ಬಳ್ಳಾರಿ ನಗರದ 7,561 ಮತದಾರರ ಹೆಸರು ಅಳಿಸಲು ಯತ್ನ: ನಾರಾ ಭರತ್ ರೆಡ್ಡಿ

ಬೆಳಗಾಯಿತು ವಾರ್ತೆ
ಬಳ್ಳಾರಿ: ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರದ 7,561 ಮತದಾರರ ಹೆಸರುಗಳನ್ನು ಅಳಿಸಲು ವ್ಯವಸ್ಥಿತವಾಗಿ ಯತ್ನಿಸಲಾಗಿದೆ ಎಂದು ಶಾಸಕ ನಾರಾ ಭರತ್ ರೆಡ್ಡಿ ಆರೋಪಿಸಿದರು.
ನಗರದ ರಾಘವೇಂದ್ರ ಚಿತ್ರಮಂದಿರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಒಬ್ಬ ಬಿಎಲ್‌ಎ ಗರಿಷ್ಠ 30 ಫಾರಂ-7 ಸಲ್ಲಿಸಲು ಅವಕಾಶವಿದ್ದರೂ, ಸಾವಿರಾರು ಮತದಾರರ ಹೆಸರುಗಳ ಕುರಿತು ಫಾರಂ-7 ಸಲ್ಲಿಸಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ ಎಂದರು.
ಹೆಸರು ಅಳಿಸಲು ಸಲ್ಲಿಸಲಾದ ಪಟ್ಟಿಯಲ್ಲಿ ಶೇ.98.08ರಷ್ಟು ಮಂದಿ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದವರು ಎಂಬುದು ಗಮನಾರ್ಹ. ಅಲ್ಪಸಂಖ್ಯಾತರು ಮಾತ್ರವಲ್ಲದೆ, ಬಿಜೆಪಿಗೆ ಮತ ಹಾಕದ ವಿವಿಧ ಸಮುದಾಯಗಳ ಮತದಾರರ ಹೆಸರುಗಳನ್ನು ಅಳಿಸುವ ಪ್ರಯತ್ನ ನಡೆದಿದೆ ಎಂದು ಆರೋಪಿಸಿದರು.
ಈ ಕುರಿತು ಪೊಲೀಸ್ ತನಿಖೆ ನಡೆಸಿ, ಫಾರಂ-7ಗಳನ್ನು ಸಿದ್ಧಪಡಿಸಿದವರು ಹಾಗೂ ಇದರ ಹಿಂದೆ ಇರುವವರನ್ನು ಪತ್ತೆಹಚ್ಚಬೇಕು. ತಪ್ಪಿತಸ್ಥರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು ಎಂದು ಒತ್ತಾಯಿಸಿದರು. ಮತದಾರರ ಹೆಸರು ಅಳಿಸುವ ಅಂತಿಮ ಕ್ರಮವು ನಿಯಮಾನುಸಾರ ಪರಿಶೀಲನೆ ಮತ್ತು ಆಕ್ಷೇಪಣೆಗಳ ನಂತರವೇ ನಡೆಯಬೇಕು ಎಂದರು.
ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರು ಹಾಗೂ ಪಾಲಿಕೆ ಸದಸ್ಯರು ಉಪಸ್ಥಿತರಿದ್ದರು.

Related Articles

Stay Connected

53,222FansLike
67,874FollowersFollow
12,303FollowersFollow
105,423SubscribersSubscribe
- Advertisement -spot_img

Latest Articles