ಬಳ್ಳಾರಿ: ನಗರದ ಆಶ್ರಯ ಕಾಲೋನಿಯಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸೋಮವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಜಿಲ್ಲಾ ಆರೋಗ್ಯ ಕುಟುಂಬ ಮತ್ತು ಕಲ್ಯಾಣ ಇಲಾಖೆ ವತಿಯಿಂದ ಪರಿಣಾಮಕಾರಿ ಮಿಷನ್ ಇಂದ್ರಧನುಷ್ 5.0 ಅಭಿಯಾನಕ್ಕೆ ಮೇಯರ್ ತ್ರಿವೇಣಿ ಅವರು ಚಾಲನೆ ನೀಡಿದರು.
ಮೇಯರ್ ತ್ರಿವೇಣಿ ಅವರು ಮಾತನಾಡಿ ಹನ್ನೆರಡು ಮಾರಕ ರೋಗಗಳಿಂದ ಮಕ್ಕಳು ಸುರಕ್ಷಿತವಾಗಿರಲು ತಪ್ಪದೇ ಇಂದ್ರ ಧನುಷ್ ಲಸಿಕೆಯನ್ನು ಹಾಕಿಸಬೇಕು ಎಂದರು.
ಈ ಸಂದರ್ಭದಲ್ಲಿ ಉಪ ಮೇಯರ್ ಜಾನಕಿ, ಮಹಾನಗರ ಪಾಲಿಕೆ ಸದಸ್ಯರಾದ ಗೋವಿಂದ ರಾಜು, ಡಿಹೆಚ್ಒ ರಮೇಶ್ ಬಾಬು, ಆರ್ ಸಿ ಹೆಚ್ ಅನಿಲ್ ಕುಮಾರ್, ಮೋಹನ್ ಕುಮಾರಿ, ಇಂದ್ರಾಣಿ, ಈಶ್ವರ್ ದಾಸಪ್ಪನವರ್ ಸೇರಿದಂತೆ ಮತ್ತಿತರ ಇದ್ದರು.