ಕಿರೀಟಿ ರೆಡ್ಡಿ ಜನ್ಮದಿನದ ಅಂಗವಾಗಿ ಅನ್ನದಾಸೋಹ

ಬೆಳಗಾಯಿತು ವಾರ್ತೆ
ಬಳ್ಳಾರಿ: ಯುವ ಹೀರೋ ಹಾಗೂ ಡ್ಯಾನ್ಸಿಂಗ್ ಸ್ಟಾರ್ ಗಾಲಿ ಕಿರೀಟಿ ರೆಡ್ಡಿ ಅವರ ಜನ್ಮದಿನದ ಅಂಗವಾಗಿ ಯುವ ಮುಖಂಡ ಹುಂಡೇಕರ್ ರಾಜೇಶ್ ಅವರ ನೇತೃತ್ವದಲ್ಲಿ ನಗರದ 13ನೇ ವಾರ್ಡ್‌ನ ಕೋಲ್ಮಿ ಚೌಕ್ ವೃತ್ತದಲ್ಲಿ ಮಂಗಳವಾರ ಅನ್ನದಾಸೋಹ ಕಾರ್ಯಕ್ರಮ ಆಯೋಜಿಸಲಾಯಿತು.
ಕಿರೀಟಿ ಅವರ ಹುಟ್ಟು ಹಬ್ಬವನ್ನು ಕೆಕ್ ಕತ್ತರಿಸುವ ಮೂಲಕ ಆಚರಿಸಿದರು.
ಜನ್ಮದಿನದ ಸಂಭ್ರಮವನ್ನು ಸಮಾಜಮುಖಿ ಕಾರ್ಯದ ಮೂಲಕ ಆಚರಿಸುವ ಉದ್ದೇಶದಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಬಡವರು ಹಾಗೂ ಅಗತ್ಯವಿರುವವರಿಗೆ ಅನ್ನ ವಿತರಿಸಲಾಯಿತು. ಈ ಮೂಲಕ ಜನಸೇವೆಯೇ ನಿಜವಾದ ಸಂಭ್ರಮ ಎಂಬ ಸಂದೇಶ ಸಾರಲಾಯಿತು.
ಈ ಸಂದರ್ಭದಲ್ಲಿ ಕಿರೀಟಿ ರೆಡ್ಡಿ ಅವರಿಗೆ ಜನ್ಮದಿನದ ಶುಭಾಶಯಗಳನ್ನು ಸಲ್ಲಿಸಿ, ಅವರ ಸಿನಿಮಾ ಪಯಣ ಯಶಸ್ವಿಯಾಗಲಿ, ಉತ್ತಮ ಭವಿಷ್ಯ ಹಾಗೂ ಹೆಚ್ಚಿನ ಜನಮನ್ನಣೆ ದೊರೆಯಲಿ ಎಂದು ಹಾರೈಸಲಾಯಿತು.
ಕಾರ್ಯಕ್ರಮದಲ್ಲಿ ಮುಖಂಡರಾದ ಹುಂಡೇಕರ್ ರಾಜೇಶ್, ಸ್ವಾಮಿ ನಾಯಕ್, ಗಾದಿಲಿಂಗ, ದುರ್ಗಪ್ಪ, ರವಿ ಅಪ್ಪು, ರಾಮಾಂಜನಿ, ರಮಾಲಿ ನಾಯಕ್, ಎಲ್ಲಪ್ಪ, ಫೈಜಾನ್, ಪವನ್ ಕುಮಾರ್, ವೀರೇಶ್, ದಸ್ತಗಿರಿ, ಬಸವರಾಜ್, ಮಿಥುನ್ ಕುಮಾರ್, ಕೇದಾರನಾಥ್, ಗೋವಿಂದ ನಾಯಕ್, ರಾಮಕೃಷ್ಣ, ಶೇಖರ್, ಇಮಾಮ್ ಹುಸೇನ್, ಮಬ್ಬು, ಸುರೇಶ್ ಸೇರಿದಂತೆ ನೂರಾರು ಅಭಿಮಾನಿಗಳು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.

Related Articles

Stay Connected

53,222FansLike
67,874FollowersFollow
12,303FollowersFollow
105,423SubscribersSubscribe
- Advertisement -spot_img

Latest Articles