ಬೆಳಗಾಯಿತು ವಾರ್ತೆ
ಬಳ್ಳಾರಿ: ನಗರದ ಕಮ್ಮಾ ಭವನದಲ್ಲಿ ಅಕ್ಟೋಬರ್ 9ರಿಂದ 13ರವರೆಗೆ ಇಂಡೋನೇಷ್ಯಾ–ಥೈಲ್ಯಾಂಡ್ ಎಕ್ಸ್ಪೋ ಆಯೋಜಿಸಲಾಗಿದ್ದು, ವಿವಿಧ ವಿನ್ಯಾಸಗಳ ಪೀಠೋಪಕರಣಗಳು ಹಾಗೂ ಗೃಹೋಪಯೋಗಿ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ನಡೆಯುತ್ತಿದೆ.
ಎಕ್ಸ್ಪೋದಲ್ಲಿ ಪ್ರೀಮಿಯಂ ಸೋಫಾಗಳು, ಡೈನಿಂಗ್ ಟೇಬಲ್ಗಳು, ಮರದ ಕಲಾಕೃತಿಗಳು, ಕಾರ್ವಿಂಗ್ ವಸ್ತುಗಳು, ಬೆಡ್ಶೀಟ್ಗಳು, ಬ್ಲಾಂಕೆಟ್ಗಳು, ರಿಕ್ಲೈನರ್ ಕುರ್ಚಿಗಳು ಸೇರಿದಂತೆ ವಿವಿಧ ಬಗೆಯ ಗೃಹೋಪಯೋಗಿ ವಸ್ತುಗಳು ಗ್ರಾಹಕರಿಗೆ ಲಭ್ಯವಿವೆ.
ಗ್ರಾಹಕರ ಅಗತ್ಯ ಮತ್ತು ಇಷ್ಟಕ್ಕೆ ಅನುಗುಣವಾಗಿ ಕಸ್ಟಮೈಸ್ ಮಾಡಿದ ವಸ್ತುಗಳನ್ನು ತಯಾರಿಸಿಕೊಡುವ ವ್ಯವಸ್ಥೆಯೂ ಇದೆ. ಮನೆಯ ಒಳಾಂಗಣಕ್ಕೆ ಹೊಂದುವ ವಿನ್ಯಾಸ ಹಾಗೂ ಆಯ್ಕೆಯ ಆಧಾರದ ಮೇಲೆ ವಸ್ತುಗಳನ್ನು ಸಿದ್ಧಪಡಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.
ಎಕ್ಸ್ಪೋದಲ್ಲಿ ಆಯ್ದ ವಸ್ತುಗಳ ಮೇಲೆ ಶೇ.70ರವರೆಗೆ ರಿಯಾಯಿತಿ ನೀಡಲಾಗುತ್ತಿದೆ ಎಂದು ಆಯೋಜಕರು ತಿಳಿಸಿದ್ದಾರೆ. ವಿವಿಧ ವಿನ್ಯಾಸಗಳು ಹಾಗೂ ಗುಣಮಟ್ಟದ ಪೀಠೋಪಕರಣಗಳನ್ನು ಒಂದೇ ಸ್ಥಳದಲ್ಲಿ ವೀಕ್ಷಿಸಿ, ತಮ್ಮ ಅಗತ್ಯಕ್ಕೆ ತಕ್ಕಂತೆ ಖರೀದಿಸಲು ಗ್ರಾಹಕರಿಗೆ ಇದು ಉತ್ತಮ ಅವಕಾಶವಾಗಿದೆ.





