ಕಲ್ಯಾಣ ಕರ್ನಾಟಕಕ್ಕೆ ಕೀರ್ತಿ ತಂದ ಬಳ್ಳಾರಿಯ ವಿದ್ಯಾರ್ಥಿನಿ

ಬೆಳಗಾಯಿತು ವಾರ್ತೆ
ಬಳ್ಳಾರಿ: ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (NEET-UG)–2026ರ ಫಲಿತಾಂಶದಲ್ಲಿ ಬಳ್ಳಾರಿಯ ನಾರಾಯಣ ಪಿಯು & +2 ಕಾಲೇಜಿನ ವಿದ್ಯಾರ್ಥಿನಿ ಎನ್. ಸಾಯಿ ಶ್ರಾವ್ಯ ಅಖಿಲ ಭಾರತ ಮಟ್ಟದಲ್ಲಿ 150ನೇ ರ್ಯಾಂಕ್ ಗಳಿಸುವ ಮೂಲಕ ಗಮನಾರ್ಹ ಸಾಧನೆ ಮಾಡಿದ್ದಾರೆ. ಜೊತೆಗೆ ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಪ್ರಥಮ ಸ್ಥಾನ ಪಡೆದು ಬಳ್ಳಾರಿ ಜಿಲ್ಲೆ ಹಾಗೂ ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ.
ಎನ್. ಸಾಯಿ ಶ್ರಾವ್ಯ ಅವರು ಒಟ್ಟು 720 ಅಂಕಗಳಲ್ಲಿ 687 ಅಂಕಗಳನ್ನು ಗಳಿಸಿದ್ದು, 99.9923996 ಶೇಕಡಾ ಅಂಕ ಹಾಗೂ 99.99 ಪರ್ಸೆಂಟೈಲ್ ದಾಖಲಿಸಿದ್ದಾರೆ. ಸಾಮಾನ್ಯ (UR) ವಿಭಾಗದಲ್ಲಿ ಈ ಸಾಧನೆ ಮಾಡಿ ದೇಶದ ಪ್ರತಿಷ್ಠಿತ ವೈದ್ಯಕೀಯ ಕಾಲೇಜುಗಳ ಪ್ರವೇಶಕ್ಕೆ ಅರ್ಹತೆ ಪಡೆದಿದ್ದಾರೆ.
ವಿದ್ಯಾರ್ಥಿನಿಯ ಈ ಸಾಧನೆಗೆ ನಾರಾಯಣ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಡಾ. ಪಿ. ನಾರಾಯಣ, ನಿರ್ದೇಶಕಿ ಡಾ. ಪಿ. ಸಿಂಧೂರ, ಬೆಂಗಳೂರು ದಕ್ಷಿಣ ವಲಯದ ಕೋರ್ ಡೀನ್ ಸುರೇಂದರ್ ರೆಡ್ಡಿ, ದಕ್ಷಿಣ ವಲಯದ ಎಜಿಎಂ ರೂಪಾ ಜಿ, ಬಾಷಾ, ಬಾಬು, ವಿಭಾಗೀಯ ಡೀನ್ ಜಗದೀಶ್, ಅನಂತ್ ರಾವ್, ಪ್ರಾಂಶುಪಾಲ ಮೊಹಮ್ಮದ್ ಗೌಸ್ ಹಾಗೂ ಕಾಲೇಜಿನ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಅಭಿನಂದನೆ ಸಲ್ಲಿಸಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಸಂಸ್ಥೆಯ ಪ್ರತಿನಿಧಿಗಳು, ವಿದ್ಯಾರ್ಥಿನಿಯ ಕಠಿಣ ಪರಿಶ್ರಮ, ಪೋಷಕರ ಪ್ರೋತ್ಸಾಹ ಮತ್ತು ಕಾಲೇಜಿನ ಗುಣಮಟ್ಟದ ಶೈಕ್ಷಣಿಕ ತರಬೇತಿಯ ಫಲವಾಗಿ ಈ ಸಾಧನೆ ಸಾಧ್ಯವಾಗಿದೆ ಎಂದು ತಿಳಿಸಿದರು. ರಾಷ್ಟ್ರೀಯ ಮಟ್ಟದಲ್ಲಿ ಇನ್ನಷ್ಟು ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡುವಂತೆ ಅಗತ್ಯ ಮಾರ್ಗದರ್ಶನ ಮತ್ತು ತರಬೇತಿಯನ್ನು ಮುಂದುವರಿಸಲಾಗು ವುದು ಎಂದರು.
ಎನ್. ಸಾಯಿ ಶ್ರಾವ್ಯ ಅವರ ಸಾಧನೆ ಬಳ್ಳಾರಿ ಜಿಲ್ಲೆಯ ಶೈಕ್ಷಣಿಕ ಕ್ಷೇತ್ರಕ್ಕೆ ಹೊಸ ಗರಿಮೆ ತಂದುಕೊಟ್ಟಿದ್ದು, ವೈದ್ಯಕೀಯ ಶಿಕ್ಷಣದ ಕನಸು ಕಾಣುತ್ತಿರುವ ಸಾವಿರಾರು ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಿದೆ.


Related Articles

Stay Connected

53,222FansLike
67,874FollowersFollow
12,303FollowersFollow
105,423SubscribersSubscribe
- Advertisement -spot_img

Latest Articles