ಬೆಳಗಾಯಿತು ವಾರ್ತೆ
ಬಳ್ಳಾರಿ: ಮಂಗಳವಾರ ಎಐಯುಟಿಯುಸಿ ಸಂಯೋಜಿತವಾಗಿರುವ ವಿಮ್ಸ್ ಗುತ್ತಿಗೆ ನೌಕರರ ಸಂಘದ ಆಶ್ರಯದಲ್ಲಿ ವಿಮ್ಸ್ನ ಬಿಸಿ ರಾಯ್ ಸಭಾಂಗಣದಲ್ಲಿ ವಿಮ್ಸ್ ಗುತ್ತಿಗೆ ನೌಕರರ ಸಮಾವೇಶವನ್ನು ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮಕ್ಕೆ ಸಸಿಗೆ ನೀರು ಹಾಕುವುದರ ಮೂಲಕ ಸಹಾಯಕ ಕಾರ್ಮಿಕ ಆಯುಕ್ತರಾದ ಎಸ್.ಆರ್ ವೀಣಾ ಅವರು ಚಾಲನೆ ನೀಡಿದರು.
ಇದೇ ಸಂದರ್ಭದಲ್ಲಿ ತಮ್ಮ ಬೇಡಿಕೆಗಳಾದ ಗುತ್ತಿಗೆ ಕಾರ್ಮಿಕರಿಗೆ ಅವರ ದುಡಿಮೆಗೆ ತಕ್ಕ ಕಾನೂನು ಬದ್ಧ ಕನಿಷ್ಠ ವೇತನ ಖಾತ್ರಿ ಮಾಡಬೇಕ. ಅಗತ್ಯಕ್ಕನುಗುಣವಾಗಿ ಸ್ಕಾವೆಂಜರ್ಸ್ ಸಂಖ್ಯೆಯನ್ನು ಹೆಚ್ಚಿಸಲು ಸೂಕ್ತ ಕ್ರಮಕೈಗೊಳ್ಳಬೇಕು. ಎಲ್ಲಾ ಗುತ್ತಿಗೆ ನೌಕರರನ್ನು ಖಾಯಂಗೊಳಿಸಬೇಕು. ಕೋವಿಡ್ ಸಂದರ್ಭದಲ್ಲಿ ದುಡಿದ ಕಾಲೇಜು ಹಾಗೂ ಹಾಸ್ಟೆಲ್‌ಗಳ ಇನ್ನಿತರ ಗುತ್ತಿಗೆ ಕಾರ್ಮಿಕರಿಗೆ ಕೋವಿಡ್ ಭತ್ಯೆ ಕೂಡಲೆ ಪಾವತಿಸಬೇಕು. ಬಾಕಿಯಿರುವ ವೇತನವನ್ನು ಕೂಡಲೆ ಪಾವತಿಸಬೇಕು ಹಾಗೂ ತಿಂಗಳ ಮೊದಲ ವಾರದಲ್ಲೇ ಗುತ್ತಿಗೆ ಕಾರ್ಮಿಕರಿಗೆ ವೇತನ ನೀಡಬೇಕು ಎಂದು ಬೇಡಿಕೆಗಳಿಗಾಗಿ ಒತ್ತಾಯಿಸಿ ಸಹಾಯಕ ಕಾರ್ಮಿಕ ಆಯುಕ್ತರಿಗೆ ಹಾಗೂ ವಿಮ್ಸ್ ನಿರ್ದೇಶಕರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮುಖ್ಯ ಭಾಷಣಕಾರರಾಗಿ ಎಐಯುಟಿಯುಸಿ ರಾಜ್ಯ ಅಧ್ಯಕ್ಷರಾದ ಕೆ.ಸೋಮಶೇಖರ್, ವಿಮ್ಸ್ ಆಸ್ಪತ್ರೆಯ ಸೂಪರಿಡೆಂಟೆAಟ್ ಡಾ.ಯೋಗೇಶ್, ಪ್ರಭಾರಿ ನಿರ್ದೇಶಕರಾದ ಡಾ.ಕೃಷ್ಣ, ವಿಮ್ಸ್ ಗುತ್ತಿಗೆ ಸಂಘದ ಕಾರ್ಯದರ್ಶಿ ಎ.ದೇವದಾಸ್, ನೂರಾರು ಗುತ್ತಿಗೆ ನೌಕರರು, ಮುಖಂಡರಾದ ಡಾ.ಪ್ರಮೋದ್, ಶಾಂತಾ, ಸುರೇಶ್.ಜಿ, ಗುತ್ತಿಗೆ ನೌಕರರಾದ ಹುಲಗಪ್ಪ, ಲಕ್ಷ್ಮಿ, ಚಿಟ್ಟೆಮ್ಮ, ಹೊನ್ನೂರ್ ಬಿ ಮುಂತಾದವರು ಪಾಲ್ಗೊಂಡಿದ್ದರು.