ರೇಡಿಯೋಥೆರಪಿ ಸೇವೆ ಆರಂಭಿಸಿದ ಬಿಎಂಸಿಆರ್‌ಸಿ

ಕೌಲ್‌ ಬಜಾರ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಒಳರೋಗಿಗಳ ಸೇವೆ ಆರಂಭಿಸಲು ಮನವಿ
ಬೆಳಗಾಯಿತು ವಾರ್ತೆ
ಬಳ್ಳಾರಿ
: ಹಲವು ವರ್ಷಗಳಿಂದ ಕಾರ್ಯನಿರ್ವಹಿಸದೆ ಸ್ಥಗಿತಗೊಂಡಿದ್ದ ಕ್ಯಾನ್ಸರ್ ರೇಡಿಯೋಥೆರಪಿ ಯಂತ್ರದ ಬದಲಿಗೆ ಹೊಸ ಯಂತ್ರವನ್ನು ಅಳವಡಿಸಿ, ಕ್ಯಾನ್ಸರ್ ರೋಗಿಗಳಿಗೆ ಚಿಕಿತ್ಸೆ ಸೇವೆ ಆರಂಭಿಸಿರುವ ಬಿಎಂಸಿಆರ್‌ಸಿ (ಹಳೆಯ ವಿಮ್ಸ್‌) ನೂತನ ನಿರ್ದೇಶಕ ಮರಿರಾಜ್ ಜೀರಾ ಅವರಿಗೆ ಅಂದ್ರಾಳ ಸೇವಾ ಸಮಿತಿ ಹಾಗೂ ಸಾಮಾಜಿಕ ಹೋರಾಟಗಾರರು ಭೇಟಿ ನೀಡಿ ಕೃತಜ್ಞತೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ನಿರ್ದೇಶಕ ಮರಿರಾಜ್ ಜೀರಾ ಅವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು. ಕ್ಯಾನ್ಸರ್ ರೋಗಿಗಳಿಗೆ ಅಗತ್ಯವಾದ ರೇಡಿಯೋಥೆರಪಿ ಸೇವೆ ಆರಂಭಿಸಿರುವುದು ಬಳ್ಳಾರಿ ಜಿಲ್ಲೆ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳ ಬಡ ಮತ್ತು ಮಧ್ಯಮ ವರ್ಗದ ರೋಗಿಗಳಿಗೆ ಅನುಕೂಲವಾಗಲಿದೆ ಎಂದು ಮುಖಂಡರು ತಿಳಿಸಿದರು.

ಇದೇ ವೇಳೆ, ಕೌಲ್‌ ಬಜಾರ್ ಪ್ರದೇಶದಲ್ಲಿರುವ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಒಳರೋಗಿಗಳ ಚಿಕಿತ್ಸಾ ಸೇವೆಗಳನ್ನು ಕೂಡಲೇ ಆರಂಭಿಸುವಂತೆ ನಿರ್ದೇಶಕರಿಗೆ ಮನವಿ ಸಲ್ಲಿಸಲಾಯಿತು. ಆಸ್ಪತ್ರೆಯಲ್ಲಿ ಒಳರೋಗಿಗಳ ಸೇವೆ ಆರಂಭಿಸಿದರೆ ಬಳ್ಳಾರಿ ಜಿಲ್ಲೆಯ ಬಡ ಜನರಿಗೆ ಹೆಚ್ಚಿನ ಅನುಕೂಲವಾಗಲಿದ್ದು, ದೂರದ ಊರುಗಳಿಗೆ ತೆರಳಿ ಚಿಕಿತ್ಸೆ ಪಡೆಯುವ ತೊಂದರೆ ತಪ್ಪಲಿದೆ. ಆದ್ದರಿಂದ ಈ ಕುರಿತು ಅಗತ್ಯ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಅಂದ್ರಾಳ ಸೇವಾ ಸಮಿತಿ ಅಧ್ಯಕ್ಷ ಆರ್. ವೆಂಕಟರೆಡ್ಡಿ, ಹಿರಿಯ ವಕೀಲ ಕೆ. ರಾಮಿರೆಡ್ಡಿ, ಸಾಮಾಜಿಕ ಹೋರಾಟಗಾರರಾದ ರಾಣಿ ತೋಟದ ವಿರೂಪಾಕ್ಷಿ, ಮುದುಗಲ್ ಶಂಕರ್, ಬಿ. ಮಲ್ಲಿಕಾರ್ಜುನ ಹಾಗೂ ಪಿ. ರಾಜಮೋಹನ್ ರೆಡ್ಡಿ ಸೇರಿದಂತೆ ಇತರರು ಉಪಸ್ಥಿತರಿದ್ದರು.


Related Articles

Stay Connected

53,222FansLike
67,874FollowersFollow
12,303FollowersFollow
105,423SubscribersSubscribe
- Advertisement -spot_img

Latest Articles