34.2 C
Bellary
Saturday, April 26, 2025

Localpin

spot_img

120 ಜೋಡಿಗಳ ಸಾಮೂಹಿಕ ವಿವಾಹ

ಬೆಳಗಾಯಿತು ವಾರ್ತೆ / https://belagayithu.in

ಇತಿಹಾಸ ಪ್ರಸಿದ್ಧವಾದ ಸುತ್ತೂರು ಜಾತ್ರಾ ಮಹೋತ್ಸವ 2024ಕ್ಕೆ ಅಧಿಕೃತವಾಗಿ ಚಾಲನೆ ದೊರೆತ್ತಿದ್ದು, ಇಂದು ಸಾಮೂಹಿಕ ವಿವಾಹದಲ್ಲಿ 120 ಜೋಡಿ ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ.ಪ್ರತಿ ವರ್ಷದಂತೆ ಈ ವರ್ಷವು ಕೂಡ ಜಾತ್ರೆಯಲ್ಲಿ ಸರಳ ಸಾಮೂಹಿಕ ವಿವಾಹವು ಪ್ರಮುಖ ಅಕರ್ಷಣೆಯಾಗಿತ್ತು. ಸಾಮೂಹಿಕ ವಿವಾಹವಿದ್ದ ಕಾರಣ ಲಕ್ಷಾಂತರ ಭಕ್ತರು ಆಗಮಿಸಿದ್ದರು.ಬೆಳಿಗ್ಗೆ 9.30ಕ್ಕೆ ಸಾಮೂಹಿಕ ವಿವಾಹ ಕಾರ್ಯಕ್ರಮ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳ ನೇತೃತ್ವದಲ್ಲಿ ಅದ್ಧೂರಿಯಾಗಿ ನಡೆಯಿತು.

120 ಜೋಡಿಗಳ ಪೈಕಿ 61 ಎಸ್‍ಸಿ, 4 ವೀರಶೈವ ಲಿಂಗಾಯತ, 26 ಎಸ್‍ಟಿ, 18 ಹಿಂದುಳಿದ ವರ್ಗದವರು ಇದ್ದರು.11 ಅಂತರ್ ಜಾತಿ ಜೋಡಿಗಳು ಸಾಮೂಹಿಕ ವಿವಾಹ ಮಹೋತ್ಸವದಲ್ಲಿ ಮದುವೆಯಾಗುವ ಮೂಲಕ ಹೊಸ ಬದುಕಿಗೆ ಪ್ರವೇಶ ಪಡೆದರು. 4 ವಿಶೇಷ ಚೇತನ ಜೋಡಿಗಳು, ತಮಿಳುನಾಡಿನ 23 ಜೋಡಿಗಳು, ಒಂದು ಜೋಡಿ ಮರು ಮದುವೆಯಾಗಿದ್ದಾರೆ.

Related Articles

Stay Connected

53,222FansLike
67,874FollowersFollow
12,303FollowersFollow
105,423SubscribersSubscribe
- Advertisement -spot_img

Latest Articles