ಚಿತ್ರದುರ್ಗ: ಮಹಿಳೆಯರು ಹೆಚ್ಚು ನೀರು, ಮಜ್ಜಿಗೆ, ಪೌಷ್ಠಿಕವಾದ ತರಕಾರಿ, ಹಣ್ಣು, ಆಹಾರ ಸೇವನೆ ಮಾಡುವ ಮೂಲಕ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು, ಜೊತೆಗೆ ದೇಶದ ಭವಿಷ್ಯವಾದ ಮಕ್ಕಳನ್ನು ಸಹ ಸದೃಢಗೊಳಿಸಬೇಕು ಎಂಬುದಾಗಿ ಬಿ.ಜೆ.ಪಿ ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಶೈಲಜಾ ರೆಡ್ಡಿ ಹೇಳಿದರು.
ನಗರದ ಭೋವಿ ಕಾಲೋನಿಯಲ್ಲಿ ಬಿ.ಜೆ.ಪಿ ನಗರ ಮಹಿಳಾ ಮೋರ್ಚಾ ವತಿಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ಉಚಿತ ಆರೋಗ್ಯ ತಪಾಸಣೆ ಶಿಬಿರವನ್ನು ಗಿಡಕ್ಕೆ ನೀರನ್ನು ಎರೆಯುವ ಮೂಲಕ ಉದ್ಘಾಟಿಸಿ ನಂತರ ಅವರು ಮಾತನಾಡಿದರು.
ಸ್ತ್ರೀರೋಗ ತಜ್ಞೆ ಡಾ.ಉಮಾ ನಂಜುಂಡಪ್ಪ ಮಾತನಾಡಿ, ಮನೆಯ ಸಂಪೂರ್ಣ ಜವಾಬ್ದಾರಿ ಹೆಣ್ಣು ಮಕ್ಕಳ ಮೇಲೆ ಹೆಚ್ಚಿರುವುದರಿಂದ ಅತೀ ಹೆಚ್ಚು ಒತ್ತಡ ನಿಮ್ಮ ಮೇಲಿರುವುದರಿಂದ ಹೆಣ್ಣು ಮಕ್ಕಳು ತಾವು ಪೌಷ್ಠಿಕ ಆಹಾರವನ್ನು ಸೇವಿಸುವುದರ ಜೊತೆಗೆ ತಮ್ಮ ಮಕ್ಕಳಿಗೂ ಪೌಷ್ಠಿಕ ಆಹಾರವನ್ನು ಒದಗಿಸಬೇಕು ಎಂಬುದಾಗಿ ತಿಳಿಸಿದರು.