ಮರಿಯಮ್ಮನಹಳ್ಳಿ:ಈ ಕಾಲದಲಿ ಏನಾದರೂ ಆಗಬಹುದು,ಏನಾದರೂ ಮಾಯವಾಗಬಹುದು ಎಂಬುವುದಕ್ಕೆ ಕೆಲವು ಆಶ್ಚರ್ಯಕರ ಸುದ್ದಿಗಳು ಕೇಳಬಹುದು ಅಲ್ವಾ.ಅಂತಹ ಆಶ್ಚರ್ಯಕರ ಘಟನೆ ಭಾನುವಾರ ನಡೆದಿದೆ.
ಹೌದು ಪಟ್ಟಣದ ಬಸ್ ನಿಲ್ದಾಣದಲ್ಲಿ ರಾತ್ರಿ ನಿಲುಗಡೆಯಾದ ಬಸ್ ಮಾಯ!ಸಂಡೂರು ಬಸ್ ಡಿಪೋಗೆ ಸೇರಿದ ಬಸ್ ಭಾನುವಾರ ರಾತ್ರಿ ಪಟ್ಟಣದ ಬಸ್ ನಿಲ್ದಾಣದಿಂದ(ಮಾಯ)ಕಳ್ಳತನವಾಗಿದೆ.ಕೆ.ಎ.35,ಎಫ್85 ಎನ್ನುವ ಸಂಖ್ಯೆಯ ಬಸ್ ಕಳ್ಳತನವಾಗಿದೆ.ಈ ಬಸ್ ರಾತ್ರಿ ಪಟ್ಟಣದ ಬಸ್ ನಿಲ್ದಾಣದಲ್ಲಿ ನಿಲುಗಡೆಯಾಗಿ ಗರಗ ಮೂಲಕ ಸಂಡೂರು ಸಂಚರಿಸುತ್ತಿತ್ತು.
