ಹುಬ್ಬಳ್ಳಿ: ನಗರದ ಹು-ಧಾ ಮಹಾನಗರ ಪಾಲಿಕೆ ಚುಣಾವಣೆಯ 52ನೇ ವಾರ್ಡಿನ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ವಿಶ್ವ ಮಾನ್ಯ ಪ್ರಶಸ್ತಿ ಪುರಸ್ಕೃತ ಸಂತೋಷ ಆರ್. ಶೆಟ್ಟಿ, ಸಂಖ್ಯೆ 07 ರೊಂದಿಗೆ ವಜ್ರದ ಗುರುತಿನ ಚಿಹ್ನೆಯನ್ನು ಪಡೆದಿದ್ದಾರೆ.
ಶನಿವಾರ ಮುಂಜಾನೆ ಸನ್ಮಾನ ಕಾಲೋನಿ ಸೇರಿದಂತೆ ಸುತ್ತ-ಮುತ್ತಲಿನ ಬಡಾವಣೆಯ ನಿವಾಸಿಗಳ ಮನೆಗೆ ತೆರಳಿ ಮತಯಾಚಿಸಿದರು. ಕಾಲೋನಿಯ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಪಕ್ಷಕ್ಕಿಂತ ಪ್ರಗತಿಗೆ ಮತವನ್ನು ಹಾಕುತ್ತಿವೆ, ಸಮಾಜ ಸೇವಕರಾಗಿ ಧಾರ್ಮಿಕ, ಸಾಹಿತ್ಯಿಕ ವಲಯ, ಶೈಕ್ಷಣಿಕ ಹೀಗೆ ತಾವು ಮಾಡುತ್ತ ಬಂದಿರುವ ವಿವಿಧ ಕಾರ್ಯಗಳು ನಮ್ಮ ಮನದಲ್ಲಿವೆ, ತಾವು ಆಯ್ಕೆಗೊಂಡ ಬಳಿಕ ವಾರ್ಡ ಮತ್ತಷ್ಟು ಮಾದರಿ ವಾರ್ಡ ಆಗುವುದರಲ್ಲಿ ಸಂದೇಹವಿಲ್ಲ ಆದ್ದರಿಂದ ವಜ್ರದ ಗುರುತಿಗೆ ಮತವನ್ನು ಹಾಕುತ್ತೇವೆ ಎಂದು ಬೆಂಬಲವನ್ನು ಸೂಚಿಸಿದರು.
ಈ ಸಂದರ್ಭದಲ್ಲಿ ಅಭ್ಯರ್ಥಿ ಸಂತೋಷ ಆರ್ ಶೆಟ್ಟಿ, ಪಕ್ಷದ ಕಾರ್ಯಕರ್ತರು, ಅಭಿಮಾನಿ ಬಳಗ, ಕಾಲೋನಿಯ ಗುರು-ಹಿರಿಯರು, ಮಾತೆಯರು ಮತಯಾಚನೆಗೆ ಜೊತೆಯಲ್ಲಿದ್ದರು.