ಸೆ. 20ರಂದು ಹಿಂದು ಮಹಾ ಗಣಪತಿ ಶೋಭಾಯಾತ್ರೆ


ಮಂಗಳೂರು ದೈವ ಕುಣಿತ, ಕೇರಳ ಕಲಾ ತಂಡ, ಮಲ್ಲಕಂಭ ಪ್ರದರ್ಶನಕ್ಕೆ ವಿಶೇಷ ಮೆರುಗು
ಬೆಳಗಾಯಿತು ವಾರ್ತೆ
ಬಳ್ಳಾರಿ:
ನಗರದ ಸೆಂಟನರಿ ಹಾಲ್‌ನಲ್ಲಿ ಪ್ರತಿಷ್ಠಾಪಿಸಲಾಗಿರುವ ಹಿಂದು ಮಹಾ ಗಣಪತಿಯ ವಿಸರ್ಜನಾ ಶೋಭಾಯಾತ್ರೆ ಸೆ. 20ರ ಭಾನುವಾರ ಸಂಜೆ 4 ಗಂಟೆಗೆ ಅದ್ದೂರಿಯಾಗಿ ನಡೆಯಲಿದೆ ಎಂದು ಹಿಂದು ಮಹಾ ಗಣಪತಿ ಟ್ರಸ್ಟ್‌ನ ಪದಾಧಿಕಾರಿಗಳು ತಿಳಿಸಿದ್ದಾರೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಟ್ರಸ್ಟ್‌ನವರು, ಗಣೇಶೋತ್ಸವದ ಅಂಗವಾಗಿ ಆಯೋಜಿಸಿರುವ ಶೋಭಾಯಾತ್ರೆಯಲ್ಲಿ ವಿವಿಧ ರಾಜ್ಯಗಳ ಕಲಾ ತಂಡಗಳು ಭಾಗವಹಿಸಿ ಸಾಂಸ್ಕೃತಿಕ ಪ್ರದರ್ಶನ ನೀಡಲಿವೆ ಎಂದು ಹೇಳಿದರು.
ಶೋಭಾಯಾತ್ರೆಯ ಪ್ರಮುಖ ಆಕರ್ಷಣೆಯಾಗಿ ಮಂಗಳೂರಿನ ದೈವ ಕುಣಿತ ಪ್ರದರ್ಶನ ನಡೆಯಲಿದೆ. ಕರಾವಳಿ ಭಾಗದ ಸಾಂಪ್ರದಾಯಿಕ ಕಲಾ ವೈಭವವನ್ನು ಬಳ್ಳಾರಿ ನಗರದ ಜನತೆಗೆ ಪರಿಚಯಿಸುವ ಉದ್ದೇಶದಿಂದ ದೈವ ಕುಣಿತ ತಂಡವನ್ನು ಆಹ್ವಾನಿಸಲಾಗಿದೆ ಎಂದು ತಿಳಿಸಿದರು.
ಇದರ ಜೊತೆಗೆ ಕೇರಳದ ಕಲಾ ತಂಡವೂ ಶೋಭಾಯಾತ್ರೆಯಲ್ಲಿ ಪಾಲ್ಗೊಂಡು ವಿಶೇಷ ಪ್ರದರ್ಶನ ನೀಡಲಿದೆ. ವಿವಿಧ ಕಲಾ ಪ್ರಕಾರಗಳ ಸಮನ್ವಯದೊಂದಿಗೆ ನಡೆಯಲಿರುವ ಶೋಭಾಯಾತ್ರೆ ಸಾರ್ವಜನಿಕರ ಗಮನ ಸೆಳೆಯಲಿದೆ ಎಂದು ಟ್ರಸ್ಟ್‌ನವರು ಹೇಳಿದರು.
ಇದೇ ವೇಳೆ ಯುವಜನರಲ್ಲಿ ಕ್ರೀಡಾ ಮತ್ತು ದೈಹಿಕ ಕೌಶಲ್ಯದ ಬಗ್ಗೆ ಆಸಕ್ತಿ ಮೂಡಿಸುವ ಮಲ್ಲಕಂಭ ಪ್ರದರ್ಶನವನ್ನೂ ಆಯೋಜಿಸಲಾಗಿದೆ. ಒಟ್ಟು ನಾಲ್ಕು ಕಲಾ ತಂಡಗಳು ಶೋಭಾಯಾತ್ರೆಯಲ್ಲಿ ಭಾಗವಹಿಸಿ ತಮ್ಮ ಕಲಾ ಪ್ರದರ್ಶನ ನೀಡಲಿವೆ ಎಂದು ತಿಳಿಸಿದರು.
ಸೆ.20ರಂದು ಸಂಜೆ 4 ಗಂಟೆಗೆ ನಡೆಯಲಿರುವ ಶೋಭಾಯಾತ್ರೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಪಾಲ್ಗೊಂಡು ಗಣಪತಿ ಉತ್ಸವವನ್ನು ಶ್ರದ್ಧೆ, ಭಕ್ತಿ ಹಾಗೂ ಸೌಹಾರ್ದತೆಯಿಂದ ಆಚರಿಸಬೇಕು ಎಂದು ಟ್ರಸ್ಟ್ ಮನವಿ ಮಾಡಿದೆ.
ಈ ಸಂದರ್ಭದಲ್ಲಿ ಸಿಎ ಶರಣಬಸವ ಪಾಟೀಲ್, ರಮೇಶ್ ಬುಜ್ಜಿ, ಮಲ್ಲಿಕಾರ್ಜುನ, ಬಿ.ಕೆ. ಗಾದಿಲಿಂಗನ ಗೌಡ್ರು, ಸಾಗರ್, ಕಾಶಿರೆಡ್ಡಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.



Related Articles

Stay Connected

53,222FansLike
67,874FollowersFollow
12,303FollowersFollow
105,423SubscribersSubscribe
- Advertisement -spot_img

Latest Articles