ಮರಿಯಮ್ಮನಹಳ್ಳಿ:ಪಟ್ಟಣದ ಸಮೀಪದ ಅಯ್ಯನಹಳ್ಳಿ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿದ ಬನ್ನಿಮಹಾಂಕಾಳಿ ದೇವಸ್ಥಾನದ,ದೇವಿಯ ಮೂರ್ತಿಪ್ರತಿಷ್ಟಾಪನೆ,ಕಳಸಾರೋಹಣ ಕಾರ್ಯಕ್ರಮ ಶುಕ್ರವಾರ ನಡೆಯಿತು.ಇದರ ನಿಮಿತ್ತ ಜಲಾಧಿವಾಸ,ಧಾನ್ಯಾಧಿವಾಸ,ವಸ್ತ್ರಾಧಿವಾಸ,ಪುಷ್ಪಾಧಿವಾಸ,ಶ್ರೀಸೂಕ್ತಹೋಮ,ದುರ್ಗಾಹೋಮ ಈ ಕಾರ್ಯಕ್ರಮಗಳು ಐದು ದಿನಗಳಕಾಲ ಶಾಸ್ತ್ರೋಕ್ತವಾಗಿ ನಡೆದು,ಪಂಚಾಮೃತ ಅಭಿಷೇಕ,ಮಹಾಭಿಷೇಕ ನಂತರ ಶ್ರೀದೇವಿ ಮೂರ್ತಿ ಪ್ರತಿಷ್ಟಾಪನೆ,ಕಳಸಾರೋಹಣ ಜರುಗಿದವು.

