ಬಳ್ಳಾರಿ: ನಗರದ ಬಳ್ಳಾರಿ ರಾಘವ ಕಲಾ ಮಂದಿರದಲ್ಲಿ ರಾಘವ ಮೆಮೋರಿಯಲ್ ಅಸೋಸಿಯೇಷನ್ ಬಳ್ಳಾರಿ ವತಿಯಿಂದ ಬಳ್ಳಾರಿ ರಾಘವ ಸಂಸ್ಥೆಯ ಅಮೃತ ಮಹೋತ್ಸವ ಅಂಗವಾಗಿ ೧೪೩ನೇ ರಾಘವ ಜಯಂತಿ, ನಾಟ್ಯ ಕಲಾ ಪ್ರಪೂರ್ಣ ರಾಘವ ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ನಾಟಕೋತ್ಸವ-2023 ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಅಧ್ಯಕ್ಷರಾದ ಕೋಟೇಶ್ವರ ರಾವ್ ಅವರು ಮಾತನಾಡಿ ಗಡಿನಾಡು ಆದ್ದರಿಂದ ಕನ್ನಡ ಮತ್ತು ತೆಲುಗು ಪ್ರಶಸ್ತಿ ಗಳನ್ನು ನೀಡಲಾಗುತ್ತಿದೆ ಎಂದರು.ಹೊಸ ಮುಖ ನಾಟಕಕ್ಕೆ ಪರಿಚಯಿಸುವ ಉದ್ದೇಶದಿಂದ ನಾಟಕ ತರಬೇತಿ ನೀಡುವ ಚಿಂತನೆ ಇದೆ ಎಂದರು.
ಕಲಾವಿದೆ ಉಮಾರಾಣಿ ಬಾರಿಗಿಡದ ಅವರಿಗೆ ರಾಜ್ಯ ಮಟ್ಟದ ಪ್ರಶಸ್ತಿ ಓಂಕಾರಮ್ಮ, ನಟರಾಜ್ ಅವರಿಗೆ ಜಿಲ್ಲಾ ಮಟ್ಟದ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಗೌರವ ಅಧ್ಯಕ್ಷ ಕೆ ಚೆನ್ನಪ್ಪ, ಅಧ್ಯಕ್ಷರಾದ ಕೆ ಕೋಟೇಶ್ವರ ರಾವ್, ಉಪಾಧ್ಯಕ್ಷರಾದ ವಿಷ್ಣುವರ್ಧನ್ ರೆಡ್ಡಿ, ರಮೇಶ್ ಗೌಡ ಪಾಟೀಲ್,ಗೌರವ ಕಾರ್ಯದರ್ಶಿ ಎನ್ ಪ್ರಕಾಶ್ ಖಜಾಂಚಿ ಪಿ ದನುಂಜಯ,ಜಾಂಟಿ ಸೆಕ್ರೆಟರಿ ರಾಮಾಂಜನೇಯಲು ಸೇರಿದಂತೆ ಮತ್ತಿತರ ಇದ್ದರು