ಬೆಳಗಾಯಿತು ವಾರ್ತೆ
ಬಳ್ಳಾರಿ: ಸಂವಿಧಾನ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಜಾಥವು ನೋಡುಗರ ಗಮನ ಸೆಳೆಯಿತು. ಜಾಥಾಗೆ ಮೇಯರ್ ಪಿ.ಗಾದೆಪ್ಪ, ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್.ಕೆ., ಜಿಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್ ಅವರು ಹಸಿರು ನಿಶಾನೆ ತೋರಿಸಿ ಸೈಕಲ್ ಸವಾರಿ ಮಾಡುವ ಚಾಲನೆ ನೀಡಿದರು.
ಜಾಥಾದಲ್ಲಿ ಶಾಲಾ-ಕಾಲೇಜು ಮಕ್ಕಳು ಸಂವಿಧಾನ ಕುರಿತಂತೆ ರಾಷ್ಟçಧ್ವಜ ಮತ್ತು ಸಂವಿಧಾನದ ಪ್ರಮುಖ ಕಲಂಗಳು, ಭಾಗಗಳು ಹಾಗೂ ಪ್ರಮುಖ ನುಡಿಮುತ್ತುಗಳನ್ನು ಪ್ಲಕಾರ್ಡ್ ನಲ್ಲಿ ಪ್ರತಿಬಿಂಬಿಸುವAತೆ ಪ್ರದರ್ಶಿಸುವುದರ ಮೂಲಕ ಸಾಗಿದರು.
ಭಾರತ ಮಾತೆಯ ಜೊತೆಗೆ ಮಹಾತ್ಮ ಗಾಂಧೀಜಿ, ಜವಾಹರಲಾಲ್ ನೆಹರು, ಗೌತಮ ಬುದ್ಧ, ವಿಶ್ವಗುರು ಬಸವಣ್ಣ, ಡಾ.ಬಿ.ಆರ್.ಅಂಬೇಡ್ಕರ್, ಝಾನ್ಸಿ ರಾಣಿ ಲಕ್ಷಿö್ಮÃಬಾಯಿ ಒಳಗೊಂಡ ಮಹನೀಯರ ವೇಷಧಾರಿ ಮಕ್ಕಳು ಗಮನಸೆಳೆದರು.
ಜಾಥಾವು ಜಿಲ್ಲಾಧಿಕಾರಿಗಳ ಕಚೇರಿ ಆವರಣದಿಂದ ಆರಂಭಗೊAಡು ಹೆಚ್.ಆರ್.ಗವಿಯಪ್ಪ ವೃತ್ತ, ಡಾ.ಜೋಳದರಾಶಿ ದೊಡ್ಡನಗೌಡ ರಂಗಮAದಿರ ಮಾರ್ಗವಾಗಿ ಮಹರ್ಷಿ ವಾಲ್ಮೀಕಿ ಭವನದ ವೇದಿಕೆ ಕಾರ್ಯಕ್ರಮ ಸ್ಥಳ ತಲುಪಿತು.





