ಬೆಳಗಾಯಿತು ವಾರ್ತೆ
ಬಳ್ಳಾರಿ: ಕೇಂದ್ರ ಆಯುಷ್ ಮಂತ್ರಾಲಯ ಹಾಗೂ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಆದೇಶದಂತೆ ಪ್ರತಿ ವರ್ಷದಂತೆ ಜೂ.21ರಂದು “8ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ” ಯನ್ನು ಆಚರಿಸಲು ಉದ್ದೇಶಿಸದ್ದು, “ಮಾನವತೆಗಾಗಿ ಯೋಗ ಎಂಬ ಧ್ಯೇಯ ವಾಕ್ಯದೊಂದಿಗೆ ಭಾರತೀಯ ಸಂಸ್ಕøತಿ ವಾಕ್ಯವಾದ “ವಸುದೈವ ಕುಟುಂಬಕಂ” ಎಂಬಂತೆ ಯೋಗ ಕಾರ್ಯಕ್ರಮವನ್ನು ವಿಶ್ವಾದ್ಯಂತ 182 ರಾಷ್ಟ್ರಗಳಲ್ಲಿ ಏಕ ಕಾಲಕ್ಕೆ ಆಚರಿಸಲಾಗುತ್ತಿದೆ.
ಸದರಿ ಬಳ್ಳಾರಿ ಜಿಲ್ಲೆಯಲ್ಲಿ ಬಳ್ಳಾರಿ ನಗರದ ಕನಕ ದುರ್ಗಮ್ಮ ದೇವಸ್ಥಾನದ ಆವರಣ, ಕೋಟೆ ಮಲ್ಲೇಶ್ವರ ದೇವಸ್ಥಾನದ ಆವರಣ, ಕಂಪ್ಲಿಯ ಸೋಮಪ್ಪನ ಕೆರೆ ಆವರಣದಲ್ಲಿ ಆಚರಿಸಲಾಗುತ್ತಿದೆ.
8ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಜೂ.21ರಂದು ಬೆಳಗ್ಗೆ 06.15 ರಿಂದ 6.45ರವರೆಗೆ ವೇದಿಕೆ ಕಾರ್ಯಕ್ರಮ ಹಾಗೂ 6.45 ರಿಂದ 7.30 ರವರೆಗೆ 45 ನಿಮಿಷಗಳ ಕಾಲ ಯೋಗಾಭ್ಯಾಸ ನಡೆಯಲಿದೆ ಎಂದು ಜಿಲ್ಲಾ ಪಂಚಾಯತ್ ಸಿಇಒ ಜೆ.ಲಿಂಗಮೂರ್ತಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.