ಕಸದ ಸಮಸ್ಯೆ ನಿವಾರಣೆಗೆ : ಡಂಗುರಾ ಸಾರಿ, ಮನೆ ಮನೆಗೆ ತೆರಳಿ ಕಸ ಹಾಕದಂತೆ ವಿನೂತನವಾಗಿ ಪ್ರಚಾರ ಮಾಡಿದ ಮಹಾನಗರ ಪಾಲಿಕೆಯ ಸದಸ್ಯ ವಿ.ಶ್ರೀನಿವಾಸುಲು
ಬಳ್ಳಾರಿ: ನಗರದ 35ನೇ ವಾರ್ಡಿನ ಇಂದಿರಾನಗರದಲ್ಲಿರುವ ಸರ್ಕಾರಿ ಶಾಲೆಯ ಮುಂದೆ ಪತಿನಿತ್ಯ ಅಲ್ಲಿಯ ಜನರು ಕಸವನ್ನು ತಂದು ಹಾಕುತ್ತಿದ್ದರು ಇದು ಮಹಾನಗರ ಪಾಲಿಕೆಗೆ ದೊಡ್ಡ ತಲೆನೋವಾಗಿತ್ತು ಆದ್ರೆ ನೂತನವಾಗಿ ಆಯ್ಕೆಯಾದ ಮಹಾನಗರ ಪಾಲಿಕೆಯ ಸದಸ್ಯ ವಿ.ಶ್ರೀನಿವಾಸುಲು (ಮಿಂಚು) ಅವರು ಈ ಸಮಸ್ಯೆಗೆ ಡಂಗುರಾ ಸಾರಿಸಿ ಕಸ ಹಾಕದಂತೆ ಮನೆ ಮನೆಗೆ ತೆರಳಿ ವಿನೂತನ ರೀತಿಯಲ್ಲಿ ಪ್ರಚಾರ ಮಾಡಿ ಅಲ್ಲಿನ ಸಮಸ್ಯೆ ಗೆ ಪರಿಹಾರ ಕಂಡುಕೊಂಡಿದ್ದಾರೆ.
ಹೌದು ಮಹಾನಗರ ಪಾಲಿಕೆಯ ಸಿಬ್ಬಂದಿ ಜೊತೆ ಡಂಗುರ ಸಾರಿಸಿ ಮನೆ ಮನೆಗೆತೆರಳಿ ಕಸ ಹಾಕಬಾರದು ಅದು ನಮ್ಮೆಲ್ಲರ ಶಾಲೆ ಅಲ್ಲಿ ನಿಮ್ಮ ಮಕ್ಕಳು ಓಡುತ್ತಿರುವುದರಿಂದ ಮಕ್ಕಳಿಗೆ ಅನಾರೋಗ್ಯ ಸಮಸ್ಯೆ ಬರುತ್ತದೆ ಎಂದು ತಿಳಿ ಹೇಳಿ ಪ್ರತಿದಿನ ಕಸವನ್ನು ಹೊಯ್ಯಲು ಮಹಾನಗರ ಪಾಲಿಕೆವತಿ ಯಿಂದ ಟ್ರಾಕ್ಟರ್ ಬರುತ್ತದೆ ಅದರಲ್ಲಿ ನಿಮ್ಮ ಕಸವನ್ನು ಹಾಕಬೇಕೆಂದು ಜನರಲ್ಲಿ ಜಾಗೃತಿ ಮೂಡಿಸುವ ಮೂಲಕ ಶ್ರೀನಿವಾಸಲು ಅವರು ಕಸದ ಸಮಸ್ಯೆ ನಿವಾರಣೆಗೆ ಪ್ರಮಾಣಿಕ ಪಯತ್ನ ಮಾಡಿ ಯಶ ಕಂಡಿದ್ದಾರೆ ಎಂದು ಹೇಳಬಹುದು.