ಎಸಿ ನೇತೃತ್ವದಲ್ಲಿ ವಿವಿಧ ಹೋಟೆಲ್ಗಳಲ್ಲಿ ತಪಾಸಣೆ
ಬೆಳಗಾಯಿತು ವಾರ್ತೆ
ಬಳ್ಳಾರಿ: ನಗರದ ವಿವಿಧ ಹೋಟೆಲ್ಗಳು ಹಾಗೂ ಆಹಾರ ಪದಾರ್ಥಗಳ ಮಾರಾಟ ಮಳಿಗೆಗಳ ಮೇಲೆ ಸಹಾಯಕ ಆಯುಕ್ತರು (ಎಸಿ) ಮತ್ತು ಆಹಾರ ಇಲಾಖೆಯ ಅಧಿಕಾರಿಗಳ ತಂಡ ದಿಢೀರ್ ತಪಾಸಣೆ ನಡೆಸಿದೆ.
ಅ.30ರಂದು ಬೆಳಿಗ್ಗೆ ನಗರದ ದಾವಣಗೆರೆ ಬೆಣ್ಣೆ ದೋಸೆ ಹೋಟೆಲ್ ಹಾಗೂ ರೇಣುಕಾ ಹೋಟೆಲ್ (ವೈಶಾಲಿ ಹೋಟೆಲ್ ಪಕ್ಕ) ಸೇರಿದಂತೆ ಕೆಲವು ಹೋಟೆಲ್ಗಳಲ್ಲಿ ಅಧಿಕಾರಿಗಳ ತಂಡ ದಾಳಿ ನಡೆಸಿ ಪರಿಶೀಲನೆ ಕೈಗೊಂಡಿದೆ.
ಹೋಟೆಲ್ಗಳಲ್ಲಿ ಆಹಾರದ ಗುಣಮಟ್ಟ, ಸ್ವಚ್ಛತೆ ಹಾಗೂ ಆಹಾರ ಸುರಕ್ಷತಾ ನಿಯಮಗಳ ಪಾಲನೆ ಕುರಿತು ತಪಾಸಣೆ ನಡೆಸಲಾಗಿದೆ ಎಂದು ತಿಳಿದುಬಂದಿದೆ.





