ಬೆಳಗಾಯಿತು ವಾರ್ತೆ
ಬಳ್ಳಾರಿ: ಚಾರ್ಲಿ ಎಂದರೆ ಸಾಕು ಎಲ್ಲರ ಮುಖ ಅರಳುತ್ತದೆ. ಚಾರ್ಲಿ ಚಾಂಪ್ಲಿಯನ್ ಇವರು ಒಬ್ಬ ಹಾಸ್ಯಗಾರನಾಗಿ ಎಲ್ಲರನ್ನೂ ನಗಿಸುತಿದ್ದ. ಆದರೆ ಇಗ ಕನ್ನಡ ಚಿತ್ರರಂಗದಲ್ಲಿ ಚಾರ್ಲಿ ಎಂಬ ಹೆಸರು ಬಳಸಿ ಮಾಡಲಾದ ಸಿನಿಮಾ ರಾಜ್ಯದಲ್ಲೇಡೆ ಸದ್ದುಮಾಡುತ್ತಿದೆ.
ಸಾಕು ನಾಯಿಗಳು ಎಷ್ಟು ನಿಷ್ಟೆ, ಪ್ರಾಮಾಣಿಕತೆ ಹೊಂದಿರುವ ಪ್ರಾಣಿಗಳು ಎನ್ನುವ ಕುರಿತ ಚಲನ ಚಿತ್ರ 777 ಚಾರ್ಲಿ ರಾಜ್ಯಾದ್ಯಂತ ಯಶಸ್ವಿಯಾಗಿ ಪ್ರದರ್ಶನಗೊಳ್ಳುತ್ತಿದ್ದು, ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಅಂತೆಯೇ ಗಣಿನಾಡು ಬಳ್ಳಾರಿಯಲ್ಲೂ ಉತ್ತಮ ಪ್ರದರ್ಶನ ಕಾಣುತ್ತಿದೆ. ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ನಾಯಿಯನ್ನು ಇಟ್ಟುಕೊಂಡು ಒಂದು ಅಪರೂಪದ ಚಿತ್ರ ಬಿಡುಗಡೆಯಾಗಿದ್ದು, ರಕ್ಷಿತ್ ಶೆಟ್ಟಿಯವರ ಅಭಿನಯ ಮತ್ತು ಶ್ವಾನ ಮಾಡಿರುವಂತಹ ಪಾತ್ರ ಥಿಯೇಟರಿಗೆ ಬಂದ ಪ್ರೇಕ್ಷಕರನ್ನು ಭಾವುಕರನ್ನಾಗಿಸುತ್ತಿದೆ.
ಈ ಅಪರೂಪದ ಚಿತ್ರವನ್ನು ಬಳ್ಳಾರಿ ನಗರದ ಶಿವ ಚಿತ್ರಮಂದಿರದಲ್ಲಿ ಡ್ಯಾನ್ಸ್ ಮಾಸ್ಟರ್ ಸುಭಾಷ್‌ಚಂದ್ರ ತಮ್ಮ ಸಾಕು ನಾಯಿ ಆ್ಯನಿಯ ಜೊತೆ ವೀಕ್ಷಿಸಿದರು.
777 ಚಾರ್ಲಿ ಚಿತ್ರದ ಮಾದರಿಯಲ್ಲಿಯೇ ಸುಭಾಷ್‌ಚಂದ್ರ ಅವರ ಜೀವನಗಾಥೆ ತುಂಬಾ ಹತ್ತಿರವಾಗಿದೆ. ಹೀಗಾಗಿ ಆನಿ ತನ್ನ ಒಡೆಯನಿಗೆ ಧನ್ಯವಾದ ಹೇಳುವ ಭಂಗಿಯಲ್ಲಿ ಮುತ್ತಿಕ್ಕಿದೆ. ಮೂಕ ಭಾಷೆಯಲ್ಲಿ ತನ್ನ ಭಾವನೆಗಳನ್ನು ಹಂಚಿಕೊಂಡಿದೆ. ಪ್ರಾಣಿಗಳಿಗೂ ನಮ್ಮಂತೆಯೇ ಭಾವನೆಗಳಿವೆ. ಅವು ಬದುಕಲು ಅವಕಾಶ ನೀಡಬೇಕೆನ್ನುತ್ತಾರೆ ಸುಬಾಷ್‌ಚಂದ್ರ, ಮತ್ತೊಂದು ವಿಷಯವೇನೆಂದರೆ ಚಿತ್ರ ಮಂದಿರದಲ್ಲಿ ಸಾಕು ಪ್ರಾಣಿಗಳ ಪ್ರವೇಶಕ್ಕೆ ನಿಷೇಧ ಇರುವುದರಿಂದ, ಸುಭಾಷ್ ಚಂದ್ರ ಅವರು
ತಮ್ಮ ಪ್ರೀತಿಯ ನಾಯಿ ಜೊತೆಗೆ ಸಿನಿಮಾ ನೋಡಲು ಅವಕಾಶ ನೀಡಬೇಕೆಂದು ನಟರಾಜ್ ಕಾಂಪ್ಲೆಕ್ಸ್ ಮಾಲೀಕರಾದ ಲಕ್ಷ್ಮಿಕಾಂತ್ ರೆಡ್ಡಿ ಯವರಲ್ಲಿ ಮನವಿ ಮಾಡಿಕೊಂಡರು. ಇದಕ್ಕೆ ಸ್ಪಂದಿಸಿದ ಮಾಲೀಕರು ಶ್ವಾನ ಆ್ಯನಿಗೆ ಚಿತ್ರ ವೀಕ್ಷಿಸಲು ಅವಕಾಶ ನೀಡಿದರು. ಸಂಪೂರ್ಣ ಚಿತ್ರವನ್ನು ಸುಭಾಷ್‌ಚಂದ್ರ ರವರೊಂದಿಗೆ ನೋಡಿದ ಆ್ಯನಿ ಸಂಭ್ರಮಿಸಿತು.