30.7 C
Bellary
Wednesday, June 19, 2024

Localpin

spot_img

ನಟ ವಿಜಯ್ ನೂತನ ರಾಜಕೀಯ ಪಕ್ಷ ‘ತಮಿಳಗ ವೆಟ್ರಿ ಕಳಗಂ’

ಬೆಳಗಾಯಿತು ವಾರ್ತೆ | www.belagayithu.in
ಚೆನ್ನೈ:
ತಮಿಳು ಸಿನಿಮಾರಂಗದ ಸೂಪರ್‌ಸ್ಟಾರ್ ದಳಪತಿ ವಿಜಯ್ ಹೊಸ ರಾಜಕೀಯ ಪಕ್ಷವನ್ನು ಹುಟ್ಟುಹಾಕಿದ್ದಾರೆ. ರಾಜಕೀಯ ಪಕ್ಷ ಸ್ಥಾಪನೆಗೆ ಕಳೆದ ಕೆಲ ಸಮಯದಿಂದ ಸಿದ್ಧತೆ ನಡೆಸುತ್ತಿದ್ದ ಅವರು ಶುಕ್ರವಾರ ಪಕ್ಷಕ್ಕೆ ಅಧಿಕೃತವಾಗಿ ಚಾಲನೆ ನೀಡಿದ್ದಾರೆ. ತಮ್ಮ ಪಕ್ಷಕ್ಕೆ ಅವರು ‘ತಮಿಳಗ ವೆಟ್ರಿ ಕಳಗಂ’ ಎಂದು ಹೆಸರಿಟ್ಟಿದ್ದು, ಅವರ ಈ ನಿರ್ಧಾರದಿಂದ ತಮಿಳುನಾಡು ರಾಜಕಾರಣದಲ್ಲಿ ಹೊಸ ಸಂಚಲನ ಸೃಷ್ಟಿಸಿದೆ. ‘ತಮಿಳಗ ವೆಟ್ರಿ ಕಳಗಂ’ ಎಂದರೆ ತಮಿಳುನಾಡು ವಿಜಯಿ ಪಕ್ಷ’ ಎಂಬ ಅರ್ಥ ಬರುತ್ತದೆ.
2026ರಲ್ಲಿ ನಡೆಯಲಿರುವ ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಅವರ ಪಕ್ಷ ಸ್ಪರ್ಧಿಸಲಿದೆ. ದಿವಂಗತ ಎಂಜಿ ರಾಮಚಂದ್ರನ್, ಜೆ ಜಯಲಲಿತಾ, ವಿಜಯಕಾಂತ್‌, ಹಲವು ನಾಯಕರು ತಮಿಳುನಾಡಿನಲ್ಲಿ ಚಿತ್ರರಂಗದಿಂದ ರಾಜಕೀಯಕ್ಕೆ ಧುಮುಕಿ ಯಶಸ್ವಿಯಾದ ಇತಿಹಾಸ ಇದೆ. ಇಂಥಹ ರಾಜ್ಯದಲ್ಲಿ ವಿಜಯ್ ಪಕ್ಷ ಘೋಷಣೆ ತುಂಬ ಕುತೂಹಲ ಹುಟ್ಟಿಸಿದೆ.

Related Articles

Stay Connected

53,222FansLike
67,874FollowersFollow
12,303FollowersFollow
105,423SubscribersSubscribe
- Advertisement -spot_img

Latest Articles