಅಭಯ ಫೌಂಡೇಶನ್ ಅಧ್ಯಕ್ಷರಾದ ರಾಮಕೃಷ್ಣ ರೇಣುಗುಂಟ್ಲ ಅವರು ಮಾತನಾಡಿ ಅಭಯ ಫೌಂಡೇಶನ್ ವತಿಯಿಂದ ಹೊಸ ವರ್ಷ ಮತ್ತು ಸಂಕ್ರಾಂತಿ ಹಬ್ಬದ ಪ್ರಯುಕ್ತ ಪ್ರತಿ ವರ್ಷ ಐಪಿಎಲ್ ಮಾದರಿಯಲ್ಲಿ ಕ್ರಿಕೆಟ್ ಟೂರ್ನಮೆಂಟ್ ಹಮ್ಮಿಕೊಳ್ಳಲಾಗುತ್ತಿದೆ ಹಾಗೂ ಅಭಯ ಫೌಂಡೇಶನ್ ವತಿಯಿಂದ ಹಲವಾರು ಸೇವಾ ಸಹ ಕಾರ್ಯಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿಟೂರ್ನಮೆಂಟ್ ಪ್ರಾಯೋಜಕರಾದ ಜಿ.ಸಿ.ಎಸ್ ಡೆವೆಲಪರ್ಸ್ ಕಂಪನಿಯ ಮಾಲೀಕರಾದ ಗೋಪಾಲ ರೆಡ್ಡಿ, ಸಹ ಪ್ರಾಯೋಜಕರಾದ ಸಂತೋಷ, ಅಭಯ ಫೌಂಡೇಶನ್ ಇತರ ಸದಸ್ಯರು ಹಾಗೂ ವಿವಿಧ ತಂಡಗಳ ಆಟಗಾರರು ಉಪಸ್ಥಿತರಿದ್ದರು.