ಸಿಮೆಂಟ್ ಬೆಳ್ಳುಳ್ಳಿ ಹಾವಳಿ

ಬೆಳಗಾಯಿತು ವಾರ್ತೆ |www.bealagayithu.in
ನಕಲಿ ಉತ್ಪನ್ನಗಳ ಹಾವಳಿ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದ್ದು, ಆಹಾರ ಪದಾರ್ಥಗಳ ಕಲಬೆರಕೆ ಮತ್ತು ನಕಲಿ ಆಹಾರಗಳ ಮಾರಾಟ ಎಗ್ಗಿಲ್ಲದೆ ನಡೆಯುತ್ತಿದೆ. ಈ ಹಿಂದೆ ಪ್ಲಾಸ್ಟಿಕ್ ಮೊಟ್ಟೆ, ಪ್ಲಾಸ್ಟಿಕ್ ಅಕ್ಕಿ, ನಕಲಿ ಪನೀರ್, ನಕಲಿ ಅಡುಗೆ ಎಣ್ಣೆ, ನಕಲಿ ದವಸ ಧಾನ್ಯಗಳ ಹಾವಳಿ ಹೆಚ್ಚಾಗಿತ್ತು. ಇದೀಗ ಬೆಳ್ಳುಳ್ಳಿಯ ಸರದಿ. ಮಾರುಕಟ್ಟೆಗೆ ಈಗ ಈ ಸಿಮೆಂಟ್ ಬೆಳ್ಳುಳ್ಳಿ ಲಗ್ಗೆ ಇಟ್ಟಿದು, ನೋಡಲು ನಿಜವಾದ ಬೆಳ್ಳುಳ್ಳಿಯಂತೆ ಕಾಣುವ ಈ ನಕಲು ಉತ್ಪನ್ನವನ್ನು ಕಂಡು ನೋಡುಗರು ಫುಲ್ ಶಾಕ್ ಆಗಿದ್ದಾರೆ.
ದೇಶಾದ್ಯಂತ ಬೆಳ್ಳುಳ್ಳಿ ಬೆಲೆ ಗಗನಕ್ಕೇರುತ್ತಿದ್ದಂತೆ, ವ್ಯಾಪಾರಿಗಳು ಅಮಾಯಕ ನಾಗರಿಕರನ್ನು ವಂಚಿಸಿ ನಕಲಿ ಬೆಳ್ಳುಳ್ಳಿ ಮಾರಾಟ ಮಾಡಲು ಪ್ರಾರಂಭಿಸಿದ್ದಾರೆ. ಮಾರುಕಟ್ಟೆಗಳಲ್ಲಂತೂ ಈ ನಕಲಿ ಬೆಳ್ಳುಳ್ಳಿ ಹಾವಳಿ ತೀರಾ ಹೆಚ್ಚಾಗುತ್ತಿದೆ. ಮಹಾರಾಷ್ಟ್ರದ ಅಕೋಲಾ ಜಿಲ್ಲೆಯಲ್ಲಿ ಸಿಮೆಂಟ್‌ನಿಂದ ಮಾಡಿದ ನಕಲಿ ಬೆಳ್ಳುಳ್ಳಿಯನ್ನು ಮಾರಾಟ ಮಾಡುವುದು ಪತ್ತೆಯಾಗಿದೆ.

Related Articles

Stay Connected

53,222FansLike
67,874FollowersFollow
12,303FollowersFollow
105,423SubscribersSubscribe
- Advertisement -spot_img

Latest Articles