ವಿಶ್ವ ಗರ್ಭನಿರೋಧಕ ದಿನಾಚರಣೆ: ಪೋಸ್ಟರ್ ಮೇಕಿಂಗ್ ಸ್ಪರ್ಧೆ ಹಾಗೂ ಜಾಗೃತಿ ಕಾರ್ಯಕ್ರಮ

ಬೆಳಗಾಯಿತಿ ವಾರ್ತೆ
ಬಳ್ಳಾರಿ: ವಿಶ್ವ ಗರ್ಭನಿರೋಧಕ ದಿನಾಚರಣೆ–2026ರ ಅಂಗವಾಗಿ ಫ್ಯಾಮಿಲಿ ಪ್ಲಾನಿಂಗ್ ಅಸೋಸಿಯೇಷನ್ ಆಫ್ ಇಂಡಿಯಾ (FPAI), ಬಳ್ಳಾರಿ ಶಾಖೆಯ ವತಿಯಿಂದ ಪೂಜಾ ಇನ್‌ಸ್ಟಿಟ್ಯೂಟ್ ಆಫ್ ನರ್ಸಿಂಗ್ ಹಾಗೂ GNM ಇನ್‌ಸ್ಟಿಟ್ಯೂಟ್ ಆಫ್ ಪ್ಯಾರಾಮೆಡಿಕಲ್ ಸೈನ್ಸಸ್ ಸಹಯೋಗದಲ್ಲಿ ಸೆ.26ರಂದು ಪೋಸ್ಟರ್ ಮೇಕಿಂಗ್ ಸ್ಪರ್ಧೆ ಹಾಗೂ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಕಾರ್ಯಕ್ರಮದ ಮುಖ್ಯ ಅತಿಥಿ ಹಾಗೂ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ FPAI ಬಳ್ಳಾರಿ ಶಾಖೆಯ ವ್ಯವಸ್ಥಾಪಕಿ ಎಸ್. ವಿಜಯಲಕ್ಷ್ಮಿ ಅವರು ಆಧುನಿಕ ಗರ್ಭನಿರೋಧಕ ವಿಧಾನಗಳು, ಅವುಗಳ ಮಹತ್ವ ಹಾಗೂ ಸುರಕ್ಷಿತ ಮತ್ತು ಜವಾಬ್ದಾರಿಯುತ ಕುಟುಂಬ ಯೋಜನೆ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.
ಅನಿರೀಕ್ಷಿತ ಗರ್ಭಧಾರಣೆಯನ್ನು ತಡೆಗಟ್ಟಲು ಆಧುನಿಕ ಗರ್ಭನಿರೋಧಕ ವಿಧಾನಗಳ ಕುರಿತು ವೈಜ್ಞಾನಿಕ ಹಾಗೂ ಸರಿಯಾದ ಅರಿವು ಅತ್ಯಂತ ಅಗತ್ಯ. ಆರೋಗ್ಯ ಮತ್ತು ಭವಿಷ್ಯದ ಕುರಿತು ತಿಳಿದ ನಿರ್ಧಾರಗಳನ್ನು ಕೈಗೊಳ್ಳಲು ಅಗತ್ಯವಾದ ಮಾಹಿತಿಯನ್ನು ಪ್ರತಿಯೊಬ್ಬರೂ ಹೊಂದಿರಬೇಕು ಎಂದು ಅವರು ಹೇಳಿದರು.
ಪೂಜಾ ಇನ್‌ಸ್ಟಿಟ್ಯೂಟ್ ಆಫ್ ನರ್ಸಿಂಗ್ ಹಾಗೂ GNM ಇನ್‌ಸ್ಟಿಟ್ಯೂಟ್ ಆಫ್ ಪ್ಯಾರಾಮೆಡಿಕಲ್ ಸೈನ್ಸಸ್‌ನ ಉಪ ಪ್ರಾಂಶುಪಾಲರಾದ ಸಯ್ಯದ್ ಬಷಾ ಅವರು ಸಮಾರೋಪ ಭಾಷಣ ಮಾಡಿ, ಕಾರ್ಯಕ್ರಮದ ಉದ್ದೇಶವನ್ನು ಶ್ಲಾಘಿಸಿದರು. FPAI ಬಳ್ಳಾರಿ ಕಾರ್ಯಕ್ರಮಾಧಿಕಾರಿ ಬಸವರಾಜ ಹೆಚ್. ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಾಧ್ಯಾಪಕ ಸಬ್ಬೀರ್ ಕಾರ್ಯಕ್ರಮ ನಿರೂಪಿಸಿದರು.
ಈ ಸಂದರ್ಭದಲ್ಲಿ ಆಯೋಜಿಸಿದ್ದ ಪೋಸ್ಟರ್ ಮೇಕಿಂಗ್ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಹೀನಾ ಪ್ರಥಮ, ಸಿಂಧು ದ್ವಿತೀಯ, ನಾಜಿಯಾ ತೃತೀಯ ಹಾಗೂ ಜುಬೈರ್ ಚತುರ್ಥ ಸ್ಥಾನ ಪಡೆದರು.
ಕಾರ್ಯಕ್ರಮದಲ್ಲಿ ಎರಡೂ ಕಾಲೇಜುಗಳ ಸುಮಾರು 100 ವಿದ್ಯಾರ್ಥಿಗಳು, ಕಾಲೇಜು ಸಿಬ್ಬಂದಿ ಹಾಗೂ FPAI ಬಳ್ಳಾರಿ ಶಾಖೆಯ ಸಿಬ್ಬಂದಿ ಭಾಗವಹಿಸಿದ್ದರು. ವಿದ್ಯಾರ್ಥಿಗಳಲ್ಲಿ ಗರ್ಭನಿರೋಧಕ ವಿಧಾನಗಳು, ಕುಟುಂಬ ಯೋಜನೆ ಹಾಗೂ ಸಂತಾನೋತ್ಪತ್ತಿ ಆರೋಗ್ಯದ ಕುರಿತು ವೈಜ್ಞಾನಿಕ ಮತ್ತು ಸರಿಯಾದ ಮಾಹಿತಿಯನ್ನು ಮೂಡಿಸುವಲ್ಲಿ ಕಾರ್ಯಕ್ರಮ ಯಶಸ್ವಿಯಾಯಿತು.


Related Articles

Stay Connected

53,222FansLike
67,874FollowersFollow
12,303FollowersFollow
105,423SubscribersSubscribe
- Advertisement -spot_img

Latest Articles