ಮುಂದಿನ ದಿನಗಳಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದು ಕಷ್ಟ

0
426

ಬಳ್ಳಾರಿ: ಮುಖ್ಯಮಂತಿ ಯಡಿಯೂರಪ್ಪ ಅವರನ್ನು ಸಿಎಂ ಹುದ್ಧೆಯಿಂದ ಕೈ ಬಿಟ್ಟ ಪಕ್ಷದಲ್ಲಿ ಮುಂದಿನ ದಿನಗಳಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದು ಕಷ್ಟ ಎಂದು ಅಖಿಲ ಭಾರತ ಮಹಾಸಭಾದ ರಾಷ್ಟೀಯ ಉಫಾಧ್ಯಕ್ಷರು ಹಾಗೂ ರಾಜ್ಯಾಧ್ಯಕ್ಷರಾದ ಎನ್ . ತಿಪ್ಪಣ್ಣ ಅವರು ಭವಿಷ್ಯ ನುಡಿದರು.

ನಗರದಲ್ಲಿ ಅಖಿಲ ಭಾರತ ಮಹಾಸಭಾ ಬಳ್ಳಾರಿ ಜಿಲ್ಲಾ ಘಟಕ ವತಿಯಿಂದ ಶುಕ್ರವಾರ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು ವೀರಶೈವ, ಲಿಂಗಾಯಿತ ಜಾತಿ ಅಲ್ಲ, ಅದೊಂದು ಧರ್ಮ, ಇದಕ್ಕೆ ಯಾರು ಬೇಕಾದರೂ ಬರಬಹದು. ವೀರ ಶೈವ ಧರ್ಮಕ್ಕೇ ಅನ್ಯಾಯವಾಗದಂತೆ ತಡೆಯುವ ಸಲುವಾಗಿ ಮಹಾಸಭವಿದೆ. ಯಡಿಯೂರಪ್ಪ ಏನೂ ತಪ್ಪು ಮಾಡಿದ್ದಾರೆ. ಮುಖ್ಯಮಂತ್ರಿ ಆದಾಗ ಅವರಿಗೆ ವಯಸ್ಸು ಆಗಿರಲಿಲ್ಲವೇ…! ಆವಾಗ ಅಡ್ಡಿ ಬಾರದ ವಯಸ್ಸು ಈಗ ಏಕೆ ಅಡ್ಡ ಬಂತು..? ಎಂದು ಪ್ರಶ್ನಿಸಿದ ಅವರು ಯಡಿಯೂರಪ್ಪ ಅವರನ್ನು ಅಧಿಕಾರದ ಅವಧಿ ಪೂರ್ಣ ಮಾಡಲು ಬಿಡಬೇಕು, ಹಾಗೂ ರಾಜಿನಾಮೇ ಕೊಡುವಂತೆ ಒತ್ತಾಯಿಸಬಾರದು ಎಂದರು‌. ವಯಸ್ಸಿನ ಆಧಾರದ ಮೇಲೆ ಅವರನ್ನು ಸಿಎಂ ಹುದ್ಧೆಯಿಂದ ಹುದ್ಧೆಯಿಂದ ತೆಗೆಯುವುದಾದರೆ ಇದೂ ವೀರಶೈವ ಧರ್ಮದ ಜನರಿಗೆ ಮಾಡಿದ ಮೋಸ ಅಲ್ಲ, ಎಲ್ಲಾ ಜಾತಿ ಧರ್ಮದವರಾಗೂ ಮಾಡಿದ ಮೋಸ ಎಂದರು.

ಕಾಂಗ್ರೆ‌ಸ್ ಮುಖಂಡರಾದ ಶ್ಯಾಮನೂರು ಶಿವಶಂಕರಪ್ಪ ಅವರು ಸಹ ಯಡಿಯೂರಪ್ಪ ಸಿಎಂ ಹುದ್ಧೆಯಲ್ಲಿ ಮುಂದುವರೆಯಲಿ ಎಂದು ಹೇಳಿದ್ದಾರೆ. ಯತ್ನಾಳ್ ಯಾವುದೂ ಭ್ರಮೆಯಲ್ಲಿದ್ದಾರೆ ಅದರಿಂದ ಅವರು ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ ಎಂದರು.


ಚಾನಾಳ್ ಮಲ್ಲಿ ಕಾರ್ಜುನ್ ಮಾತನಾಡಿ ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ ಬಿಜೆಪಿಯನ್ನು ಅಧಿಕಾರಕ್ಕೆ ತಂದಿದ್ದು ಯಡಿಯೂರಪ್ಪ ಅವರನ್ನೂ ಕೇಂದ್ರ ರಾಜ್ಯ ಸರ್ಕಾರ ಗೌರವಯುತವಾಗಿ ನೆಡೆಸಿಕೊಳ್ಳಬೇಕು. ಇಲ್ಲವಾದರೆ ಆಂಧ್ರದಲ್ಲಿ ಆದಂತಹ ಬೆಳವಣಿಗೆಗಳು ಕರ್ನಾಟಕದಲ್ಲಿಯೂ ಆಗುವುದರಲ್ಲಿ ಯಾವ ಅನುಮಾನವಿಲ್ಲ ಎಂದರು.

ಈ ಸಂದರ್ಭದಲ್ಲಿ ಚನ್ನಬಸವ, ಬಸವರಾಜ್, ವಿರುಪಾಕ್ಷ, ರುದ್ರಯ್ಯ ಸ್ವಾಮಿ , ವನಜಾಕ್ಷಿ, ರೂಪಾ, ಗಂಗಾವತಿ ವಿರೇಶ್, ಹೇಮರೆಡ್ಡಿ ಇತರರು ಇದ್ದರು.

Previous articleಆಗಸ್ಟ್ ಅಂತ್ಯದೊಳಗಾಗಿ ಭಾರತಕ್ಕೆ ಅಪ್ಪಳಿಸಲಿದೆ ಕೋವಿಡ್ ಮೂರನೇ ಅಲೆ!
Next articleಜುಲೈ 25 ರಂದು ಕೆ-ಸೆಟ್ ಪರೀಕ್ಷೆ

LEAVE A REPLY

Please enter your comment!
Please enter your name here