ಬೆಳಗಾಯಿತು ವಾರ್ತೆ
ಬಳ್ಳಾರಿ: ರಾಜ್ಯ ಪೊಲೀಸ್ ನೇಮಕಾತಿ ವಿಭಾಗವು ಸಿವಿಲ್ ಪೊಲೀಸ್ ಕಾನ್‌ಸ್ಟೇಬಲ್ (ಆರ್‌ಪಿಸಿ ಮತ್ತು ಕೆಕೆ) ಹುದ್ದೆಗಳ ನೇಮಕಾತಿಗೆ ಸಂಬAಧಿಸಿದAತೆ ಅತ್ಯಂತ ಪ್ರಮುಖವಾದ ದೇಹದಾರ್ಡ್ಯ ಪರೀಕ್ಷೆ ಹಾಗೂ ಸಹಿಷ್ಣುತಾ ಪರೀಕ್ಷೆಯ ವೇಳಾಪಟ್ಟಿಯನ್ನು ಅಧಿಕೃತವಾಗಿ ಬಿಡುಗಡೆ ಮಾಡಿದೆ.
ಈ ಬೃಹತ್ ನೇಮಕಾತಿ ಅಭಿಯಾನದಡಿ ಒಟ್ಟು 3,991 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದ್ದು, ರಾಜ್ಯಾದ್ಯಂತ ವಿವಿಧ ಹಂತಗಳಲ್ಲಿ ಆಯ್ಕೆಯಾಗಿರುವ ಒಟ್ಟು 19,396 ಅರ್ಹ ಅಭ್ಯರ್ಥಿಗಳು ಈ ದೈಹಿಕ ಪರೀಕ್ಷೆಗಳಲ್ಲಿ ಭಾಗವಹಿಸಲಿದ್ದಾರೆ.
ಉಳಿಕೆ ಮೂಲ ವೃಂದದ ಒಟ್ಟು 3,395 ಹುದ್ದೆಗಳಿಗೆ 16,454 ಅಭ್ಯರ್ಥಿಗಳು ಪರೀಕ್ಷೆಗೆ ಅರ್ಹತೆ ಪಡೆದಿದ್ದರೆ, ಕಲ್ಯಾಣ ಕರ್ನಾಟಕ ವೃಂದದ 596 ಹುದ್ದೆಗಳಿಗೆ 2,942 ಅಭ್ಯರ್ಥಿಗಳು ದೈಹಿಕ ಪರೀಕ್ಷೆಗೆ ಆಯ್ಕೆಯಾಗಿದ್ದಾರೆ.
ಬಳ್ಳಾರಿ ವಲಯ: ಬಳ್ಳಾರಿ ಮತ್ತು ರಾಯಚೂರು ಘಟಕಗಳ 30 ಹುದ್ದೆಗಳಿಗೆ 144 ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಲಿದ್ದಾರೆ. ಇವರಿಗೆ ಪರೀಕ್ಷೆಯು 2026 ನೇ ಅಕ್ಟೋಬರ್ 05 ರಿಂದ ಅಕ್ಟೋಬರ್ 06 ರವರೆಗೆ ಕೊಪ್ಪಳದ ಮುನಿರಾಬಾದ್‌ನ ಹೊಸಹಳ್ಳಿ ಬಳಿಯಿರುವ ಕೆಎಸ್‌ಆರ್‌ಪಿ ಪಿ.ಟಿ.ಎಸ್. ಮೈದಾನದಲ್ಲಿ (ಐಆರ್‌ಬಿ ಕ್ಯಾಂಪಸ್) ನಡೆಯಲಿದೆ.
*ಕಲ್ಯಾಣ ಕರ್ನಾಟಕ ವೃಂದದ ಪರೀಕ್ಷಾ ವಿವರಗಳು:*
ಸಿಒಪಿ ಬೆಂಗಳೂರು ನಗರ: ಈ ಭಾಗದ 171 ಹುದ್ದೆಗಳಿಗೆ 833 ಅಭ್ಯರ್ಥಿಗಳು ಅರ್ಹರಾಗಲಿದ್ದು, 2026 ನೇ ಅಕ್ಟೋಬರ್ 08 ರಂದು ಬೆಂಗಳೂರಿನ ಚಾಮರಾಜಪೇಟೆಯ ಸಿಎಆರ್ ಪರೇಡ್ ಮೈದಾನ (ಹೆಚ್‌ಕ್ಯೂ) ಹಾಗೂ ಆಡುಗೋಡಿಯ ಸಿಎಆರ್ ಪರೇಡ್ ಮೈದಾನಗಳಲ್ಲಿ (ದಕ್ಷಿಣ) ಏಕಕಾಲದಲ್ಲಿ ದೈಹಿಕ ಪರೀಕ್ಷೆ ನಡೆಯಲಿದೆ.
ಬಳ್ಳಾರಿ ವಲಯ (ಕೆಕೆ ಘಟಕಗಳು): ಕೊಪ್ಪಳ, ರಾಯಚೂರು, ಬಳ್ಳಾರಿ ಹಾಗೂ ವಿಜಯನಗರ ಘಟಕಗಳ 174 ಹುದ್ದೆಗಳಿಗೆ 869 ಅಭ್ಯರ್ಥಿಗಳು ಅರ್ಹತೆ ಪಡೆದಿದ್ದಾರೆ. ಇವರಿಗೆ 2026ನೇ ಅಕ್ಟೋಬರ್ 12 ರಿಂದ 15 ರವರೆಗೆ ಕೊಪ್ಪಳದ ಮುನಿರಾಬಾದ್ ಹೊಸಹಳ್ಳಿಯಲ್ಲಿರುವ ಕೆಎಸ್‌ಆರ್‌ಪಿ ಪಿ.ಟಿ.ಎಸ್. ಮೈದಾನದಲ್ಲಿ ದೈಹಿಕ ಪರೀಕ್ಷೆ ನಡೆಸಲಾಗುವುದು.
ಈಶಾನ್ಯ ವಲಯ: ಕಲಬುರಗಿ ನಗರ, ಕಲಬುರಗಿ ಜಿಲ್ಲೆ ಹಾಗೂ ಬೀದರ್ ಘಟಕಗಳ 251 ಹುದ್ದೆಗಳಿಗೆ 1,240 ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ. ಇವರ ಪರೀಕ್ಷೆಯು 2026ನೇ ಅಕ್ಟೋಬರ್ 12 ರಿಂದ 14 ರವರೆಗೆ ಕಲಬುರಗಿಯ ತಾಜ್ ಸುಲ್ತಾನ್‌ಪುರದಲ್ಲಿರುವ 6ನೇ ಬೆಟಾಲಿಯನ್ ಕೆಎಸ್‌ಆರ್‌ಪಿ ಮೈದಾನದಲ್ಲಿ ನಡೆಯಲಿದೆ.
*ಅಭ್ಯರ್ಥಿಗಳಿಗೆ ಪ್ರಮುಖ ಸೂಚನೆ:*
ಪರೀಕ್ಷೆಗೆ ಅರ್ಹತೆ ಪಡೆದಿರುವ ಅಭ್ಯರ್ಥಿಗಳು ತಮ್ಮ ಕರೆ ಪತ್ರವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕೃತ ವೆಬ್‌ಸೈಟ್‌ನಿಂದ ಡೌನ್‌ಲೋಡ್ ಮಾಡಿಕೊಳ್ಳಬಹುದು. ಅರ್ಹ ಅಭ್ಯರ್ಥಿಗಳು ತಮಗೆ ನಿಗದಿಪಡಿಸಿದ ದಿನಾಂಕಗಳAದು ನಿಗದಿತ ದೈಹಿಕ ಪರೀಕ್ಷಾ ಕೇಂದ್ರಗಳಿಗೆ ಕಡ್ಡಾಯವಾಗಿ ವರದಿ ಮಾಡಬೇಕೆಂದು ಪೊಲೀಸ್ ನೇಮಕಾತಿ ವಿಭಾಗವು ಸ್ಪಷ್ಟಪಡಿಸಿದೆ.





