ಇಂದಿರಾ ಗಾಂಧಿ ಅವರ ಧೈರ್ಯ, ಸಾಹಸ ಮತ್ತು ದೇಶಕ್ಕೆ ನೀಡಿದ ಕೊಡುಗೆ ಸ್ಮರಣೀಯ

ಬೆಳಗಾಯಿತು ವಾರ್ತೆ
ಬಳ್ಳಾರಿ:
ಭಾರತದ ಮೊದಲ ಮಹಿಳಾ ಪ್ರಧಾನಮಂತ್ರಿ, ಉಕ್ಕಿನ ಮಹಿಳೆ ಎಂದೇ ಖ್ಯಾತರಾದ ದಿವಂಗತ ಇಂದಿರಾ ಗಾಂಧಿ ಅವರ 109ನೇ ಜಯಂತಿಯನ್ನು ಬಳ್ಳಾರಿ ನಗರ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಗುರುವಾರ ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಆಚರಿಸಲಾಯಿತು.

ಬೆಳಗ್ಗೆ 10 ಗಂಟೆಗೆ ನಡೆದ ಕಾರ್ಯಕ್ರಮದಲ್ಲಿ ಇಂದಿರಾ ಗಾಂಧಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಗೌರವ ಅರ್ಪಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಕಾಂಗ್ರೆಸ್ ಮುಖಂಡ ಹುಮಾಯೂನ್‌ ಖಾನ್, ಇಂದಿರಾ ಗಾಂಧಿ ಅವರು ದೇಶದ ಅಭಿವೃದ್ಧಿ ಹಾಗೂ ಬಲವರ್ಧನೆಗೆ ನೀಡಿದ ಕೊಡುಗೆಗಳನ್ನು ಸ್ಮರಿಸಿದರು. ಅವರ ಧೈರ್ಯ, ನಾಯಕತ್ವ ಮತ್ತು ದಿಟ್ಟ ನಿರ್ಧಾರಗಳು ಇಂದಿಗೂ ದೇಶದ ಜನತೆಗೆ ಪ್ರೇರಣೆಯಾಗಿವೆ. 1971ರಲ್ಲಿ ಪಾಕಿಸ್ತಾನದ ಆಡಳಿತದಿಂದ ಬಾಂಗ್ಲಾದೇಶವನ್ನು ವಿಮೋಚನೆಗೊಳಿಸುವಲ್ಲಿ ಅವರು ತೋರಿದ ಧೈರ್ಯ ಮತ್ತು ಸಾಹಸವನ್ನು ದೇಶ ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದು ಹೇಳಿದರು.

ದೇಶದ ರಾಜಕೀಯ ಇತಿಹಾಸದಲ್ಲಿ ಇಂದಿರಾ ಗಾಂಧಿ ಅವರ ಆಡಳಿತ, ಸಾಧನೆ ಹಾಗೂ ನಾಯಕತ್ವಕ್ಕೆ ವಿಶೇಷ ಸ್ಥಾನವಿದೆ. ಅವರ ಆದರ್ಶಗಳನ್ನು ಇಂದಿನ ಯುವ ಪೀಳಿಗೆ ಮೈಗೂಡಿಸಿಕೊಳ್ಳಬೇಕು ಎಂದು ಮುಖಂಡರು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹುಮಯೂನ್ ಖಾನ್, ಡಿಸಿಸಿ ಉಪಾಧ್ಯಕ್ಷ ಕೆ. ಶ್ರೀನಿವಾಸುಲು, ಕಾರ್ಯಕಾರಿಣಿ ಸಮಿತಿ ಸದಸ್ಯ ವೆಂಕಟಲಕ್ಷ್ಮಿ ನಾರಾಯಣ, ಮುಂಚೂಣಿ ಘಟಕಗಳ ಅಧ್ಯಕ್ಷರಾದ ಎಂ.ಎಸ್. ಮಂಜುಳ, ಎರಕುಲ ಸ್ವಾಮಿ, ಕನೇಕಲ್ ಮಾಬುಸಾಬ್, ಅಖಿಲ್ ಅಹಮ್ಮದ್, ಅತ್ತವುಲ್ಲ, ಬಳ್ಳಾರಿ ನಗರ ಪ್ರಚಾರ ಸಮಿತಿ ಅಧ್ಯಕ್ಷ ಈರನಗೌಡ, ಮುಖಂಡರಾದ ಸಮೀರ್, ಸಂಗನಕಲ್ ವಿಜಯಕುಮಾರ್, ಪರ್ವಿನ್ ಭಾನು, ಮಲ್ಲಮ್ಮ, ಬಿ.ಎ. ಮಲ್ಲೇಶ್ವರಿ, ಆಫ್ರಿನ್, ಲಿಂಗರಾಜು, ಎಂ.ಪಿ. ಕಮಲ, ರಂಗಸ್ವಾಮಿ, ಸಿದ್ದರಾಮ ಸೇರಿದಂತೆ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

Related Articles

Stay Connected

53,222FansLike
67,874FollowersFollow
12,303FollowersFollow
105,423SubscribersSubscribe
- Advertisement -spot_img

Latest Articles