ಮನೆ-ಮನೆಗೆ ಮತದಾರರ ಪಟ್ಟಿ ಪರಿಷ್ಕರಣೆ: ಶೇ. 85.56 ರಷ್ಟು ಪ್ರಗತಿ

ಬೆಳಗಾಯಿತು ವಾರ್ತೆ
ಬಳ್ಳಾರಿ:
ಜಿಲ್ಲೆಯಲ್ಲಿ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಪ್ರಕ್ರಿಯೆ ಚುರುಕಿನಿಂದ ಸಾಗುತ್ತಿದ್ದು, ಬೂತ್ ಮಟ್ಟದ ಅಧಿಕಾರಿಗಳು ಮತದಾರರಿಗೆ ಎಸ್ಐಆರ್ ಎನ್ಯುಮರೇಶನ್ ನಮೂನೆಗಳನ್ನು ತಲುಪಿಸಲು ಮನೆ-ಮನೆಗೆ ಭೇಟಿ ನೀಡುವ ಪ್ರಕ್ರಿಯೆ ನಡೆಯುತ್ತಿದೆ. ಜಿಲ್ಲೆಯಲ್ಲಿ ಈವರೆಗೆ ಶೇ.85.56 ರಷ್ಟು ಪ್ರಗತಿ ಸಾಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ನಾಗೇಂದ್ರ ಪ್ರಸಾದ್.ಕೆ ಅವರು ತಿಳಿಸಿದ್ದಾರೆ.
ಜಿಲ್ಲೆಯ ಒಟ್ಟು 12,29,586 ಮತದಾರರಿಗೆ ಈಗಾಗಲೇ ಅಗತ್ಯವಿರುವ ಗಣತಿ ನಮೂನೆಗಳನ್ನು ಮುದ್ರಿಸಿ ಬಿ.ಎಲ್.ಒ ಗಳಿಗೆ ವಿತರಿಸಲಾಗಿದೆ. ಜಿಲ್ಲೆಯಲ್ಲಿ ಒಟ್ಟಾರೆ ಶೇ. 97.83 ರಷ್ಟು ಮತದಾರರ ಮ್ಯಾಪಿಂಗ್ ಕಾರ್ಯ ಪೂರ್ಣಗೊಂಡಿದೆ.
*ಗಣತಿ ಮತ್ತು ಡಿಜಿಟಲೀಕರಣ:*
ಮನೆ-ಮನೆ ಗಣತಿ ಹಾಗೂ ಡಿಜಿಟಲೀಕರಣ ಪ್ರಕ್ರಿಯೆಯು ಜೂನ್ 30 ರಿಂದ ಆರಂಭವಾಗಿದ್ದು, ಜುಲೈ 29 ರವರೆಗೆ ನಡೆಯಲಿದೆ. ಜಿಲ್ಲೆಯಾದ್ಯಂತ ಇದುವರೆಗೆ ಒಟ್ಟು 10,55,044 (ಶೇ. 85.56) ಗಣತಿ ನಮೂನೆಗಳನ್ನು ಈಗಾಗಲೇ ವಿತರಿಸಲಾಗಿದೆ. ಪ್ರಸ್ತುತ 1,73,142 (ಶೇ. 14.08) ನಮೂನೆಗಳ ಡಿಜಿಟಲೀಕರಣ ಕಾರ್ಯ ಮುಕ್ತಾಯಗೊಂಡಿದೆ. ಇದಲ್ಲದೆ, 1,348 ಮತದಾರರು ಆನ್‌ಲೈನ್ ಮೂಲಕ ಸ್ವತಃ ನಮೂನೆಗಳನ್ನು ಸಲ್ಲಿಸಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಪಟ್ಟಿ ಪರಿಷ್ಕರಣೆ ವೇಳೆ ಒಟ್ಟು 1,626 ಮತದಾರರನ್ನು ವಿಶೇಷ ವರ್ಗದಡಿ ಗುರುತಿಸಲಾಗಿದೆ. ಇದರಲ್ಲಿ 808 ಮೃತ ಮತದಾರರು, 593 ಕಾಯಂ ಸ್ಥಳಾಂತರಗೊAಡವರು, 195 ಈಗಾಗಲೇ ನೊಂದಾಯಿತರಾಗಿರುವವರು, 11 ಗೈರುಹಾಜರಿ/ಪತ್ತೆಯಾಗದ ಮತದಾರರು ಹಾಗೂ 19 ಇತರ ಪ್ರಕರಣಗಳು ಒಳಗೊಂಡಿವೆ.
*ವಿಧಾನಸಭಾವಾರು ಪ್ರಗತಿ (ಜುಲೈ 7, ಸಂಜೆ 06 ಗಂಟೆಯ ವರೆಗೆ):*
*ಕಂಪ್ಲಿ (91):* 2,28,666 ಮತದಾರರಿದ್ದು, 2,18,984 ಗಣತಿ ನಮೂನೆಗಳನ್ನು ವಿತರಿಸಲಾಗಿದೆ. 48,727 ನಮೂನೆಗಳನ್ನು ಡಿಜಿಟಲೀಕರಣಗೊಳಿಸಲಾಗಿದೆ.
*ಸಿರುಗುಪ್ಪ (92):* 2,28,277 ಮತದಾರರಿದ್ದು, 2,20,893 ಗಣತಿ ನಮೂನೆಗಳನ್ನು ವಿತರಿಸಲಾಗಿದೆ. 42,625 ನಮೂನೆಗಳನ್ನು ಡಿಜಿಟಲೀಕರಣಗೊಳಿಸಲಾಗಿದೆ.
*ಬಳ್ಳಾರಿ ಗ್ರಾಮೀಣ (93):* 2,51,325 ಮತದಾರರಿದ್ದು, 2,01,240 ಗಣತಿ ನಮೂನೆಗಳನ್ನು ವಿತರಿಸಲಾಗಿದೆ. 11,419 ನಮೂನೆ ಡಿಜಿಟಲೀಕರಣವಾಗಿವೆ.
*ಬಳ್ಳಾರಿ ನಗರ (94):* 2,79,144 ಮತದಾರರಿದ್ದು, 1,91,950 ಗಣತಿ ನಮೂನೆಗಳನ್ನು ವಿತರಿಸಲಾಗಿದೆ. 11,583 ನಮೂನೆಗಳನ್ನು ಡಿಜಿಟಲೀಕರಣಗೊಳಿಸಲಾಗಿದೆ.
*ಸಂಡೂರು(95):* 2,42,174 ಮತದಾರರಿದ್ದು, 2,18,977 ಗಣತಿ ನಮೂನೆಗಳನ್ನು ವಿತರಿಸಲಾಗಿದೆ. 58,788 ನಮೂನೆಗಳನ್ನು ಡಿಜಿಟಲೀಕರಣಗೊಳಿಸಲಾಗಿದೆ.
ಜಿಲ್ಲೆಯಲ್ಲಿ ಮತದಾರರ ಪಟ್ಟಿಯನ್ನು ಅತ್ಯಂತ ಪಾರದರ್ಶಕವಾಗಿ ರೂಪಿಸಲು ಸಾರ್ವಜನಿಕರು ಮತ್ತು ಮತದಾರರು ತಮ್ಮ ಮನೆಗೆ ಭೇಟಿ ನೀಡುವ ಬಿ.ಎಲ್.ಒ ಅಧಿಕಾರಿಗಳಿಗೆ ಅಗತ್ಯ ಮಾಹಿತಿ ನೀಡಿ ಸಹಕರಿಸಬೇಕು ಎಂದು ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್.ಕೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related Articles

Stay Connected

53,222FansLike
67,874FollowersFollow
12,303FollowersFollow
105,423SubscribersSubscribe
- Advertisement -spot_img

Latest Articles