ಬೆಳಗಾಯಿತು ವಾರ್ತೆ
ಬಳ್ಳಾರಿ: ಕರ್ನಾಟಕ ರಾಜ್ಯ (6–8) ಪದವೀಧರ ಪ್ರಾಥಮಿಕ ಶಿಕ್ಷಕರ ಸಂಘ (ನೋಂದಣಿ), ಬೆಂಗಳೂರು ಆಶ್ರಯದಲ್ಲಿ ನಡೆದ ಬಳ್ಳಾರಿ ಜಿಲ್ಲಾ ಮಟ್ಟದ ಜಿಪಿಟಿ ಅಸೋಸಿಯೇಷನ್ ಚುನಾವಣೆಯಲ್ಲಿ ಜಿಲ್ಲಾಧ್ಯಕ್ಷರಾಗಿ ಅಂಬರೀಷ್ ಆಯ್ಕೆಯಾಗಿದ್ದಾರೆ.
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸಿ. ನಿಂಗಪ್ಪ ಅವರ ನೇತೃತ್ವದಲ್ಲಿ ನಡೆದ ಚುನಾವಣೆಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಮಾರುತಿ ಗೊಂಬೆ ಹಾಗೂ ಖಜಾಂಚಿಯಾಗಿ ಸಂಡೂರು ಯೋಗಾನಂದ ಪಾಟೀಲ್ ಆಯ್ಕೆಯಾದರು.
ಬಳ್ಳಾರಿ, ಕುರುಗೋಡು, ಕಂಪ್ಲಿ ಹಾಗೂ ಸಿರುಗುಪ್ಪ ತಾಲೂಕುಗಳಿಂದ ಒಟ್ಟು 12 ಮತದಾರರು ಚುನಾವಣೆಯಲ್ಲಿ ಭಾಗವಹಿಸಿದ್ದರು. ಅಧ್ಯಕ್ಷ, ಪ್ರಧಾನ ಕಾರ್ಯದರ್ಶಿ ಹಾಗೂ ಖಜಾಂಚಿ ಹುದ್ದೆಗಳಿಗೆ ಪ್ರತಿಯೊಬ್ಬ ಮತದಾರರು ತಲಾ ಒಂದು ಮತದಂತೆ ಒಟ್ಟು ಮೂರು ಮತಗಳನ್ನು ಚಲಾಯಿಸಿದರು.
ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಅಂಬರೀಷ್ ಹಾಗೂ ದಮ್ಮೂರು ವೀರೇಶ್, ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಮಾರುತಿ ಗೊಂಬೆ ಹಾಗೂ ರಾಜಾಪುರ ವೀರೇಶ್ ಮತ್ತು ಖಜಾಂಚಿ ಸ್ಥಾನಕ್ಕೆ ಯೋಗಾನಂದ ಪಾಟೀಲ್ ಹಾಗೂ ಲಿಖಿತ್ ಕುಮಾರ್ ಸ್ಪರ್ಧಿಸಿದ್ದರು. ಮತ ಎಣಿಕೆ ಬಳಿಕ ಚುನಾವಣಾಧಿಕಾರಿ ಗಿರೀಶ್ ಫಲಿತಾಂಶ ಪ್ರಕಟಿಸಿದರು.
2016ರಲ್ಲಿ ಸಂಘ ಸ್ಥಾಪನೆ
ಕರ್ನಾಟಕ ರಾಜ್ಯ (6–8) ಪದವೀಧರ ಪ್ರಾಥಮಿಕ ಶಿಕ್ಷಕರ ಸಂಘವನ್ನು 2016ರಲ್ಲಿ ಸ್ಥಾಪಿಸಲಾಗಿದ್ದು, ದಮ್ಮೂರು ವೀರೇಶ್ ಅವರು 2017ರಿಂದ ಸಂಘದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು ಎಂದು ಸಂಘದ ಪ್ರತಿನಿಧಿಗಳು ತಿಳಿಸಿದ್ದಾರೆ. ಸಂಘದ ಬೈಲಾ ಹಾಗೂ ನೋಂದಣಿ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಜಿಲ್ಲಾ ಮಟ್ಟದಲ್ಲಿ ಚುನಾವಣೆ ನಡೆಸಿರುವುದು ಇದೇ ಮೊದಲ ಬಾರಿಗೆ ಎಂದು ಅವರು ತಿಳಿಸಿದ್ದಾರೆ.
ನೂತನ ಜಿಲ್ಲಾಧ್ಯಕ್ಷ ಅಂಬರೀಷ್, ಪ್ರಧಾನ ಕಾರ್ಯದರ್ಶಿ ಮಾರುತಿ ಗೊಂಬೆ ಹಾಗೂ ಖಜಾಂಚಿ ಯೋಗಾನಂದ ಪಾಟೀಲ್ ಅವರಿಗೆ ಗುಂಡಪ್ಪ ನವರ ನಾಗರಾಜ, ತುಕಾರಾಂ ಗೊರವ, ಸಣ್ಣ ಮಾರೆಪ್ಪ, ಮೃತ್ಯುಂಜಯ ಸ್ವಾಮಿ, ಎರಿಸ್ವಾಮಿ, ಶಿವಶಂಕರ್, ಸಿದ್ದಪ್ಪ, ವೀರೇಶ್, ತಮ್ಮಣ್ಣ, ಪರಶುರಾಮ, ಹನುಮಂತಪ್ಪ, ದೊಡ್ಡಬಸಪ್ಪ, ಚಂದ್ರಶೇಖರ್, ದೇವಣ್ಣ, ಬಸವರಾಜ, ಮಹದೇವ, ಸಂತೋಷ, ಶಾಶವಲಿ, ನಾಗಭೂಷಣ, ಮಂಜುನಾಥ, ಲಿಂಗರಾಜ್, ಉಮೇಶ್, ಹೊನ್ನೂರು ಸ್ವಾಮಿ, ಚಲಪತಿ, ಹುಲುಗಪ್ಪ, ದುರ್ಗಪ್ಪ, ಸ್ವಾಮಿ, ದಿನೇಶ್, ಸುಧೀಂದ್ರ, ಜಯರಾಮ್, ವಿರೂಪಾಕ್ಷಪ್ಪ, ಗವಿಸಿದ್ದ ಹಾಗೂ ವಿಜಯಕುಮಾರ್ ಸೇರಿದಂತೆ ಹಲವರು ಅಭಿನಂದನೆ ಸಲ್ಲಿಸಿದ್ದಾರೆ.





