ಗೋವಾ ಮೂಲದ ಖೋಟಾ ನೋಟ್ ಗ್ಯಾಂಗ್​ ಲಾಕ್​​

ಬೆಳಗಾಯಿತು ವಾರ್ತೆ| www.belagayithu.in
ಬೆಳಗಾವಿ: ಬೆಳಗಾವಿ ಮಾರ್ಕೆಟ್ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸುವ ಮೂಲಕ ಖೋಟಾ ನೋಟು ದಂಧೆಯನ್ನು ಪತ್ತೆ ಮಾಡಿದ್ದಾರೆ. ಜೊತೆಗೆ ಬೆಳಗಾವಿಯಲ್ಲಿ ಖೋಟಾ ನೋಟು ಚಲಾವಣೆಗೆ ಯತ್ನಿಸಿದ್ದ ಗೋವಾ ಮೂಲದ ಗ್ಯಾಂಗ್​​ನ್ನು ಬಂಧಿಸಿದ್ದಾರೆ. ಎ1 ಮೊಹಮ್ಮದ್‌ ಅರ್ಬಾಜ್ (21), ಎ2 ರೂಪೇಶ್ ವಾಕೋಡೆ (26), ಎ3 ಮೊಹಮ್ಮದ್ ಹುಸೇನ್ ಭಕ್ಷಿ(23), ಶ್ರವಣಕುಮಾರ (25) ಬಂಧಿತರು. ಆರೋಪಿಗಳಿಂದ ಒಂದು ಕಾರು, 2 ಲಕ್ಷ 40 ಸಾವಿರ ರೂ ಮುಖ ಬೆಲೆಯ ಖೋಟಾ ನೋಟು ಮತ್ತು 4 ಮೊಬೈಲ್ ಜಪ್ತಿ ಮಾಡಲಾಗಿದೆ. ಬೆಳಗಾವಿ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
ಬೆಳಗಾವಿಯಲ್ಲಿ ಖೋಟಾ ನೋಟು ಚಲಾವಣೆಗೆ ಯತ್ನ
ಗೋವಾ ರಾಜ್ಯದ ಬಂಧಿತ ನಾಲ್ವರು ಆರೋಪಿಗಳು ಒಂದು ಲಕ್ಷ ರೂ ಅಸಲಿ ನೋಟಿಗೆ 2 ಲಕ್ಷ ರೂ ಖೋಟಾ ನೋಟು ನೀಡುತ್ತಿದ್ದರು. ಬೆಳಗಾವಿಯ ಖಡೇಬಜಾರ್ ಅಂಗಡಿಯಲ್ಲಿ ಖೋಟಾ ನೋಟು ಚಲಾವಣೆಗೆ ಗ್ಯಾಂಗ್​​ ಯತ್ನಿಸಿದೆ. ಸಂಶಯಗೊಂಡ ಅಂಗಡಿ ಮಾಲೀಕ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣವೇ ಅಲರ್ಟ್ ಆದ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. ಅದರಂತೆ ನಾಲ್ವರನ್ನು ಬಂಧಿಸಿದ್ದು, ಇನ್ನೂ ಮೂವರ ಬಂಧನಕ್ಕೆ ಪೊಲೀಸರು ಬಲೆಬೀಸಿದ್ದಾರೆ.

Related Articles

Stay Connected

53,222FansLike
67,874FollowersFollow
12,303FollowersFollow
105,423SubscribersSubscribe
- Advertisement -spot_img

Latest Articles