ಬೆಳಗಾಯಿತು ವಾರ್ತೆ |www.belagayithu.in
ಇತ್ತೀಚೆಗೆ ಕನಕಪುರದ ಪ್ರೌಢಶಾಲೆಯೊಂದರಲ್ಲಿ ಬಿಸಿಯೂಟ ಕಾರ್ಯಕರ್ತೆ ಗೌರಮ್ಮ ಎಂಬವರು ಅಡುಗೆ ಮಾಡುವಂತಹ ಸಂದರ್ಭದಲ್ಲಿ ಬಿಸಿಬೇಳೆ ಬಾತ್ ಚೆಲ್ಲಿ ತೀವ್ರವಾಗಿ ಸುಟ್ಟ ಗಾಯಗಳಾಗಿದ್ದು ಮೃತಪಟ್ಟಿದ್ದಾರೆ .ಜೊತೆಗೆ ಇತರ ಅಡುಗೆ ಸಹಾಯಕರಿಗೂ ಸಣ್ಣಪುಟ್ಟ ಗಾಯಗಳಾಗಿವೆ.
ಇದೇ ರೀತಿ ಲಕ್ಷಾಂತರ ಬಿಸಿ ಊಟ ಕಾರ್ಯಕರ್ತೆಯರು ಸೂಕ್ತ ಭದ್ರತೆ ,ರಕ್ಷಣೆ ಇಲ್ಲದೆ ಯಾವುದೇ ಕಾರ್ಮಿಕ ಕಾಯ್ದೆಗೂ ಒಳಪಡದೆ , ಅತ್ಯಲ್ಪ ದುಡಿಮೆಯ ಹಣವನ್ನು ಗೌರವಧನದ ಹೆಸರಿನಲ್ಲಿ ಪಡೆಯುತ್ತಿದ್ದಾರೆ. ರಾಜ್ಯ ಕನಿಷ್ಠ ವೇತನ ಕಾಯ್ದೆಯ ಅನ್ವಯ ಬಿಸಿಯೂಟ ಕಾರ್ಯಕರ್ತೆಯರನ್ನು ಶೆಡ್ಯೂಲ್ ಗೆ ಒಳಪಡಿಸಿ ಕಾನೂನು ಅಡಿಯಲ್ಲಿ ಪರಿಗಣಿಸಬೇಕು.
ಅಡುಗೆ ಮತ್ತಿತರ ಕೆಲಸ ಮಾಡುವಂತಹ ಸಂದರ್ಭಗಳಲ್ಲಿ ಅವಘಡಗಳನ್ನು ತಪ್ಪಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು ಹಾಗೂ ಮೃತರ ಕುಟುಂಬಕ್ಕೆ ಕನಿಷ್ಠ 10 ಲಕ್ಷ ಪರಿಹಾರ ನೀಡಬೇಕು, ಇತರ ಸಣ್ಣಪುಟ್ಟ ಗಾಯಗಳಾಗಿರುವ ಸಹಾಯಕಿಯರಿಗೆ ಉಚಿತ ವೈದ್ಯಕೀಯ ಚಿಕಿತ್ಸೆ ನೀಡಬೇಕು , ಗಾಯದ ತೀವ್ರತೆಯನ್ನು ಪರಿಗಣಿಸಿ ಕನಿಷ್ಠ ರೂ.50,000 ದಿಂದ ರೂ 1ಲಕ್ಷ ದ ವರೆಗೆ ಚಿಕಿತ್ಸೆ ನಂತರದ ಚೇತರಿಕೆ ಧನ ಸಹಾಯ ನೀಡಬೇಕು ಎಂದು ಎ ಐ ಯು ಟಿ ಯು ಸಿ ಸಂಯೋಜಿತ ಕರ್ನಾಟಕ ರಾಜ್ಯ ಸಂಯುಕ್ತ ಅಕ್ಷರ ದಾಸೋಹ ಕಾರ್ಮಿಕರ ಸಂಘದ ರಾಜ್ಯ ಸಮಿತಿಯು ಆಗ್ರಹಿಸಿದೆ.