ಕಾನಿಪದಿಂದ ಪತ್ರಿಕಾ ಛಾಯಾಗ್ರಾಹಕ ಲೋಕನಾಥ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ

ಬೆಳಗಾಯಿತು ವಾರ್ತೆ
ಬಳ್ಳಾರಿ: ಇತ್ತೀಚೆಗೆ ನಿಧನರಾದ ಹಿರಿಯ ಪತ್ರಿಕಾ ಛಾಯಾಗ್ರಾಹಕ ವೇಣಿ ಲೋಕನಾಥ ಅವರಿಗೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ (ಕಾನಿಪ) ವತಿಯಿಂದ ನಗರದ ಪತ್ರಿಕಾ ಭವನದಲ್ಲಿ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಸಂಘದ ಅಧ್ಯಕ್ಷ ಎನ್. ವೀರಭದ್ರಗೌಡ ಅವರ ಅಧ್ಯಕ್ಷತೆಯಲ್ಲಿ ನಡೆದ ಶ್ರದ್ಧಾಂಜಲಿ ಸಭೆಯಲ್ಲಿ ಲೋಕನಾಥ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ಅವರ ಆತ್ಮಕ್ಕೆ ಶಾಂತಿ ಕೋರಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ವಿಶ್ರಾಂತ ವಾರ್ತಾಧಿಕಾರಿ ಚೋರನೂರು ಟಿ. ಕೊಟ್ರಪ್ಪ, ವಾರ್ತಾ ಸಹಾಯಕ ವಿ.ಸಿ. ಗುರುರಾಜ್, ಹಿರಿಯ ಪತ್ರಕರ್ತರಾದ ಜಿ. ಪ್ರಭಾಕರ್, ಎಂ. ಅಹಿರಾಜ್, ಪತ್ರಕರ್ತರಾದ ಹೆಚ್.ಎಂ. ಮಹೇಂದ್ರಕುಮಾರ್, ಹನುಮೇಶರಾವ್, ಹೆಚ್. ಬಸವರಾಜ್ ಸೇರಿದಂತೆ ಹಲವರು ಲೋಕನಾಥ ಅವರೊಂದಿಗಿನ ಒಡನಾಟ ಹಾಗೂ ವೃತ್ತಿಬದ್ಧತೆಯನ್ನು ಸ್ಮರಿಸಿದರು.
ಅಖಂಡ ಬಳ್ಳಾರಿ ಜಿಲ್ಲೆಯ ಪ್ರಮುಖ ಸರ್ಕಾರಿ ಕಾರ್ಯಕ್ರಮಗಳಿಗೆ ಸಾಕ್ಷಿಯಾಗಿದ್ದ ಲೋಕನಾಥ ಅವರು, ಸುದ್ದಿಗೆ ಸೂಕ್ತವಾದ ಛಾಯಾಚಿತ್ರವನ್ನು ಸಕಾಲಕ್ಕೆ ಒದಗಿಸುವಲ್ಲಿ ಸದಾ ಕರ್ತವ್ಯಪ್ರಜ್ಞೆ ಮೆರೆದಿದ್ದರು. ಮುಖ್ಯಮಂತ್ರಿಗಳಿಂದ ಹಿಡಿದು ಯಾವುದೇ ಗಣ್ಯ ವ್ಯಕ್ತಿಯಾಗಿದ್ದರೂ ಉತ್ತಮ ಛಾಯಾಚಿತ್ರಕ್ಕಾಗಿ ಸೂಕ್ತ ಭಂಗಿಯಲ್ಲಿ ನಿಲ್ಲುವಂತೆ ಸೂಚಿಸುತ್ತಿದ್ದ ಅವರ ಕಾರ್ಯಶೈಲಿ ವಿಶೇಷವಾಗಿತ್ತು ಎಂದು ಸ್ಮರಿಸಲಾಯಿತು.
ಲೋಕನಾಥ ಅವರು ಕೇವಲ ಪತ್ರಿಕಾ ಛಾಯಾಗ್ರಾಹಕರಾಗಿರದೆ, ಅಪಾರ ಪ್ರಮಾಣದ ಹಳೆಯ ಛಾಯಾಚಿತ್ರಗಳನ್ನು ಸಂಗ್ರಹಿಸಿಕೊಂಡಿದ್ದ ‘ಫೋಟೋ ಲೈಬ್ರರಿ’ಯಂತಿದ್ದರು. ಮಾಧ್ಯಮ ಕ್ಷೇತ್ರದ ಸಹೋದ್ಯೋಗಿಗಳ ಯಾವುದೇ ಸಂಕಷ್ಟಕ್ಕೆ ತಕ್ಷಣ ಸ್ಪಂದಿಸುವ ಮನೋಭಾವ ಅವರಲ್ಲಿತ್ತು ಎಂದು ಸಭೆಯಲ್ಲಿ ನೆನಪಿಸಲಾಯಿತು.
ಈ ಸಂದರ್ಭದಲ್ಲಿ ಮಾಧ್ಯಮ ಕ್ಷೇತ್ರದ ಎನ್. ಗುರುಶಾಂತ, ನಂದೀಶ್, ಜಿ. ಚಂದ್ರಶೇಖರಗೌಡ, ಮಾರೆಪ್ಪ, ವೆಂಕೋಬಿ ಸಂಗನಕಲ್ಲು, ವೆಂಕಟೇಶ ದೇಸಾಯಿ, ಮಲ್ಲಿಕಾರ್ಜುನ ಚಿಲಕರಾಗಿ, ತಾಳೂರು ಎರ್ರಿಸ್ವಾಮಿ, ಜಂಭುನಾಥ, ಮಲ್ಲಿಕಾರ್ಜುನ, ಗೋವರ್ಧನರೆಡ್ಡಿ, ಖಲಂದರ್, ಗಿರಿಯಾದವ್ ಹಾಗೂ ವಾರ್ತಾ ಇಲಾಖೆಯ ಹನುಮಂತಪ್ಪ ಸೇರಿದಂತೆ ಹಲವರು ಉಪಸ್ಥಿತರಿದ್ದರು.


Related Articles

Stay Connected

53,222FansLike
67,874FollowersFollow
12,303FollowersFollow
105,423SubscribersSubscribe
- Advertisement -spot_img

Latest Articles