ಶ್ರೀ ಮಾತೃ ಮಹಿಳಾ ಮಂಡಳಿಯಿಂದ ಸಂಭ್ರಮದ ದಾಂಡಿಯ ನೃತ್ಯ ಕಾರ್ಯಕ್ರಮ

ಬೆಳಗಾಯಿತು ವಾರ್ತೆ
ಬಳ್ಳಾರಿ: ಶ್ರೀ ಮಾತೃ ಮಹಿಳಾ ಮಂಡಳಿ (ರಿ.) ಬಳ್ಳಾರಿ ವತಿಯಿಂದ ನವರಾತ್ರಿ ಹಬ್ಬದ ಪ್ರಯುಕ್ತ ಶುಕ್ರವಾರ ಸಂಜೆ ನಗರದ ಶ್ರೀ ಅಭಯ ಆಂಜನೇಯ ಸ್ವಾಮಿ ದೇವಸ್ಥಾನದ ಸಭಾಂಗಣದಲ್ಲಿ ದಾಂಡಿಯ ನೃತ್ಯ ಕಾರ್ಯಕ್ರಮವನ್ನು ಸಂಭ್ರಮದಿಂದ ಆಯೋಜಿಸಲಾಗಿತ್ತು.
ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಸೌಮ್ಯ, ಮಿಷನ್ ಆಫೀಸರ್, ಸುಮಾ, ಸಿಟಿ ಕಾರ್ಪೊರೇಷನ್ ಹೆಲ್ತ್ ಆಫೀಸರ್, ಸ್ತ್ರೀರೋಗ ತಜ್ಞೆ ಡಾ. ವಿಜಯಲಕ್ಷ್ಮಿ, ಪ್ರೇಮ ರೇಣುಕಾ ಚಾರಿಟೇಬಲ್ ಟ್ರಸ್ಟ್‌ನ ಪ್ರತಿನಿಧಿ, ಏರೋಬಿಕ್ ತರಬೇತುದಾರೆ ನಿಶಾ ಚಿರಾಣಿ ಹಾಗೂ ಅಕ್ಷರ ಗ್ಲೋಬಲ್ ಸ್ಕೂಲ್‌ನ ಪ್ರಾಂಶುಪಾಲೆ ಡಾ. ಸುಹಾಸಿನಿ ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು, ಸಾಂಪ್ರದಾಯಿಕ ಉಡುಗೆ ತೊಟ್ಟು ದಾಂಡಿಯ ನೃತ್ಯ ಪ್ರದರ್ಶಿಸಿದರು. ಭಾರತೀಯ ಸಂಸ್ಕೃತಿ ಮತ್ತು ಕಲೆಯನ್ನು ಪ್ರತಿಬಿಂಬಿಸುವ ನೃತ್ಯದೊಂದಿಗೆ ದುರ್ಗಾಮಾತೆಯನ್ನು ಪೂಜಿಸಿ ನವರಾತ್ರಿ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು.
ಕಾರ್ಯಕ್ರಮದಲ್ಲಿ ಅತ್ಯುತ್ತಮ ವಸ್ತ್ರಧಾರಣೆ, ಅಲಂಕಾರ ಹಾಗೂ ನೃತ್ಯ ವಿಭಾಗಗಳಲ್ಲಿ ತಲಾ ಮೂವರು ವಿಜೇತರನ್ನು ಆಯ್ಕೆ ಮಾಡಿ, ಒಟ್ಟು ಒಂಬತ್ತು ಮಂದಿಗೆ ಬಹುಮಾನಗಳನ್ನು ವಿತರಿಸಲಾಯಿತು.
ಸೌಂದರ್ಯ ಮತ್ತು ನಿವೇದಿತಾ ಕಾರ್ಯಕ್ರಮವನ್ನು ನಿರೂಪಿಸಿದರು. ಕೆ. ಪುಷ್ಪ ಚಂದ್ರಶೇಖರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.


Related Articles

Stay Connected

53,222FansLike
67,874FollowersFollow
12,303FollowersFollow
105,423SubscribersSubscribe
- Advertisement -spot_img

Latest Articles