ಗ್ರಹಂ ರಸ್ತೆ–ಜುಮ್ಮಾ ಮಸೀದಿ ತಿರುವಿನಲ್ಲಿ ಅಪಾಯದ ಆತಂಕ; ಪಾಲಿಕೆ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸುವಂತೆ ಮನವಿ
ಬೆಳಗಾಯಿತು ವಾರ್ತೆ
ಬಳ್ಳಾರಿ: ನಗರದ ವಾರ್ಡ್ ಸಂಖ್ಯೆ 11ರ ಗ್ರಹಂ ರಸ್ತೆಯಿಂದ ಜುಮ್ಮಾ ಮಸೀದಿಗೆ ತೆರಳುವ ತಿರುವಿನ ವೃತ್ತದಲ್ಲಿರುವ ಡ್ರೈನೇಜ್ ಚೇಂಬರ್‌ನ ಮುಚ್ಚಳ ಮುರಿದು ತುಂಡಾಗಿದ್ದು, ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಹೀಗಾಗಿ ಕೂಡಲೇ ಹೊಸ ಮುಚ್ಚಳ ಅಳವಡಿಸಿ ಸಮಸ್ಯೆ ಬಗೆಹರಿಸಬೇಕೆಂದು ಮಹಾನಗರ ಪಾಲಿಕೆ ಆಯುಕ್ತರಿಗೆ ಸ್ಥಳೀಯ ನಿವಾಸಿ ಪಿ.ಎಂ. ನಟರಾಜ್ ಮನವಿ ಮಾಡಿದ್ದಾರೆ.
ಅಪಘಾತ ಸಂಭವಿಸುವ ಮುನ್ನ ಕ್ರಮ ಕೈಗೊಳ್ಳಲು ಆಗ್ರಹ
ಡ್ರೈನೇಜ್ ಚೇಂಬರ್‌ನ ಮುಚ್ಚಳವನ್ನು ತೆಗೆದು, ಮುರಿದು ತುಂಡಾದ ಮುಚ್ಚಳವನ್ನೇ ಇಟ್ಟಿರುವುದರಿಂದ ಅಪಾಯದ ಆತಂಕ ಎದುರಾಗಿದೆ. ಚೇಂಬರ್ ಸುತ್ತಲೂ ಸರಿಯಾಗಿ ಪ್ಲಾಸ್ಟರಿಂಗ್ ಮಾಡಿ, ಗಟ್ಟಿಯಾದ ಹಾಗೂ ಗುಣಮಟ್ಟದ ಹೊಸ ಮುಚ್ಚಳವನ್ನು ಅಳವಡಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ವಾರ್ಡ್‌ಗೆ ಸಂಬಂಧಿಸಿದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆಯನ್ನು ಪರಿಶೀಲಿಸಬೇಕು. ಸಾರ್ವಜನಿಕರ ಸುರಕ್ಷತೆಯ ದೃಷ್ಟಿಯಿಂದ ನಿರ್ಲಕ್ಷ್ಯ ಮಾಡದೆ ತಕ್ಷಣ ಅಗತ್ಯ ಕ್ರಮ ಕೈಗೊಂಡು ಸಮಸ್ಯೆ ಬಗೆಹರಿಸಬೇಕು ಎಂದು ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.





