ಎಸ್‌ಐಆರ್ ಪ್ರಕ್ರಿಯೆ: ಮೊದಲ ದಿನವೇ 1.90 ಲಕ್ಷ ಗಣತಿ ನಮೂನೆಗಳ ವಿತರಣೆ

ಬೆಳಗಾಯಿತು ವಾರ್ತೆ | www.belagayithu.in
ಬಳ್ಳಾರಿ: ಬಳ್ಳಾರಿ ಜಿಲ್ಲೆಯಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆ ಆರಂಭವಾಗಿದ್ದು, ಬೂತ್ ಮಟ್ಟದ ಅಧಿಕಾರಿಗಳು (ಬಿಎಲ್‌ಒ) ಮನೆ ಮನೆಗೆ ತೆರಳಿ ಮತದಾರರಿಗೆ ಗಣತಿ ನಮೂನೆ ವಿತರಿಸುವ ಕಾರ್ಯಕ್ಕೆ ಚಾಲನೆ ನೀಡಿದ್ದಾರೆ.
ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳ ಕಚೇರಿ ಗುರುವಾರ ಸಂಜೆ 6 ಗಂಟೆಗೆ ಬಿಡುಗಡೆ ಮಾಡಿದ ಪತ್ರಿಕಾ ಪ್ರಕಟಣೆಯ ಪ್ರಕಾರ, ಜೂನ್ 16, 2026ರ ಮತದಾರರ ಪಟ್ಟಿಯಂತೆ ಜಿಲ್ಲೆಯಲ್ಲಿ ಒಟ್ಟು 12,29,586 ಮತದಾರರಿದ್ದು, ಎಲ್ಲ ಮತದಾರರಿಗೂ ಗಣತಿ ನಮೂನೆಗಳನ್ನು ಮುದ್ರಿಸಿ ಬಿಎಲ್‌ಒಗಳಿಗೆ ವಿತರಿಸಲಾಗಿದೆ.
ಜಿಲ್ಲೆಯಲ್ಲಿ ಮತದಾರರ ಮ್ಯಾಪಿಂಗ್ ಕಾರ್ಯವು ಶೇ.97.83ರಷ್ಟು ಪೂರ್ಣಗೊಂಡಿದೆ. ಮನೆ ಮನೆಗೆ ತೆರಳಿ ಗಣತಿ ನಮೂನೆ ವಿತರಿಸುವ ಹಾಗೂ ನಮೂನೆಗಳನ್ನು ಡಿಜಿಟಲೀಕರಣಗೊಳಿಸುವ ಕಾರ್ಯವು ಜೂನ್ 30ರಿಂದ ಜುಲೈ 29ರವರೆಗೆ ನಡೆಯಲಿದೆ.
ಇಲ್ಲಿಯವರೆಗೆ 1,90,234 ಗಣತಿ ನಮೂನೆಗಳನ್ನು (ಶೇ.15.47) ಮತದಾರರಿಗೆ ವಿತರಿಸಲಾಗಿದ್ದು, 40,984 ನಮೂನೆಗಳನ್ನು (ಶೇ.3.33) ಡಿಜಿಟಲೀಕರಣಗೊಳಿಸಲಾಗಿದೆ. ಅಲ್ಲದೆ, 413 ಮತದಾರರು (ಶೇ.0.03) ತಮ್ಮ ಗಣತಿ ನಮೂನೆಗಳನ್ನು ಆನ್‌ಲೈನ್ ಮೂಲಕ ಸಲ್ಲಿಸಿದ್ದಾರೆ.
ಪರಿಶೀಲನೆ ವೇಳೆ 113 ಮೃತ ಮತದಾರರು, 91 ಶಾಶ್ವತವಾಗಿ ಸ್ಥಳಾಂತರಗೊಂಡ ಮತದಾರರು, 35 ಈಗಾಗಲೇ ಬೇರೆಡೆ ನೋಂದಣಿಯಾಗಿರುವ ಮತದಾರರು, 243 ASD (Absent, Shifted, Dead) ಪ್ರಕರಣಗಳು, 1 ಗೈರುಹಾಜರಿದ್ದ ಮತದಾರ ಹಾಗೂ 3 ಇತರೆ ಪ್ರಕರಣಗಳು ಗುರುತಿಸಲ್ಪಟ್ಟಿವೆ.
ಕ್ಷೇತ್ರವಾರು ಗಣತಿ ನಮೂನೆಗಳ ವಿತರಣೆ
91-ಕಂಪ್ಲಿ: 45,586 ನಮೂನೆ ವಿತರಣೆ, 13,417 ಡಿಜಿಟಲೀಕರಣ.
92-ಸಿರುಗುಪ್ಪ: 22,347 ವಿತರಣೆ, 8,175 ಡಿಜಿಟಲೀಕರಣ.
93-ಬಳ್ಳಾರಿ ಗ್ರಾಮೀಣ: 43,075 ವಿತರಣೆ, 4,123 ಡಿಜಿಟಲೀಕರಣ.
94-ಬಳ್ಳಾರಿ ನಗರ: 49,962 ವಿತರಣೆ, 1,103 ಡಿಜಿಟಲೀಕರಣ.
95-ಸಂಡೂರು: 29,264 ವಿತರಣೆ, 14,166 ಡಿಜಿಟಲೀಕರಣ.
ಜಿಲ್ಲಾಡಳಿತವು ಮತದಾರರು ಬಿಎಲ್‌ಒಗಳಿಗೆ ಅಗತ್ಯ ದಾಖಲೆಗಳನ್ನು ಒದಗಿಸಿ, ಗಣತಿ ನಮೂನೆಗಳನ್ನು ಸಮಯಕ್ಕೆ ಸರಿಯಾಗಿ ಭರ್ತಿ ಮಾಡಿ ಸಲ್ಲಿಸುವ ಮೂಲಕ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಕಾರ್ಯಕ್ಕೆ ಸಹಕರಿಸುವಂತೆ ಮನವಿ ಮಾಡಿದೆ.


Related Articles

Stay Connected

53,222FansLike
67,874FollowersFollow
12,303FollowersFollow
105,423SubscribersSubscribe
- Advertisement -spot_img

Latest Articles