ಬಳ್ಳಾರಿ: ಪ್ರತಿಯೊಂದು ಕ್ಷೇತ್ರದಿಂದ ಉತ್ತಮ ಅಭ್ಯರ್ಥಿಗಳನ್ನು ಮುಂದಿನ ಎಲ್ಲಾ ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತ್ ಚುನಾವಣೆಗೆ ಆಮ್ ಅದ್ಮಿ ಪಕ್ಷದ ವತಿಯಿಂದ ಕಣಕ್ಕೆ ಇಳಿಸಲಾಗುತ್ತದೆ ಎಂದು ಪಕ್ಷದ ರಾಜ್ಯ ಸಂಚಾಲಕರಾದ ಪೃಥ್ವಿ ರೆಡ್ಡಿ ಅವರು ತಿಳಿಸಿದರು.
ಸುದ್ಧಿಗೋಷ್ಠಿಯನ್ನು ಉದ್ಧೇಶಿಸಿ ಮಾತನಾಡಿದ ಅವರು ಆಮ್ ಆದಿ ಪಾರ್ಟಿ ವತಿಯಿಂದ ಮುಂಬರುವ ಜಿಲ್ಲಾ ಪಂಚಾಯತ್, ತಾಲ್ಲಾಕು ಪಂಚಾಯತ್ ಸೇರಿದಂತೆ ಎಲ್ಲಾ ಚುನಾವಣೆಯಲ್ಲಿ ಪಕ್ಷ ಸ್ಪರ್ಧಿಸಲಿದೆ ಆ ವಿಚಾರವಾಗಿ ಅಭ್ಯರ್ಥಿಗಳ ಆಯ್ಕೆ ಕುರಿತಂತೆ ಮಾತನಾಡಿದ ಅವರು ಜನರಿಗೆ ಪರ್ಯಾಯ ಪಕ್ಷ ಇರಬೇಕು ಎಂಬ ಉಧ್ಧೇಶದಿಂದ ಆಮ್ ಆದ್ಮಿ ಪಕ್ಷ ಸ್ಪರ್ಧಿಸಲಿದೆ ಎಂದರು.
ದೇಶದ ಜನರ ಮುಂದೆ ಎರಡು ಮಾದರಿ ಸರ್ಕಾರಗಳು
ಒಂದು ಗುಜರಾತ್ ಮಾದರಿ ಸರ್ಕಾರ ಮತ್ತೊಂದು ದೆಹಲಿ ಮಾದರಿ ಸರ್ಕಾರ ದೇಶದ ಜನರು ಎರಡನ್ನು ನೋಡಿದ್ದಾರೆ. ಜನರ ತೆರಿಗೆ ಹಣದಿಂದ ಗುಜರಾತ್ ಮಾದರಿಯಲ್ಲಿ ದೊಡ್ಡ ದೊಡ್ಡ ಪ್ಲೈ ಓವರ್ , ರಸ್ತೆಗಳನ್ನು ಕಟ್ಟಡಗಳನ್ನು ನಿರ್ಮಿಸಲಾಗಿದೆ. ಜನ ಸಾಮಾನ್ಯರಿಗೆ ಇದರಿಂದ ಏನೂ ಉಪಯೋಗವಾಗಿಲ್ಲ ಆದರೆ ಅದೇ ಸಮಯದಲ್ಲಿ ದೆಹಲಿಯಲ್ಲಿ ಜನರ ತೆರಿಗೆ ಹಣದಿಂದ ಉಚಿತವಾಗಿ ವಿದ್ಯುತ್, ಶಿಕ್ಷಣ, ನೀರು ಮತ್ತು ಆಸ್ಪತ್ರೆಯಲ್ಲಿ ಉಚಿತವಾಗಿ ಚಿಕಿತ್ಸೆ ಸಹ ನೀಡಲಾಗುತ್ತೆ ಎಂದು ಪ್ರತಿಪಾಧಿಸಿದ ಅವರು ಇಂತಹ ವ್ಯವಸ್ಥೆ ಕರ್ನಾಟಕದಲ್ಲಿಯೋ ಬರಬೇಕು ಆ ನಿಟ್ಟಿನಲ್ಲಿ ಕೆಲಸ ಮಾಡುವ ಹಾಗೂ ತಳ ಮಟ್ಟದಲ್ಲಿ ಪಕ್ಷ ಕಟ್ಟಿ ಹೊಸ ರಾಜಕೀಯ ವ್ಯವಸ್ಥೆ ತರಬೇಕು ಎಂದು ಹೊರಟಿದ್ದೇವೆ ಎಂದರು.
ಬ್ಯಾಂಕ್ ಬ್ಯಾಲೆನ್ಸ್ ನೋಡಿ ಟಿಕೆಟ್
ಬೇರೆ ಪಕ್ಷದಲ್ಲಿ ಬ್ಯಾಂಕ್ ಬ್ಯಾಲೆನ್ಸ್ ನೋಡಿ ಟಿಕೆಟ್ ನೀಡುವ ಹಾಗೇ ನಮ್ಮ ಪಕ್ಷದಲ್ಲಿ ಹಾಗೇ ಮಾಡಲ್ಲ ಜನರ ನಂಬಿಕೆ ಗೆದ್ದಂತಹ ಜನ ಸಾಮಾನ್ಯರನ್ನು ನಾವು ಪಕ್ಷದ ಅಭ್ಯರ್ಥಿ ಗಳಾಗಿ ಅಯ್ಕೆ ಮಾಡುತ್ತೇವೆ. ಕ್ರಿಮಿನಲ್, ಭ್ರಷ್ಟಚಾರ,ಮಾಡಿರುವ ವ್ಯಕ್ತಿ ಗಳಿಗೆ ನಮ್ಮ ಪಕ್ಷದಲ್ಲಿ ಸ್ಥಾನ ಇಲ್ಲ ಎಂದ ಅವರು ಆಟೋ ಚಾಲಕರಾಗಲಿ ಶಿಕ್ಷಕರಾಗಲಿ, ರೈತರಾಗಲಿ ಉತ್ತಮ ಚಾರಿತ್ರ್ಯ ಉಳ್ಳಂತಹ ವ್ಯಕ್ತಿಗಳಿಗೆ ಟಿಕೆಟ್ ನೀಡುತ್ತೇವೆ ಎಂದರು. ಈ ಸಂದರ್ಭದಲ್ಲಿ ಮಲ್ಲಪ್ಪ,ಇತರರು ಇದ್ದರು.