ಕೊನೆಗೂ ಸರ್ಕಾರ ಬೆಳಗಾವಿ ಅಧಿವೇಶನ ನಡೆಸಲು ಮನಸು ತೋರಿದ್ದು ಇದೇ ಡಿಸೆಂಬರ್‌ನಲ್ಲಿ ಈ ಬಾರಿಯ ಚಳಿಗಾಲ ಅಧಿವೇಶನ ನಡೆಯಲಿದೆ.
ಈ ಬಗ್ಗೆ ವಿಧಾನಸೌಧದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಸ್ಪಷ್ಟಪಡಿಸಿ,ಡಿಸೆಂಬರ್ ತಿಂಗಳಿನಲ್ಲಿ ಅಧಿವೇಶನವನ್ನು ಬೆಳಗಾವಿಯಲ್ಲಿ ನಡೆಸಲು ಅಭಿಪ್ರಾಯ ವ್ಯಕ್ತವಾಗಿದೆ.ಸರ್ಕಾರದಿಂದಲೂ ಕೂಡ ಬೆಳಗಾವಿಯಲ್ಲಿ ಅಧಿವೇಶನ ನಡೆಸಲು ಚಿಂತನೆ ಇದೆ ಎಂದರು.
ಕ್ಷೇತ್ರದ ಜನರು ತಮ್ಮ ಸಮಸ್ಯೆಗಳನ್ನು ಭಾವನೆಗಳನ್ನು ಸದನದಲ್ಲಿ ಶಾಸಕರು ವ್ಯಕ್ತಪಡಿಸಬೇಕೆಂದು ಚುನಾಯಿಸಿ ಕಳುಹಿಸಿದ್ದಾರೆ.ಕಾಂಗ್ರೆಸ್‌ನವರು ಮುಕ್ತವಾಗಿ ಎಲ್ಲ ಅವಕಾಶ ಬಳಸಿಕೊಂಡಿದ್ದಾರೆ.ಒಂದು ಬಾರಿಯೂ ಕೂಡ ಸದನವನ್ನು ಐದುಹತ್ತು ನಿಮಿಷ ಮುಂದೂಡುವ ಪ್ರಸಂಗ ಬರಲಿಲ್ಲ.ಸದನದ ಸಮಯ ವ್ಯರ್ಥವಾಗುವುದಕ್ಕೆ ಯಾವ ಸದಸ್ಯರೂ ಬಿಡಲಿಲ್ಲ.ಇದು ಬಹಳ ಒಳ್ಳೆಯ ಬೆಳವಣಿಗೆ.ಇಂತಹ ಬೆಳವಣಿಗೆ ಸಭಾಧ್ಯಕ್ಷನಾಗಿರುವುದಕ್ಕೆ ಸಂತೋಷವಾಗಿದೆ ಎಂದು ಸ್ಪೀಕರ್ ಹೇಳಿದರು