ಮರಿಯಮ್ಮನಹಳ್ಳಿ:ಮೈಸೂರು ರಾಜ್ಯಕರ್ನಾಟಕ ಎಂದು ನಾಮಕರಣಗೊಂಡು 50ವರ್ಷಗಳು ಸಂದಿದ್ದು,ಸುವರ್ಣ ಸಂಭ್ರಮದ ನೆನಪನ್ನು ಸ್ಮರಣೆಯನ್ನಾಗಿಸುವ ಸಲುವಾಗಿಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯೋಜನೆ ಮಾಡಿರುವ ಕನ್ನಡ ಜ್ಯೋತಿ ರಥಯಾತ್ರೆ ನಾಡಿನಾದ್ಯಂತ ಸಂಚರಿಸುತ್ತಿದ್ದು ಈ ರಥಯಾತ್ರೆಯ ವಾಹನ ಭಾನುವಾರ ಪಟ್ಟಣಕ್ಕೆ ಪ್ರವೇಶಿಸಿತು.
ಹೊಸಪೇಟೆ ಕಡೆಯಿಂದ ಆಗಮಿಸಿದ ಸುವರ್ಣ ಸಂಭ್ರಮ ಕನ್ನಡ ಜ್ಯೋತಿ ರಥಯಾತ್ರೆಯನ್ನು ತಾಲೂಕಿನ ಗಡಿಯ ಹೊಸಪೇಟೆ-ಶಿವಮೊಗ್ಗ ರಾಜ್ಯ ಹೆದ್ದಾರಿಯಲ್ಲಿನ ನಂದಿಬಂಡಿ ಗ್ರಾಮದ ಬಳಿ ತಹಶಿಲ್ದಾರವಿಶ್ವಜೀತ್ ಮೆಹೆತಾ,ತಾ.ಪಂ.ಈ.ಓ.ಉಮೇಶ ಅವರು ತಾಲೂಡಾಳಿತ ಮತ್ತು ತಾಲೂಕಿನ ಜನತೆಯ ಪರವಾಗಿ ಭವ್ಯವಾಗಿ ಸ್ವಾಗತಿಸಿ,ಬೀಳ್ಕೊಟ್ಟ ರು.
