ಅಫ್ಘಾನಿಸ್ತಾದಲ್ಲಿರುವ ರಷ್ಯಾ ಮೂಲದ ಶಾಂಗಾಯ್ ಸಹಕಾರ ಸಂಸ್ಥೆ ಮತ್ತು ಚೀನಾ ಸರ್ಕಾರ ಏರ್ಪಡಿಸಿದ್ದ ಸಭೆಯೊಂದರಲ್ಲಿ (ಎಸ್‌ಸಿಒ) ಭಾರತದ ವಿದೇಶಾಂಗ ಸಚಿವ ಜೈಶಂಕರ್‌ರವರು ಸಹ ಪಾಲ್ಗೊಂಡಿದ್ದರು. ಇನ್ನು, ಈ ಸಭೆಯಲ್ಲಿ ಅಫ್ಘಾನಿಸ್ತಾನವು ಜಾಗತಿಕ ಏಳಿಗೆಗೆ ಹೇಗೆಲ್ಲಾ ಕಾರ್ಯ ನಿರ್ವಹಿಸಬೇಕೆಂಬುದರ ಕುರಿತು ಚರ್ಚಿಸಲಾಯಿತು.
ಸಭೆ ಮುಗಿದ ಬಳಿಕ ಭಾರತದ ವಿದೇಶಾಂಗ ಸಚಿವ ಜೈಶಂಕರ್‌ರವರು ತಮ್ಮ ಟ್ವಿಟರ್ ಖಾತೆಯಲ್ಲಿ ಅಫ್ಘಾನಿಸ್ತಾನದ ಕುರಿತು ಕೆಲವು ಅನಿಸಿಕೆ, ಅಭಿಪ್ರಾಯಗಳನ್ನು ಮತ್ತು ನಿರೀಕ್ಷೆಗಳನ್ನು ಹಂಚಿಕೊAಡಿದ್ದಾರೆ. “ಅಫ್ಗಾನಿಸ್ತಾನವು ‘ಅಂತಿಮ ರಾಜ್ಯ’ವಾಗಬೇಕು. ಅಂತಿಮ ರಾಜ್ಯವೆಂದರೆ, ಹಿಂಸಾಚಾರವೇ ಇಲ್ಲದಿರುವ, ಒಳ್ಳೆಯ ಆಡಳಿತ ಹೊಂದಿರುವ ರಾಜ್ಯ. ಪ್ರಸ್ತುತ ಇಡೀ ವಿಶ್ವ ಸಮುದಾಯವು ಹಿಂಸಾಚಾರದಿAದ ಮತ್ತು ಬಲತ್ಕಾರದಿಂದ ನಡೆಸಲಾಗುವ ಆಡಳಿತದ ವಿರುದ್ಧ ತಿರುಗಿ ನಿಂತಿದೆ. ಜಗತ್ತು, ಪ್ರದೇಶ ಮತ್ತು ಅವತಃ ಅಫ್ಗನ್ನರು, ಅಫ್ಗಾನಿಸ್ತಾನವು ಇಂತಹ ಅಂತಿಮ ರಾಜ್ಯವಾಗುವುದನ್ನು ಎದುರು ನೊಡುತ್ತಿದೆ. ಅಫ್ಗಾನಿಸ್ತಾನವು, ಸ್ವತಂತ್ರವಾದ, ಶಾಂತಿ ಸಾರುವ, ಪ್ರಜಾಪ್ರಭುತ್ವ ಹೊಂದಿರುವ, ಶ್ರೀಮಂತ ದೇಶವಾಗಬೇಕು. ದೇಶದ ನಾಗರಿಕರ ಮೇಲೆ ನಿಂತರವಾಗಿ ನಡೆಯುವ ಭಯೋತ್ಪಾದನಾ ದಾಳಿ, ಹಿಂಸಾಚಾರಕ್ಕೆ ಕಡಿವಾಣಹಾಕಬೇಕು. ರಾಜಕೀಯ ವ್ಯವಸ್ಥೆಯಲ್ಲಿ ಮೂಡುವ ಹಲವು ಭಿನ್ನಭಿಪ್ರಾಯಗಳನ್ನು, ಗೊಂದಲಗಳನ್ನು ಬಗೆಹರಿಸಿಕೊಳ್ಳಬೇಕು. ತನ್ನ ದೇಶದಲ್ಲಿ ಅಡಗಿರುವ ಉಗ್ರಗಾಮಿಗಳಿಂದ, ಭಯೋತ್ಪಾದಕರಿಗೆ ತನ್ನ (ಅಫ್ಗಾನಿಸ್ತಾನ) ನೆರೆಯ ದೇಶಗಳಿಗೆ ಯಾವುದೇ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕು. ಈ ಎಲ್ಲಾ ನಿರೀಕ್ಷಾ ಮಟ್ಟವನ್ನು ಮುಟ್ಟಲು ಅಫ್ಗಾನಿಸ್ತಾನ ಹಲವು ಎಡರು ತೊಡರುಗಳನ್ನು ದಾಟಬೇಕಾಗುತ್ತದೆ. ಏಕೆಂದರೆ, ಭಯೋತ್ಪಾದನೆ ನಿರ್ಮೂಲನ ಅಷ್ಟು ಸುಲಭದ ಮಾತಲ್ಲ. ಭಯೋತ್ಪಾದನೆ ನಿರ್ಮೂಲನವೇ ಈ ಸಭೆಯ ಮುಖ್ಯ ಉದ್ದೇಶವಾಗಿದೆ. ಆದ್ದರಿಂದ ಅಫ್ಗಾನಿಸ್ತಾನವು ಈ ಕಾರ್ಯವನ್ನು ಸಾಧಿಸಲು ಕತಾರ್, ರಷ್ಯಾ ಮತ್ತು ಟರ್ಕಿ ದೇಶಗಳ ಸಹಾಯವನ್ನು ತೆಗೆದುಕೊಳ್ಳುವುದು ಉತ್ತಮ. ಭಯೋತ್ಪಾದನಾ ದಾಳಿಯನ್ನು ನಿಯಂತ್ರಿಸಲು ಈ ಹಿಂದೆ ಇಸ್ಟಾನ್‌ಬ್ಲು, ಮಾಸ್ಕೊ, ದೊಹಾ ದೇಶಗಳು ಕಾರ್ಯನಿರ್ವಸಿದ ರೀತಿಯಲ್ಲಿ ಇದೀಗ ಅಫ್ಗಾನಿಸ್ತಾನವು ಕಾರ್ಯನಿರ್ವಸಿಬೇಕು. ಆದರೆ, ನಾನಾಗಲೇ ಹೇಳಿದಂತೆ, ವಿಶ್ವ ಸಮುದಾಯವು ಹಿಂಸಾಚಾರದಿAದ ಮತ್ತು ಬಲತ್ಕಾರದಿಂದ ನಡೆಸಲಾಗುವ ಆಡಳಿತವನ್ನು ಧಿಕ್ಕರಿಸುತ್ತದೆ ಮತ್ತು ಶಾಂತಿಯುವ ರಾಜಕೀಯಕ್ಕೆ ಬೆಂಬಲ ನೀಡುತ್ತದೆ. ಅಫ್ಗಾನಿಸ್ತಾನವು ‘ಅಂತಿಮ ರಾಜ್ಯ’ವಾಗಿಯೇ ತೀರುತ್ತದೆ ಎಂಬುದರಲ್ಲಿ ನಮಗೆ ನಂಬಿಕೆಯಿದೆ. ಅಫ್ಗಾನಿಸ್ತಾನದ ಭವಿಷ್ಯವು, ಖಂಡಿತಾಗಿಯೂ ಭೂತಕಾಲದಂತಿರುವುದಿಲ್ಲ. ಹೊಸ ಪೀಳಿಗೆಗೆ ಅಫ್ಗಾನಿಸ್ತಾನದ ಮೇಲೇ ಹಲವಾರು ನರೀಕ್ಷೆಗಳಿವೆ. ನಾವು ಅಫ್ಗಾನಿಸ್ತಾನವ್ನನು ಕಡೆಗಣಿಸುವಂತಿಲ್ಲ” ಎಂದು ಹೇಳಿದ್ದಾರೆ.