30.3 C
Bellary
Wednesday, June 19, 2024

Localpin

spot_img

ಬಳ್ಳಾರಿಯಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ

ಬಳ್ಳಾರಿ: ಕಾಂಗ್ರೆಸ್ ಮತ್ತು ಕೆಆರ್ ಪಿಪಿ ಪಕ್ಷದ ಮುಖಂಡ ಹೇಳಿಕೆಗಳಿಂದ ಬಳ್ಳಾರಿಯಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ ಎಂದು ಸಿಪಿಎಂ ಪಕ್ಷದ ಮುಖಂಡರಾದ ಸತ್ಯಬಾಬು ಅವರು ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ಸುದ್ಧಿಗೋಷ್ಠಿಯಲ್ಲಿ  ಮಾತನಾಡಿದ ಅವರು ಬಳ್ಳಾರಿ ನಗರದಲ್ಲಿ ಕೆ ಆರ್ ಪಿಪಿ ಸೋತು ಹೋಗಿದೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿದೆ. ಆದರೆ ಕೆಆರ್ ಪಿಪಿ ಪಕ್ಷದ ಜನಾರ್ಧನ ರೆಡ್ಡಿ ಮತ್ತು ಕಾಂಗ್ರೆಸ್ ಪಕ್ಷದ ಭರತ್ ರೆಡ್ಡಿ ಕಾದಟವನ್ನು ನಗರದ ಜನರ ನೋಡುವಂತಾಗಿದೆ. ವೈಯಕ್ತಿಕ ದೂಷಣೆ ಮಾಡುವುದರಲ್ಲಿ ಸೀಮಿತವಾಗಿದ್ದು ಬಳ್ಳಾರಿ ಅಭಿವೃದ್ಧಿ ಬಗ್ಗೆ ಮಾತನಾಡುತ್ತಿಲ್ಲ ಇದನ್ನು ಸಿಪಿಎಂ ಪಕ್ಷ ಖಂಡಿಸುತ್ತೇವೆ ಎಂದರು.ನಗರ ಶಾಸಕ ಭರತ್ ರೆಡ್ಡಿ ಮತ್ತು ಅವರ ಹಿಂಬಾಲಕರು ಮತ್ತು ಕೆಆರ್ ಪಿಪಿ ಪಕ್ಷದ ಗಂಗಾವತಿ ಶಾಸಕ ಜನಾರ್ಧನ ರೆಡ್ಡಿ ಅವರು ಮತ್ತು ಅವರ ಹಿಂಬಾಲಕರು  ನೋಡುತ್ತಿದ್ದರೆ ಬಳ್ಳಾರಿಯಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ ಎಂದು ಭಾಸವಾಗುತ್ತದೆ.ಜನ ಪರ ಮತ್ತು ಅಭಿವೃದ್ಧಿ ವಿಷಯಗಳ ಬಗ್ಗೆ ಮಾತನಾಡುವಂತೆ ಹಾಗೂ ಟೀಕೆಗಳನ್ನು ಸಕಾರಾತ್ಮಕ ತೆಗೆದುಕೊಳ್ಳುವಂತೆ ಸಲಹೆ ನೀಡಿದರು.

ಶಿವಶಂಕರ್ ಅವರು ಮಾತನಾಡಿ ಕೆಆರ್ ಪಿಪಿ ಪಕ್ಷದ ಶಾಸಕ ಜನಾರ್ಧನ ರೆಡ್ಡಿ ಅವರು ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿನ ಹೇಳಿಕೆ ನಂತರ ಬಳ್ಳಾರಿಯಲ್ಲಿ ವೈಯಕ್ತಿಕ ದ್ವೇಷದ ಪ್ರಾರಂಭವಾಗಿದೆ ಇದು ಸರಿಯಾದ ಕ್ರಮವಲ್ಲ ಎಂದರು.ಕಾಂಗ್ರೆಸ್ ಮತ್ತು ಕೆಆರ್ ಪಿಪಿ ಪಕ್ಷದ ಮುಖಂಡರು ವೈಯಕ್ತಿಕ ದೋಷಣೆ ಮಾಡುವುದನ್ನು ಮೊದಲು ನಿಲ್ಲಿಸಬೇಕು ಬಳ್ಳಾರಿ ಅಭಿವೃದ್ಧಿ ಎರಡು ಪಕ್ಷಗಳ ನಾಯಕರಿಗೆ ಬೆಳಕು ಚೆಲ್ಲುವುದಕ್ಕೆ ಸಾಕಷ್ಟು ಅವಕಾಶಗಳಿವೆ ಎಂದರು ಬಳ್ಳಾರಿಯಲ್ಲಿನ ಮುಂಡ್ರಗಿ ಆಶ್ರಯ ಯೋಜನೆಯಡಿಯಲ್ಲಿ ನಿರ್ಮಾಣವಾದ ಮನೆ ನಿರ್ಮಾಣ, ಕುಡಿಯುವ ನೀರಿನ ಯೋಜನೆ,ಮೆಣಸಿನಕಾಯಿ ಮಾರುಕಟ್ಟೆ.ಅಂಡರ್ ಬ್ರಿಡ್ಜ್, ಆಸ್ಪತ್ರೆ ಮುಂತಾದ ವಿಷಯಗಳ ಬಗ್ಗೆ ಮಾತನಾಡಿ ಎಂದು ಕಾಂಗ್ರೆಸ್ ಪಕ್ಷದ ಶಾಸಕ ಮತ್ತು ಕೆ ಆರ್ ಪಿಪಿ ಪಕ್ಷದ ಮುಖಂಡರು ವಿರುದ್ಧ ಕಿಡಿಕಾರಿದರು.ಬಳ್ಳಾರಿ ಅಭಿವೃದ್ಧಿ ಬಗ್ಗೆ ಮಾತನಾಡುತ್ತಿಲ್ಲ ಹಿತಾಸಕ್ತಿಗೆ ಹೆಚ್ಚಿನ ಆಸಕ್ತಿ ತೋರಬಾರದು ಎಂದು ಇಂತಹ ಪ್ರಚೋದನಕಾರಿ ಭಾಷಣ ಮಾಡುವುದು ನಿಲ್ಲಿಸಿ ಇಂತಹ ಸಂಸ್ಕೃತಿ ಬೆಳೆಯಬಾರದು ಎಂದರುಸೂಲಿಬೆಲೆ, ಉಪೇಂದ್ರ ಮೇಲೆ ಪ್ರಚೋದನಕಾರಿ ಭಾಷಣದ ಮಾಡಿದ ಆರೋಪದ ಮೇಲೆ ಕೇಸ್ ದಾಖಲಿಸಿದ ರೀತಿಯಲ್ಲಿ ಜಿಲ್ಲಾಡಳಿತ ಮತ್ತು ಪೊಲೀಸರು ಸ್ವಯಂ ಪ್ರೇರಿತರಾಗಿ ಸುಮೂಟೋ ಕೇಸ್ ದಾಖಲಿಸುವಂತೆ ಒತ್ತಾಯಿಸಿದ್ದಾರೆ.ಈ ಸಂದರ್ಭದಲ್ಲಿ ಸಿಪಿಎಂ ಪಕ್ಷದ ಮುಖಂಡರಾದ ಚಂದ್ರ ಕುಮಾರಿ ಸೇರಿದಂತೆ ಮತ್ತಿತರ ಇದ್ದರು.

LEAVE A REPLY

Please enter your comment!
Please enter your name here

Related Articles

Stay Connected

53,222FansLike
67,874FollowersFollow
12,303FollowersFollow
105,423SubscribersSubscribe
- Advertisement -spot_img

Latest Articles