ಬಳ್ಳಾರಿಯಲ್ಲಿ ಕುಶಾಲ್ಸ್ ಫ್ಯಾಷನ್ ಜ್ಯುವೆಲ್ಲರಿ 132ನೇ ಮಳಿಗೆ ಆರಂಭ

ಬೆಳಗಾಯಿತು ವಾರ್ತೆ
ಬಳ್ಳಾರಿ: ಭಾರತದ ಪ್ರಮುಖ ಫ್ಯಾಷನ್ ಮತ್ತು ಬೆಳ್ಳಿ ಆಭರಣಗಳ ಬ್ರ್ಯಾಂಡ್‌ಗಳಲ್ಲಿ ಒಂದಾದ ಕುಶಾಲ್ಸ್ ಫ್ಯಾಷನ್ ಜ್ಯುವೆಲ್ಲರಿಯ ದೇಶದ 132ನೇ ಮಳಿಗೆಯನ್ನು ಬಳ್ಳಾರಿ ನಗರದ ಇನ್‌ಫ್ಯಾಂಟ್ರಿ ರಸ್ತೆಯಲ್ಲಿ ಶಾಸಕ ನಾರಾ ಭರತ್‌ರೆಡ್ಡಿ ಸೋಮವಾರ ಉದ್ಘಾಟಿಸಿದರು.
ಸುಮಾರು 1,700 ಚದರ ಅಡಿ ವಿಸ್ತೀರ್ಣದ ಮಳಿಗೆಯಲ್ಲಿ ಆಧುನಿಕ ಹಾಗೂ ಆರಾಮದಾಯಕ ಶಾಪಿಂಗ್ ಅನುಭವಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ. ನೆಕ್ಲೆಸ್, ಚೋಕರ್, ಕಿವಿಯೋಲೆ, ಉಂಗುರ, ಪೆಂಡೆಂಟ್, ಬ್ರೇಸ್ಲೆಟ್, ಕಡಾ, ಮಾಂಗ್ ಟಿಕ್ಕಾ, ಬ್ರೂಚ್ ಸೇರಿದಂತೆ 10 ಸಾವಿರಕ್ಕೂ ಅಧಿಕ ವಿನ್ಯಾಸಗಳ ಆಭರಣಗಳನ್ನು ಗ್ರಾಹಕರಿಗೆ ಪರಿಚಯಿಸಲಾಗಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಸಂಸ್ಥೆಯ ನಿರ್ದೇಶಕ ಅಂಕಿತ್ ಗುಲೆಚ್ಛಾ, ಬಳ್ಳಾರಿಯಲ್ಲಿ ಮಳಿಗೆ ಆರಂಭಿಸಿರುವುದು ಸಂತಸ ತಂದಿದೆ. ಗ್ರಾಹಕರಿಗೆ ವೈವಿಧ್ಯಮಯ ವಿನ್ಯಾಸ, ಗುಣಮಟ್ಟದ ಆಭರಣ ಹಾಗೂ ಉತ್ತಮ ಶಾಪಿಂಗ್ ಅನುಭವ ಒದಗಿಸುವುದು ಸಂಸ್ಥೆಯ ಉದ್ದೇಶವಾಗಿದೆ ಎಂದರು.
2006ರಲ್ಲಿ ಆರಂಭವಾದ ಸಂಸ್ಥೆ ದೇಶದ 40ಕ್ಕೂ ಅಧಿಕ ನಗರಗಳಲ್ಲಿ ಮಳಿಗೆಗಳನ್ನು ಹೊಂದಿದೆ. ಬಳ್ಳಾರಿಯಲ್ಲಿ 132ನೇ ಮಳಿಗೆ ಆರಂಭಿಸಿರುವುದು ಕರ್ನಾಟಕದಲ್ಲಿ ವಿಸ್ತರಣೆಗೆ ಮಹತ್ವದ ಹೆಜ್ಜೆಯಾಗಿದೆ ಎಂದರು.
ಕಾರ್ಯಕ್ರಮದಲ್ಲಿ ತಂನ್ಸುಕ್ ಜಿ. ಗೋಳೇಚ, ಮನೀಶ್ ಗೋಳೇಚ, ವಿನೋದ್ ಜೈನ್, ನರೇಶ್ ಕಂಕರಿಯಾ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.


Related Articles

Stay Connected

53,222FansLike
67,874FollowersFollow
12,303FollowersFollow
105,423SubscribersSubscribe
- Advertisement -spot_img

Latest Articles