ಬಳ್ಳಾರಿ: ಬಳ್ಳಾರಿ ನಗರ ರೈಲ್ವೆ ನಿಲ್ದಾಣದ ಅಭಿವೃದ್ಧಿಗಾಗಿ ಬಿಡುಗಡೆಯಾಗಿರುವ ಕೇಂದ್ರದ `ಅಮೃತ ಭಾರತ್ ಸ್ಟೇಷನ್’ ಯೋಜನೆಯ 16 ಕೋಟಿ ರೂಪಾಯಿ ವೆಚ್ಚದ ಕಾಮಗಾರಿಗಳನ್ನು ಬಳ್ಳಾರಿಯ ರೈಲ್ವೆ ಅಧಿಕಾರಿಗಳು ಮತ್ತು ಸ್ಟೇಷನ್ ಕನ್ಸಲ್ಟೇಟಿವ್ ಸಮಿತಿಯ ಸದಸ್ಯರು ಜಂಟಿಯಾಗಿ ಸೋಮವಾರ ಪರಿಶೀಲನೆ ನಡೆಸಿ ಪ್ರಗತಿ ಪರಿಶೀಲನಾ ಸಭೆಯನ್ನು ನಡೆಸಿದ್ದಾರೆ.
ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಪ್ರತಿನಿಧಿಯಾಗಿ ಹಾಗೂ ಸ್ಟೇಷನ್ ಕನ್ಸಲ್ಟೇಟಿವ್ ಸಮಿತಿಯ ಸದಸ್ಯರಾಗಿ ಸಭೆಯಲ್ಲಿ ಪಾಲ್ಗೊಂಡಿದ್ದ ಟಿ. ಶ್ರೀನಿವಾಸರಾವ್ ಅವರು, ಮಾಧ್ಯಮಗಳಿಗೆ ಮಾಹಿತಿ ನೀಡಿ, ಬಳ್ಳಾರಿ ರೈಲ್ವೆ ನಿಲ್ದಾಣದಲ್ಲಿರುವ ಮೂರು ಪ್ಲಾಟ್ಫಾರಂಗಳು, ಪುರಷರ ಮತ್ತು ಮಹಿಳೆಯರ ವೇಯ್ಟಿಂಗ್ ರೂಂಗಳು ಅಂತಾರಾಷ್ಟಿçÃಯ ಮಟ್ಟದಲ್ಲಿ ಆಧುನೀಕರಣಗೊಳ್ಳುತ್ತಿವೆ ಎಂದರು.ಬಳ್ಳಾರಿ ರೈಲ್ವೆ ನಿಲ್ದಾಣದಲ್ಲಿ ಪ್ರೀ ಪೇಯ್ಡ್ ಆಟೋ ನಿಲ್ದಾಣ ಪ್ರಾರಂಭಿಸುವ ಕುರಿತು ಸಭೆಯಲ್ಲಿ ಚರ್ಚೆ ನಡೆಸಲಾಯಿತು. ಪ್ಲಾಟ್ ಫಾರಂ 1ರಲ್ಲಿ ಪ್ರಯಾಣಿಕರು ಹತ್ತುವ – ಇಳಿಯುವ ವ್ಯವಸ್ಥೆಯ ಎಕ್ಸಲೇಟರ್ ವ್ಯವಸ್ಥೆಯ ಜೊತೆಯಲ್ಲಿ ಹೆಚ್ಚುವರಿ 2 ಎಕ್ಸಲೇಟರ್ಗಳನ್ನು ಅಳವಡಿಸಲು ನಿರ್ಧರಿಸಲಾಯಿತು. ಸಾಮಾನ್ಯ ಟಿಕೇಟ್ ಪಡೆಯುವ ಟಿಕೇಟ್ ಕೌಂಟರ್ಗೆ ಸಮೀಪದಲ್ಲಿ ಕಾರ್ ಪಾರ್ಕಿಂಗ್ ವ್ಯವಸ್ಥೆ ಮಾಡಲು ನಿರ್ಧಾರಕೈಗೊಳ್ಳಲಾಯಿತು ಎಂದರು. `ಸ್ಪಾಟ್ ರಿರ್ವೇಷನ್’ಹಂಪೆ ಮತ್ತು ಅಮರಾವತಿ ಎಕ್ಸ್ಪ್ರೆಸ್ ರೈಲುಗಳ ಸೀಟು ರಿರ್ವೇಷನ್ಗೆ ಚಾರ್ಟ್ಸಿದ್ದವಾಗಿ ನಂತರವೂ ಸೀಟುಗಳು ಉಳಿದಿದ್ದಲ್ಲಿ ರೈಲು ಬಳ್ಳಾರಿ ನಿಲ್ದಾಣಕ್ಕೆ ಬರುವ ಒಂದು ತಾಸು ಮುಂಚಿತವಾಗಿ ರಿರ್ವೇಷನ್ ಟಿಕೇಟ್ ಪಡೆಯುವ ಸೌಲಭ್ಯವಿದ್ದು, ಪ್ರಯಾಣಿಕರು ಈ ಸೌಲಭ್ಯದ ಸದುಪಯೋಗ ಮಾಡಿಕೊಳ್ಳಬೇಕು ಎಂದರು.
ಸಭೆಯಲ್ಲಿ ಸ್ಟೇಷನ್ ಮೇನೇಜರ್ ನಾಗೇಶ್ಬಾಬು ಶರ್ಮಾ, ರೈಲ್ವೆ ನಿಲ್ದಾಣದ ಕಮರ್ಷಿಯಲ್ ಅಧಿಕಾರಿ ಎಸ್. ಹೊನ್ನೂರುಸ್ವಾಮಿ ಹಾಗೂ ಮುಖ್ಯ ಆರೋಗ್ಯ ಅಧಿಕಾರಿ ಷರೀಫ್, ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಪ್ರತಿನಿಧಿಯಾಗಿ ಹಾಗೂ ಸ್ಟೇಷನ್ ಕನ್ಸಲ್ಟೇಟಿವ್ ಸಮಿತಿಯ ಸದಸ್ಯ ಜೆ. ರಾಜೇಶ್ ಹಾಗೂ ಸ್ಟೇಷನ್ ಕನ್ಸಲ್ಟೇಟಿವ್ ಸಮಿತಿಯ ಸದಸ್ಯರು ಪಾಲ್ಗೊಂಡಿದ್ದರು.