25.2 C
Bellary
Friday, June 21, 2024

Localpin

spot_img

ಭೂಮಿಗಿಂತಲೂ ದೊಡ್ಡ ಗ್ರಹ ‘Toi715B’ ಪತ್ತೆಹಚ್ಚಿದ ನಾಸಾ

ಬೆಳಗಾಯಿತು ವಾರ್ತೆ / https://belagayithu.in

ವಿಜ್ಞಾನ ಲೋಕದಲ್ಲಿ ಅಚ್ಚರಿಗಳು ಮೂಡುತ್ತಿವೆ. ಅದರ ಸಾಲಿಗೆ ನಾಸಾ (NASA) ಕೂಡ ಮತ್ತೊಂದು ಮಹತ್ತರ ಹೆಜ್ಜೆ ಇಟ್ಟಿದೆ. ಆರು ವರ್ಷಗಳ ಹಿಂದೆ ನಾಸಾ ಟೆಸ್ (TES) ಎನ್ನುವ ಉಪಗ್ರಹವನ್ನು ಉಡಾವಣೆ ಮಾಡಿತ್ತು. ಈ ಉಪಗ್ರಹ ತನ್ನ ಕಕ್ಷೆಯನ್ನು ತಲುಪಿದ್ದು, ಹಲವು ಮಾಹಿತಿಗಳನ್ನು ರವಾನಿಸುತ್ತಿದೆ. ಅದರಂತೆ, ಭೂಮಿಗಿಂತಲೂ ದೊಡ್ಡದಾಗಿರುವ ಗ್ರಹವೊಂದನ್ನು ಟೆಸ್ ಪತ್ತೆ ಹಚ್ಚಿದ್ದು, ಇದಕ್ಕೆ ನಾಸಾ Toi715B ಎಂದು ನಾಮಕರಣ ಮಾಡಿದೆ.

ಈ ಬಗ್ಗೆ ಮಾತನಾಡಿದ ನೆಹರು ತಾರಾಲಯದ ನಿರ್ಧೆಶಕ ಗುರುಪ್ರಸಾಧ್, ಭೂಮಿಯಂತಿರುವ ಮತ್ತೊಂದು ಗ್ರಹ ಪತ್ತೆಯಾಗಿದೆ. ನಾಸಾ ಅನ್ವೇಷಣೆಯಲ್ಲಿ ಪತ್ತೆಯಾಗಿರುವ ವಿಶೇಷ ಗ್ರಹ ಇದಾಗಿದ್ದು, ಇದು ಭೂಮಿಗಿಂತ ಒಂದುವರೆ ಪಟ್ಟು ದೊಡ್ಡದಾಗಿದೆ. ಇದಕ್ಕೆ Toi715B ಎಂದು ನಾಸಾ ನಾಮಕರಣ ಮಾಡಿದೆ ಎಂದರು.ಇನ್ನು, ಈ ಗ್ರಹವನ್ನ ಪತ್ತೆ ಮಾಡಲು ನಾಸಾ ಟೆಸ್ ಎನ್ನುವ ಉಪಗ್ರಹವನ್ನ 2018 ರಲ್ಲಿ ಉಡಾವಣೆ ಮಾಡಿತ್ತು. ಇದೀಗಾ 6 ವರ್ಷದ ಬಳಿಕ TOi715B ಗ್ರಹಕ್ಕೆ ತಲುಪಿದ್ದು, ಹಲವು ಮಾಹಿತಿಗಳನ್ನ ನೀಡುತ್ತಿದೆ. ಸದ್ಯ, TOi715B ನಲ್ಲಿ ದ್ರವ ರೂಪದ ವಾತಾವರಣ ಇದ್ದು, ಭೂಮಿಯ ಮೇಲಿರುವ ವಾತಾವರಣದ ರೀತಿಯನ್ನ ಒಳಗೊಂಡಿದೆ. ಈ ಗ್ರಹದಿಂದ ಬಂದ ಬೆಳಕು ಭೂಮಿಯನ್ನ ತಲುಪಲು 137 ವರ್ಷ ತೆಗೆದುಕೊಳ್ಳಲಿದೆ.

Related Articles

Stay Connected

53,222FansLike
67,874FollowersFollow
12,303FollowersFollow
105,423SubscribersSubscribe
- Advertisement -spot_img

Latest Articles