ಬಳ್ಳಾರಿಯಲ್ಲಿ ಪರವಾನಗಿ ಇಲ್ಲದೆ ರಸಗೊಬ್ಬರ ಮಾರಾಟ: ₹61.20 ಲಕ್ಷ ಮೌಲ್ಯದ ದಾಸ್ತಾನು ಜಪ್ತಿ

ಬೆಳಗಾಯಿತು ವಾರ್ತೆ
ಬಳ್ಳಾರಿ: ಬಳ್ಳಾರಿ ನಗರದ ಮಂಜುಶ್ರೀ ಮಾರ್ಕೆಟಿಂಗ್ ಮಳಿಗೆಯಲ್ಲಿ ಮಾನ್ಯ ರಸಗೊಬ್ಬರ ಪರವಾನಗಿ ಇಲ್ಲದೆ ಸಾವಯವ ಗೊಬ್ಬರ ಮತ್ತು ಜೈವಿಕ ಉತ್ತೇಜಕಗಳನ್ನು ಮಾರಾಟ ಮಾಡುತ್ತಿರುವುದು ಪತ್ತೆಯಾಗಿದ್ದು, ಅಧಿಕಾರಿಗಳು ₹61.20 ಲಕ್ಷ ಮೌಲ್ಯದ ದಾಸ್ತಾನನ್ನು ಜಪ್ತಿ ಮಾಡಿದ್ದಾರೆ.
ಅ.13ರಂದು ಕೃಷಿ ಇಲಾಖೆಯ ಜಾಗೃತ ದಳದ ಸಹಾಯಕ ನಿರ್ದೇಶಕರು, ಬಳ್ಳಾರಿ ಸಹಾಯಕ ಕೃಷಿ ನಿರ್ದೇಶಕರು ಹಾಗೂ ಸಿಬ್ಬಂದಿ ಜಂಟಿಯಾಗಿ ಮಂಜುಶ್ರೀ ಮಾರ್ಕೆಟಿಂಗ್ ಮಳಿಗೆಯ ಮೇಲೆ ತಪಾಸಣೆ ನಡೆಸಿದರು.
ಈ ವೇಳೆ, ಅಗತ್ಯ ರಸಗೊಬ್ಬರ ಪರವಾನಗಿ ಇಲ್ಲದೆ ಸಾವಯವ ಗೊಬ್ಬರ ಮತ್ತು ಜೈವಿಕ ಉತ್ತೇಜಕಗಳನ್ನು ಮಾರಾಟ ಮಾಡುತ್ತಿರುವುದು ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ಸ್ಥಳದಲ್ಲಿದ್ದ ದಾಸ್ತಾನನ್ನು ಜಪ್ತಿ ಮಾಡಿದ್ದಾರೆ.
ಜಪ್ತಿ ಮಾಡಲಾದ ಗೊಬ್ಬರ ಮತ್ತು ಜೈವಿಕ ಉತ್ತೇಜಕಗಳ ಒಟ್ಟು ಅಂದಾಜು ಮೌಲ್ಯ ₹61,20,000 ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೃಷಿ ಪರಿಕರಗಳ ಮಾರಾಟದಲ್ಲಿ ನಿಯಮ ಉಲ್ಲಂಘನೆ ತಡೆಯುವ ನಿಟ್ಟಿನಲ್ಲಿ ಕೃಷಿ ಇಲಾಖೆ ಅಧಿಕಾರಿಗಳು ಈ ಕ್ರಮ ಕೈಗೊಂಡಿದ್ದಾರೆ.


Related Articles

Stay Connected

53,222FansLike
67,874FollowersFollow
12,303FollowersFollow
105,423SubscribersSubscribe
- Advertisement -spot_img

Latest Articles