ಬೆಳಗಾಯಿತು ವಾರ್ತೆ| www.belagayithu.in
ಬಳ್ಳಾರಿ: ಬಳ್ಳಾರಿ ನಗರ ಕ್ಷೇತ್ರದ ಶಾಸಕ ನಾರಾ ಭರತ್ ರೆಡ್ಡಿ ಅವರು ಮಂಗಳವಾರ ನಗರದ ವಿವಿಧ ವಾರ್ಡುಗಳಲ್ಲಿ ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿ ಚಾಲನೆ ನೀಡಿದರು.
ವಾರ್ಡ್ ಸಂಖ್ಯೆ 21ರ ಹರಿಪ್ರಿಯ ನಗರದಲ್ಲಿ 5 ಕೋಟಿ ರೂ.ಗಳ ಅನುದಾನದಡಿ ಬೀದಿ ದೀಪ, ಚರಂಡಿ, ಒಳಚರಂಡಿ ಹಾಗೂ ಪೇವರ್ಸ್ ಅಳವಡಿಕೆ ಕಾಮಗಾರಿಗೆ ಶಾಸಕ ನಾರಾ ಭರತ್ ರೆಡ್ಡಿ ಭೂಮಿ ಪೂಜೆ ನೆರವೇರಿಸಿದರು. ಈ ಸಂದರ್ಭದಲ್ಲಿ ಮಾಜಿ ಮೇಯರ್ ರಾಜೇಶ್ವರಿ, ಚಾನಾಳ್ ಶೇಖರ್, ಶಿವಶಂಕರಗೌಡ, ಯಾಳ್ಪಿ ಪಂಪನಗೌಡ, ತಿಮ್ಮನಗೌಡ, ನಾಗೇಶ್ವರ ರಾವ್, ರವಿ, ಶಶಿಧರ ಮೇಟಿ, ಗುತ್ತಿಗನೂರು ವಿರೂಪಾಕ್ಷಗೌಡ, ಅಂಗಡಿ ಪಂಪಾಪತಿ, ಮೇಟಿ ದಿವಾಕರಗೌಡ, ಶ್ಯಾಮ್, ಯುಧಿಷ್ಠಿರ ಹಾಗೂ ವಾಸು ರೆಡ್ಡಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಇದೇ ವಾರ್ಡಿನ ಸಿದ್ಧಾರ್ಥ ನಗರದಲ್ಲಿ 50 ಲಕ್ಷ ರೂ.ಗಳ ವೆಚ್ಚದಲ್ಲಿ ಲಿಂಕ್ ರಸ್ತೆಗಳ ಅಭಿವೃದ್ಧಿ ಕಾಮಗಾರಿಗೂ ಭೂಮಿ ಪೂಜೆ ನೆರವೇರಿಸಲಾಯಿತು. ಕಾರ್ಯಕ್ರಮದಲ್ಲಿ ಮಾಜಿ ಮೇಯರ್ ರಾಜೇಶ್ವರಿ, ಸಿರಿಗೆರೆ ಪನ್ನರಾಜ್, ಹಿರೇಮಠ್, ಪ್ರಭಾಕರ್ ರೆಡ್ಡಿ, ಚಾನಾಳ್ ಶೇಖರ್, ವಿಜಯಲಕ್ಷ್ಮೀ, ಹಗರಿ ಹೊನ್ನೂರಪ್ಪ, ಪರಶುರಾಮುಡು, ಹೊನ್ನಪ್ಪ ಹಾಗೂ ವಾಸು ರೆಡ್ಡಿ ಭಾಗವಹಿಸಿದ್ದರು.
ಬಳಿಕ ವಾರ್ಡ್ ಸಂಖ್ಯೆ 24ರ ಬ್ರಹ್ಮಯ್ಯ ಕಾಲೋನಿಯಲ್ಲಿ 50 ಲಕ್ಷ ರೂ.ಗಳ ಅನುದಾನದಡಿ ಲಿಂಕ್ ರಸ್ತೆಗಳ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲಾಯಿತು. ಈ ಸಂದರ್ಭದಲ್ಲಿ ನಾರಾ ವಿನಯ್ ರೆಡ್ಡಿ, ವೀರೇಂದ್ರ, ಪೋಲಕ್ (ಹನಮಂತ) ರೆಡ್ಡಿ, ಚಾನಾಳ್ ಶೇಖರ್, ಹಗರಿ ಹೊನ್ನೂರಪ್ಪ, ಪರಶುರಾಮುಡು, ಹೊನ್ನಪ್ಪ ಹಾಗೂ ವಾಸು ರೆಡ್ಡಿ ಉಪಸ್ಥಿತರಿದ್ದರು.
ತದನಂತರ ವಾರ್ಡ್ ಸಂಖ್ಯೆ 34ರ ವಿದ್ಯಾನಗರ 7ನೇ ಅಡ್ಡರಸ್ತೆ ಬಳಿ 81.93 ಲಕ್ಷ ರೂ.ಗಳ ವೆಚ್ಚದಲ್ಲಿ ಲಿಂಕ್ ರಸ್ತೆಗಳ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಪಾಲಿಕೆ ಸದಸ್ಯರು ಹಾಗೂ ಮಾಜಿ ಮೇಯರ್ ಎಂ. ರಾಜೇಶ್ವರಿ, ಕಾಂಗ್ರೆಸ್ ಮುಖಂಡರಾದ ಸುಬ್ಬರಾಯುಡು, ವಿಷ್ಣು ಬೋಯಪಾಟಿ, ಮಲ್ಲಿ, ಯೋಗಾನಂದ ರೆಡ್ಡಿ, ಹಗರಿ ಹೊನ್ನೂರಪ್ಪ, ಪರಶುರಾಮುಡು, ಹೊನ್ನಪ್ಪ, ಯೋಗೇಂದ್ರ ಕಟ್ಟ, ಇಟ್ಟಾವರಂ ಮಲ್ಲಿಕಾರ್ಜುನ, ಲಾಲ್ ಮೋಹನ್, ಭತ್ರಿ ಮಂಜು, ರಘು ಕಟ್ಟ, ಹರ್ಷ ಮತ್ತು ಸತೀಶ್ ಸೇರಿದಂತೆ ಅನೇಕರು ಭಾಗವಹಿಸಿದ್ದರು.
ಇದೇ ವೇಳೆ ವಾರ್ಡ್ ಸಂಖ್ಯೆ 04ರ ಗುಗ್ಗರಹಟ್ಟಿಯ ಮುಖ್ಯ ರಸ್ತೆಯಲ್ಲಿ 1.50 ಕೋಟಿ ರೂ.ಗಳ ವೆಚ್ಚದಲ್ಲಿ ಪಾಂಡುರಂಗ ಗುಡಿಯಿಂದ ಹೆಚ್ಎಲ್ ಕಾಲುವೆ ಹೊನ್ನಳ್ಳಿವರೆಗೆ ರಸ್ತೆ ಅಭಿವೃದ್ಧಿ ಕಾಮಗಾರಿಗೂ ಶಾಸಕ ನಾರಾ ಭರತ್ ರೆಡ್ಡಿ ಭೂಮಿ ಪೂಜೆ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮುಖಂಡರಾದ ಡಿ. ಸೂರಿ, ಸುಬ್ಬರಾಯುಡು, ಗುಗ್ಗರಹಟ್ಟಿ ಅನ್ವರ್, ಎಂಎನ್ಟಿ ಮಾಬು, ಸಿ.ಡಿ. ಹೊನ್ನೂರಸ್ವಾಮಿ, ಪರಶುರಾಮುಡು ಹಾಗೂ ಹೊನ್ನಪ್ಪ ಉಪಸ್ಥಿತರಿದ್ದರು.





